ಹಂಪಯ್ಯನಾಯಕ್‌ಗೆ ಸಚಿವ ಸ್ಥಾನ ನೀಡಲು ಎನ್.ರೇಣುಕಾ ಒತ್ತಾಯ

ಸಿರವಾರ,ಮೇ.೧೭- ಜಿಲ್ಲೆ ಹಿರಿಯ ರಾಜಕಾರಣಿ, ೩ ನೇ ಶಾಸಕರಾಗಿ ಆಯ್ಕೆಯಾಗಿರುವ ಮಾನ್ವಿ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯನಾಯಕ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೇಸ್ ನ ಮಹಿಳಾ ಘಟಕದ ಸಿರವಾರ ತಾಲೂಕ ಅಧ್ಯಕ್ಷೆ ಎನ್.ರೇಣುಕಾ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಹಂಪಯ್ಯ ನಾಯಕರು ಪಕ್ಷದ ನಿಷ್ಠಾವಂತರಾಗಿದ್ದಾರೆ, ಮಂಡಲ ಪಂಚಾಯತಿ, ಎಪಿಎಂಸಿ ಸದಸ್ಯ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ೨೦೦೮ ರ ಕ್ಷೇತ್ರ ವಿಂಗಡಣೆಯಾದ ನಂತರ ಮಾನ್ವಿ ವಿಧಾನಸಭೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಗೆದ್ದು, ೨೦೧೩ ರಲ್ಲಿಯೂ ಎರಡನೆ ಬಾರಿ ಗೆದ್ದಿದ್ದಾರೆ. ೨೦೨೩ ರಲ್ಲಿಯೂ ಅದಿಕ ಮತಗಳ ಅಂತರದಿಂದ ಗೆದ್ದಿದ್ದಾರೆ.
ಕ.ಕರ್ನಾಟಕ ಭಾಗದಲ್ಲಿರುವ ಎಸ್.ಟಿ ಮಿಸಲು ಕ್ಷೇತ್ರದಲ್ಲಿ ಇವರು ಹಿರಿಯರಾಗಿದ್ದಾರೆ. ಈ ಹಿಂದೆ ಕಾಡಾ ಅದ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇದೇ. ಇವರು ಸಚಿವರಾದರೆ ಮಾನ್ವಿ- ಸಿರವಾರ ತಾಲೂಕಿನ ಅಭಿವೃದ್ದಿಗೆ ಸಹಕಾರಿಯಾಗುವುದರ ಜೊತೆಗೆ ಜಿಲ್ಲೆಯ ಅಭಿವೃದ್ದಿಗೂ ಸಹಕಾರಿಯಾಗುತ್ತದೆ. ಆದರಿಂದ ಹಂಪಯ್ಯನಾಯಕ ಹಿರಿತನವನ್ನು ಪರಿಗಣನೆಗೆ ತೆಗೆದುಕೊಂಡು ಮೊದಲ ಬಾರಿಯ ಸಂಪುಟ ರಚನೆಯಲ್ಲಿ ಸಚಿನ ಸ್ಥಾನ ನೀಡುವ ಮೂಲಕ ಜಿಲ್ಲೆಗೆ ಅನೇಕ ವರ್ಷಗಳಿಂದ ವಂಚಿತವಾಗಿದ ಸಚಿವ ಸ್ಥಾನವನ್ನು ನೀಡುವ ಮೂಲಕ ಜಿಲ್ಲೆಯನ್ನು ಪರಿಗಣನೆಗೆ ತೆಗೆದುಕೊಂಡಂತಾಗುತ್ತದೆ.