ಹಂಪಿಯಲ್ಲಿಯೂ ಆರಂಭವಾಯಿತು ಕೋತಿ ಆಟ: ಪ್ರವಾಸಿಗರಿಗೆ ಕಾಟ


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಜೂ24: ಹಲವು ದಿನಗಳ ಹಿಂದೆ ಹೊಸಪೇಟೆಯಲ್ಲಿ ಆರಂಭವಾಗಿದ್ದ ಹುಚ್ಚುಕೋತಿಯ ಕಾಟ ಇದೀಗ ಹಂಪಿಯಲ್ಲಿಯೂ ಆರಂಭವಾಗಿದ್ದು ಪ್ರವಾಸಿಗರು ಹಾಗೂ ಭಕ್ತವೃಂದದ ಮೇಲೆ ದಾಳಿ ನಡೆಸಿ ಹಲವರನ್ನು ಗಾಯಗೊಳಿಸುತ್ತಿರುವುದು ಆರಂಭವಾಗಿದೆ.
ಹಂಪಿ ಪ್ರವಾಸಿ ತಾಣ ಅಲ್ಲಿ ಮಂಗಗಳ ವಾಸಸ್ಥಾನ ಎಂಬುದು ಎಲ್ಲರಿಗೂ ತಿಳಿದಿದ್ದರೂ ಎಲ್ಲಡೆಗಳಲ್ಲಿ ಕೋತಿಗಳು ಕಾಣಿಸಿಕೊಂಡರು ಕೆಲವುಕಡೆಗಳಲ್ಲಿ ಮಾತ್ರ ವಸ್ತುಗಳನ್ನು ಕಸಿಯುವುದು ಬಿಟ್ಟು ಬೇರೇನು ದಾಳಿ ಮಾಡುತ್ತಿರಲಿಲ್ಲಾ, ಆದರೆ ಕಳೆದ 15 ದಿನಗಳಿಂದ ಹಂಪಿಯ ಯಂತ್ರೋದ್ಧಾರಕ ಪ್ರಾಣದೇವರ ಸನ್ನಿಧಿಯಲ್ಲಿ ಮಂಗಗಳ ಮಧ್ಯ ಒಂದು ಹುಚ್ಚು ಹಿಡಿದಿರುವ ಹಾಗೂ ಹಲವರ ಮೇಲೆ ಎರಗಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸುತ್ತಿರುವ ಕೋತಿಯೊಂದು ಸೇರಿಕೊಂಡು ಪ್ರವಾಸಿಗರಗೆ ತೊಂದರೆ ಕೊಡುತ್ತಿದೆ.
ಪೂಜಾ ಕೈಂಕರ್ಯಗಳನ್ನು ಮಾಡಿಕೊಂಡಿರುವ ಅರ್ಚಕರಿಂದ ಹಿಡಿದು ಭಕ್ತರು ಪ್ರವಾಸಿಗರಿಗೆ ಅತೀವ ತೊಂದರೆಯಾಗಿದ್ದು ಪೊಲೀಸರು ಸಹ ಕೋತಿಯ ಕಾಟದಿಂದ ಬೇಸತ್ತಿದ್ದಾರೆ. ಪ್ರಾಯಶಃ  ಅರಣ್ಯ ಇಲಾಖೆ ಕಾರ್ಯಚರಣೆ ಮಾಡಲು ಮಾಹಿತಿ ನೀಡಿದ್ದಾರೋ ಇಲ್ಲವೂ ತಿಳಿದಿಲ್ಲಾ, ಆದರೆ ನಿತ್ಯವೂ ಪ್ರವಾಸಿಗರು ಮಾತ್ರ ಕೋತಿಯ ಕಾಟದಿಂದ ಪರದಾಡುತ್ತಿದ್ದಾರೆ.
ಯಂತ್ರೋದ್ಧಾರಕಕ್ಕೆ ಪ್ರವೇಶದ್ವಾರದಲ್ಲಿ ಪಾಸ್ ಆಗುವುದರಿಂದ ಹಿಡಿದು ದೇವಸ್ಥಾನ ಪ್ರವೇಶಮಾಡಿ ಪೂಜಾಕಾರ್ಯಗಳನ್ನು ಮುಗಿಸಿಕೊಂಡು ಸುರಕ್ಷಿತ ವಾಪಸ್ ಆಗುವುದು ಕಷ್ಟವಾಗಿದ್ದು ಭಕ್ತರು ಜೀವ ಕೈಯಲ್ಲಿ ಹಿಡಿದು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಚೆ, ಇಚೆ ತಪ್ಪಿಸಿಕೊಳ್ಳಲು ವಿಶಾಲ ಪ್ರದೇಶವಿಲ್ಲದೆ ಬೆಟ್ಟಗುಡ್ಡಗಳಿರುವುದರಿಂದ ಮತ್ತೊಂದು ರೀತಿಯ ಅಪಾಯಕ್ಕೂ ಆಹ್ವಾನ ನೀಡಿದಂತಾಗಿದೆ.
ಕೋತಿಯ ಹಾವಭಾವಗಳನ್ನು ನೋಡಿ ದೇವರ ದರ್ಶನಕ್ಕಿಂತ ನಮ್ಮನು ನಾವು ರಕ್ಷಿಸಿಕೊಂಡು ಬಂದಿರುವುದೆ ಹೆಚ್ಚು ಎನ್ನುವಂತಾಗಿತು, ಅರಣ್ಯ ಇಲಾಖೆ ಸ್ಥಳೀಯ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ಮಾಡಿ ಮಂಗಗಳ ಜೊತೆ ಸೇರಿರುವ ಹುಚ್ಚು ಕೋತಿಯನ್ನು ಹಿಡಿಯುವ ಮೂಲಕ ಪ್ರವಾಸಿಗರು ಅದರಲ್ಲೂ ಮುಖ್ಯವಾಗಿ ಯಂತ್ರೊದ್ಧಾರಕ ಪ್ರಾಣದೇವರ ದರ್ಶನಕ್ಕೆ ಬರುವ ಭಕ್ತರನ್ನು ರಕ್ಷಿಸಬೇಕಾಗಿದೆ.
ಕಾಕುಬಾಳ ರಾಜೇಂದ್ರ
ಯಂತ್ರೋದ್ಧಾರಕ ಪ್ರಾಣದೇವರ ಭಕ್ತ.