ಹಂಪಿಗೆ ಹರಿದು ಜನಸಾಗರ, ಸೂರ್ಯೋದಯ ಕಣ್ತುಂಬಿಕೊಂಡ ಪ್ರವಾಸಿಗ

ಸಂಜೆವಾಣಿ ವಾರ್ತೆ
ಹೊಸಪೇಟೆ ಅ17: ನವರಾತ್ರಿ ಸಂಭ್ರಮ, ಸಾಲು ರಜೆ, ಕೋವಿಡ್ ನಿಯಮಾವಳಿಗೆ ಸಡಲಿಕೆ ಹಂಪಿಯತ್ತ ಜನಸಾಗರ ಹರಿದು ಬರಲಾರಂಭಿಸಿದೆ.
ರಾಜ್ಯದ ವಿವಿಧ ಪ್ರದೇಶಗಳಿಂದ ಹಂಪಿಯತ್ತ ಮುಖ ಮಾಡಿರುವ ಪ್ರವಾಸಿಗರು ಇದೀಗ ಪ್ರಾಜ್ಯವಸ್ತು ಪುರಾತ್ವದ ಇಲಾಖೆಯ ಹಂಪಿಯಲ್ಲಿ ಬೆಳಕಿನ ಅಲಂಕಾರ ಮಾಡಿದ್ದು ರಾತ್ರಿಯಲ್ಲಾ ಸುತ್ತಾಡಿ ವಾಸ್ತವ್ಯ ಮಾಡಿ ಸಂಭ್ರಮಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಂಪಿ ಜಗ ಸಂಗುಳಿಯಿಂದ ತುಂಬಿ ತುಳುಕಿತ್ತು.
ರಾತ್ರಿಯಲ್ಲಾ ಹಂಪಿಯ ವಿಜಯವಿಠ್ಠಲ, ಮಹಾನವಮಿ ದಿಬ್ಬಾ, ಕಲ್ಲಿನರಥ, ಲೋಟಸ್ ಮಹಾಲ್, ಸೇರಿದಂತೆ ವಿವಿಧ ಸ್ಮಾರಕಗಳಿಗೆ ತ್ರೀವರ್ಣ ಧ್ವಜದ ಆಕಾರದಲ್ಲಿ ಮಾಡಿದ ದೀಪಾಲಂಕಾರವನ್ನು ಕಣ್ತುಂಬಿಕೊಂಡರು.
ರಾತ್ರಿ ಹಂಪಿಯಲ್ಲಿ ವಾಸ್ತವ್ಯ ಹೂಡಿದ ಪ್ರವಾಸಿಗರು ಬೆಳ್ಳಂಬೆಳಿಗ್ಗೆ ಹಂಪಿಯ ಮಾತಂಗ ಪರ್ವತ, ಸೇರಿದಂತೆ ವಿರುಪಾಕ್ಷೇಶ್ವರ ದೇವಾಲಯದ ಬಳಿ, ಹಾಗೂ ಮಾಲ್ಯವಂತದ ಬಳಿಯ ಗುಡ್ಡದಲ್ಲಿಯೂ ಗುಂಪು ಗುಂಪಾಗಿ ಕುಳಿತು ಕುಟುಂಬದೊಂದಿಗೆ ಹಂಪಿಯ ಪರಿಸರದ ಸೂರ್ಯೋದಯವನ್ನು ಕಣ್ತುಂಬಿಕೊಂಡರು. ವೀಕೆಂಡ್ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಇಂದು ಸಹ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಜಮಾವಣೆಗೊಂಡಿದೆ.