ಹಂಪನಗೌಡ ಬಾದರ್ಲಿಗೆ ಟಿಕೆಟ್ – ಬಸನಗೌಡ ಔಟ್

ಚಿದಾನಂದ ದೊರೆ
ಸಿಂಧನೂರು,ಏ.೧೬- ಅಂತು ಇಂತು ಅಳೆದು ತೂಗಿ ಕಾಂಗ್ರೆsಸ್ ಹೈಕಮಾಂಡ್ ಹಂಪನಗೌಡ ಬಾದರ್ಲಿಗೆ ಟಿಕೆಟ್ ನೀಡಿದೆ ಟಿಕೆಟ್ ನಿಂದ ಬಸನಗೌಡ ಬಾದರ್ಲಿ ಔಟ್ ಯಾಗಿದ್ದಾರೆ ಟಿಕೆಟ್ ನಿಂದ ವಂಚಿತರಾದ ಬಸನಗೌಡ ಬಾದರ್ಲಿ ನಡೆ ಮುಂದೇನು ಎನ್ನುವ ಚರ್ಚ ಕ್ಷೇತ್ರದಲ್ಲಿ ಹರಿದಾಡ ತೊಡಗಿದೆ.
ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯ ಬಂತು ಎನ್ನುವ ಹಾಗೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಭಾಗೀರಥ ಪ್ರಯತ್ನ ಮಾಡಿ ಟಿಕೇಟ್ ತಂದು ತಮ್ಮ ದಮ್ಮು ತಾಕತ್ತು ಎನೆಂಬದನ್ನು ತೋರಿಸಿ ಟಿಕೆಟ್ ತರುವಲ್ಲಿ ಯಶಸ್ಸಿಯಾಗಿದ್ದು ಮುಂದೆ ಚುನಾವಣೆಯಲ್ಲಿ ತಮ್ಮ ಗೆಲವಿಗಾಗಿ ಯಾವ ರಣ ತಂತ್ರ ಉಡುತ್ತಾರೆ ಎನ್ನುವದನ್ನು ಕಾಯ್ದ ನೋಡಬೇಕಾಗಿದೆ.
ನಾಲ್ಕು ಸಲ ಶಾಸಕರಾಗಿ ನಿಗಮ ಮಂಡಳಿಯ ಅಧ್ಯಕ್ಷರಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ ಅವರು ಜಿಲ್ಲೆಯಲ್ಲಿ ಪಕ್ಷದ ಹಿರಿಯ ನಾಯಕರಾಗಿದ್ದು ಅಲ್ಲದೆ ತಾಲೂಕಿನಲ್ಲಿ ಪ್ರಶ್ನಾತೀತ ಮುಖಂಡರಾಗಿದ್ದಾರೆ ಎನ್ನುವದರಲ್ಲಿ ಎರಡು ಮಾತಿಲ್ಲ. ಅವರು ಹೇಳಿದ್ದೆ ಶಾಸನ ವೇದ ವಾಕ್ಯವಾಗಿದೆ ಹಾಗಾಗಿಯೆ ತಾಲ್ಲೂಕಿನಲ್ಲಿ ಕಾಂಗ್ರೆಸ ಬೇರು ಹಾಳವಾಗಿ ಗಟ್ಟಿಯಾಗಿ ಬೇರುಉರಿದೆ.
೨೦೨೩ ರ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷದ ಟಿಕೇಟ್ ಗಾಗಿ ಹಂಪನಗೌಡ ಹಾಗೂ ಬಸನಗೌಡ ಇವರಿಬ್ಬರು ಜಿದ್ದಿಗೆ ಬಿದ್ದು ಈಸಲ ಟಿಕೇಟ ನಿನಗಾ ಇಲ್ಲ ನನಗಾ ನೋಡುಣ ಎನ್ನುವ ಹಠಕ್ಕೆ ಬಿದಿದ್ದರು ಇದರಿಂದ ಪಕ್ಷದ ಅವರ ಅಭಿಮಾನಿಗಳು ಕಾರ್ಯಕರ್ತರು ಗೊಂದಲಕ್ಕೆ ಇಡಾಗಿದ್ದರು.
ಹಂಪನಗೌಡರಿಗೆ ಟಿಕೆಟ್ ಸಿಕ್ಕಿದೆ ಇಲ್ಲ ಬಸನಗೌಡರಿಗೆ ಟಿಕೆಟ್ ಗ್ಯಾರಂಟಿ ಎನ್ನುವ ಸುದ್ದಿ ಪತ್ರಿಕೆ ಹಾಗೂ ಟಿವಿಗಳಲ್ಲಿ ಹರಿದಾಡಿ ತಾಲ್ಲೂಕಿನ ಜನರಿಗೆ ಉಚಿತ ಮನರಂಜನೆ ನೀಡುವ ಜೊತೆಗೆ ಇವರಿಬ್ಬರ ಅಭಿಮಾನಿ ಹಾಗೂ ಕಾರ್ಯ ಕರ್ತರಿಗೆ ನಿದ್ದೆ ಬಾರದಂತಾಗಿದ್ದು ಸತ್ಯ
ಪಕ್ಷದ ಉನ್ನತ ಸ್ಥಾನದಲ್ಲಿರುವ ಮುಖಂಡರ ಖಚಿತ ಮಾಹಿತಿಯ ಮೇರೆಗೆ ಹಂಪನಗೌಡರಿಗೆ ಟಿಕೆಟ್ ಪಕ್ಷ ಬಸನಗೌಡರಿಗೆ ಶಾಕ್ ಎನ್ನುವ ಮೊದಲ ಸುದ್ದಿ ಸಂಜೆವಾಣೆಯಲ್ಲಿ ಪ್ರಕಟಿಸಲಾಗಿತ್ತು ಇದರಿಂದ ಹಂಪನಗೌಡರ ಅಭಿಮಾನಿ ಗಳಿಗೆ ಸಿಹಿ ಸುದ್ದಿ ಯಾದರೆ ಬಸನಗೌಡ ಅಭಿಮಾನಿಗಳಿಗೆ ಕಹಿ ಸುದ್ದಿ ಯಾಗಿ ಸ್ವಲ್ಪ ಸಿಟ್ಟಾಗಾಗಿದ್ದು ಕಂಡು ಬಂತು ಹಂಪನಗೌಡ ಬಾದರ್ಲಿ ಗೆ ಟಿಕೇಟ ಕೊಡಿಸಲು ಇವರೇನು ಕಾಂಗ್ರೆಸ್ ಹೈಕಮಾಂಡ್ ಎನ್ನುವ ಮಾತುಗಳು ಟೀಕೆಯ ರೂಪದಲ್ಲಿ ಕೇಳಿ ಬಂದವು.
ಪತ್ರಿಕೆಯ ನಿರೀಕ್ಷೆಯಂತೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿಗೆ ಟಿಕೆಟ್ ಸಿಕ್ಕಿದೆ ಬಸನಗೌಡ ಬಾದರ್ಲಿಗೆ ಗೇಟ್‌ಪಾಸ್ ನೀಡಲಾಗಿದೆ. ಈ ಸಲ ಟಿಕೆಟ್ ತಂದು ಚುನಾವಣೆಯಲ್ಲಿ ನಿಂತು ತಮ್ಮ ಶಕ್ತಿ ಸಾಮರ್ಥ್ಯ ತೋರಿಸಬೇಂದು ನಿರ್ಧಾರ ಮಾಡಿದ್ದು ಈಗ ಟಿಕೆಟ್‌ನಿಂದ ಬಸನಗೌಡ ವಂಚಿತರಾಗಿದ್ದು ಪಕ್ಷದಲ್ಲಿ ಇದ್ದು. ಹಂಪನಗೌಡರಿಗೆ ಬೆಂಬಲ ನೀಡುತ್ತಾರಾ ಇಲ್ಲ ಬಂಡಾಯ ಗೆದ್ದು ಪಕ್ಷೇತರರಾಗಿ ಚುನಾವಣೆಯಲ್ಲಿ ನಿಲ್ಲುತ್ತಾರೆ ಎನ್ನುವ ನಡೆ ಮುಂದೆ ಕಾದು ನೋಡಬೇಕು ಯಾವುದೇ ಸಿಟ್ಟು ಇಲ್ಲದೆ ಎಲ್ಲ ಮರೆತು ಬಸನಗೌಡರನ್ನು ಜೊತೆಯಾಗಿ ಕರೆದು ಕೊಂಡು ಚುನಾವಣೆಯ ಮಾಡುವ ದೊಡ್ಡ ಮನಸ್ಸು ಹಂಪನಗೌಡ ಮಾಡಿದರೆ ಒಳ್ಳೆಯದು.