ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.04: ವಿಶ್ವಪ್ರಸಿದ್ಧ ಹಂಪಿಯಲ್ಲಿ ಜು.13 14 ಹಾಗೂ 15 ರಂದು ಮೂರು ದಿನಗಳಕಾಲ ನಡೆಯಲಿರುವ ಜಿ.20 ಶೃಂಗಸಭೆಯ ಅಂಗವಾಗಿ ವಿಜಯನಗರ ಜಿಲ್ಲಾಡಳಿತ ಹಂಪಿಯಲ್ಲಿ ಭರದ ಸಿದ್ಧತೆ ನಡೆದಿದೆ.
ಶೃಂಗಸಭೆಯ ಹಿನ್ನೆಲೆಯಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಇತರೆ ಕಾರ್ಯಗಳು ಭರದಿಂದ ಸಾಗಿದೆ. ಕೇಂದ್ರ ಹಾಗೂ ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಹಂಪಿ ವಿಶ್ವಪರಂಪರೆ ಪ್ರದೇಶ ಅಭಿವೃದ್ಧಿ ನಿರ್ವಾಹಣಾ ಪ್ರಾಧಿಕಾರ, ಹಂಪಿ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳು ಹಂಪಿಯ ಎದರು ಬಸವಣ್ಣ, ವಿಜಯ ವಿಠ್ಠಲ ದೇವಾಲಯ ಹಾಗೂ ಭೂಮಿ ಮಟ್ಟದ ಶಿವಾಲಯ ಸೇರಿದಂತೆ ಪ್ರಧಾನಿ ಸೇರಿದಂತೆ ಗಣ್ಯರು ಹಾದು ಹೋಗುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ರಸ್ತೆ ಎರಡು ಬದಿಯ ಗಿಡಗಂಟೆಗಳನ್ನು ತೆರವುಗೊಳಿಸಲಾಗುತ್ತಿದೆ. ಕೆಲವಡೆ ಅನಿವಾರ್ಯವಾಗಿ ಜೆಸಿಬಿ, ಟ್ರ್ಯಾಕ್ಟರ್ ಬಳಿಸಿ, ಕಾಮಗಾರಿ ನಡೆಸಲಾಗುತ್ತಿದೆ. ಗೆಜ್ಜಲ ಮಂಟಪದಿಂದ ವಿಜಯವಿಠಲ ದೇವಾಲಯ, ರಾಣಿಸ್ನಾನ ಗೃಹದಿಂದ ಮಹಾನವಮಿ ದಿಬ್ಬ, ಹಜಾರರಾಮ ದೇವಾಲಯ ಹಾಗೂ ಭೂಮಿಮಟ್ಟದ ಶಿವಾಲಯದ ಹತ್ತಿರ ಹಾದು ಹೋಗಿರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
ಎರಡು ಹಂತದಲ್ಲಿ ನಡೆಯಲಿರುವ ಶೃಂಗ ಸಭೆಯಲ್ಲಿ ಮೊದಲು ಜು.9, 10,11ರಂದು ನಡೆಯಲಿರುವ ಸಭೆಯಲ್ಲಿ ಹಂಪಿಯ ಮೂಲಸೌಕರ್ಯ, ರಸ್ತೆ ಮತ್ತಿತರ ಅಭಿವೃದ್ಧಿ ಕುರಿತು ಚರ್ಚೆಯಲಿದೆ. ಜು.13ರಿಂದ ನಡೆಯುವ ಸಭೆಯಲ್ಲಿ ಪ್ರಧಾನಿ ನಂತರದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ಎರಡು ಸಭೆಯ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ತಮ್ಮ ಇಲಾಖೆ ಅನುದಾನ ಬಳಿಸಿಕೊಂಡು ಕಾಮಗಾರಿಗಳನ್ನು ನಡೆಸುತ್ತಿವೆ.
@12bc = ಏನೇನು:
ಕರ್ನಾಟಕ ಒಳಗೊಂಡು ಭಾತರದ ಪ್ರಮುಖ ಕಲಾವಿದರು ಸಾಂಸ್ಕೃತಿಕ ಕಲಾ ಅನಾವರಣಗೊಳಿಸುವವರು. ಶೃಂಗಸಭೆಯ ಮೊದಲು ಹಾಗೂ ನಂತರ ಈ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಲಿವೆ. ರಾತ್ರಿ ಹಂಪಿಯ ಸ್ಮಾರಕ ಬಳಿ ಬಂದ ಅತಿಥಿಗಳಿಗೆ ಪಾರಂಪರಿಕ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ವಿದೇಶಿ ಗಣ್ಯರಿಗಾಗಿ ವಿಶೇಷವಾಗಿ ತುಂಗಭದ್ರಾ ನದಿ ತೀರದಲ್ಲಿ ತುಂಗಾರಾತಿ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆ ನಡೆಯುತ್ತಿದೆ.
ಸಭೆ ನಡೆಸಲು ಹಂಪಿ ಭಾಗದ ಎದರು ಬಸವಣ್ಣ, ವಿಜಯ ವಿಠ್ಠಲ ಮಂದಿರ ಹಾಗೂ ಪುರಂದರ ಮಂಟಪ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದು, ಸ್ಥಳ ಪರಿಶೀಲನೆಯ ಬಳಿಕ ಈ ಮೂರರಲ್ಲಿ ಒಂದು ಸ್ಥಳವನ್ನು ನಿಖರಗೊಳಿಸಿ ಸಭೆಗೆ ಅಣಿಗೊಳಿಸಲಾಗುವುದು. ವಿವಿಧ ದೇಶಗಳ ಪ್ರಮುಖರು ಶೃಂಗ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಅವರಿಗಾಗಿ ಭಾರತೀಯ ಕಲೆ, ಸಂಸ್ಕೃತಿ, ಪಾರಂಪರಿಕತೆಯನ್ನು ಪರಿಚಯಿಸಿಕೊಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ.ಮಾತನಾಡಿ, ಇಂದಿನ ಸಭೆ ವಿಶೇಷವಾಗಿದ್ದು, ಜಿ-20 ಗೆ ಸಂಬಂಧಿಸಿದ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದು, ಕ್ರಮಕ್ಕೆ ಸೂಚಿಸಲಾಗಿದೆ.ಶೃಂಗಸಭೆಯಲ್ಲಿ ದೇಶ, ವಿದೇಶ ಸೇರಿದಂತೆ 200 ಕ್ಕೂ ಹೆಚ್ಚು ಅತಿಥಿಗಳು ಆಗಮಿಸಲಿದ್ದು, ಅವರಿಗಾಗಿ ಎಲ್ಲ ಸಿದ್ಧತೆಗಾಗಿ ಪ್ರಯತ್ನ ನಡೆದಿದೆ. ಭಾರತ ದೇಶದ ಗೌರವದ ಪ್ರತೀಕವಾಗಿರುವ ಶೃಂಗಸಭೆಯನ್ನು ಯಶ್ವಿಸಿಗೊಳಿಸಲು ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಟೊಂಕ ಕಟ್ಟಿ ನಿಂತಿದೆ.
ಹಂಪಿಯ ವಿಜಯವಿಠಲ ದೇವಸ್ಥಾನ ಮತ್ತು ಎದುರು ಬಸವಣ್ಣ ಮಂಟಪದ ಬಳಿ ನಡೆಸಲು ಉದ್ದೇಶಿಸಿದ್ದ ಜಿ.20 ಶೃಂಗಸಭೆಯನ್ನು ಹಂಪಿ ಅಣತಿ ದೂರದಲ್ಲಿರುವ ಕಮಲಾಪುರದ ಇವಿಲ್ ಬ್ಯಾಕ್ ಹೋಟೆಲ್‍ನಲ್ಲಿ ನಡೆಸಲು ಸಿದ್ಧತೆ ನಡೆದಿದೆ.
ಜುಲೈ ತಿಂಗಳಲ್ಲಿ ಮಳೆ ಬೀಳುವ ಸಾಧ್ಯತೆ ಹೆಚ್ಚು ಇರುವುದರಿಂದ ಹಂಪಿಯಲ್ಲಿ ನಡೆಸಲು ಉದ್ದೇಶಿಸಿದ ಸಭೆಯನ್ನು ಇವಿಲ್ ಬ್ಯಾಕ್ ಹೋಟೆಲ್ ನಡೆಸಲು ತೀರ್ಮಾನಿಸಲಾಗಿದೆ.
ಸಿದ್ದರಾಮೇಶ್ವರ
ಹಂಪಿ ವಿಶ್ವ ಪರಂಪರೆ ನಿರ್ವಹಣಾ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ