
ಸಿಂಧನೂರು,ಮಾ.೧೩- ನನ್ನ ಅವಧಿಯಲ್ಲಿ ಕ್ಷೇತ್ರದ ರೈತರ ಬೆಳೆಗಳಿಗೆ ನೀರಿನ ಕೊರತೆಯಾಗದಂತೆ ನೋಡಿ ಕೊಂಡಿದ್ದೇನೆ.
ನೀರಿಗಾಗಿ ರೈತರ ಹೋರಾಟ ಮಾಡುವಾಗ ರೈತರಿಗೆ ನೀರು ಕೊಡಿಸುವ ಬದಲು ಅಮೇರಿಕಾಕ್ಕೆ ಹೋಗಿ ರೈತರಿಗೆ ಮೋಸ ಮಾಡಿದ್ದು, ಇದೆ ಹಂಪನಗೌಡ ಬಾದರ್ಲಿ ಎನ್ನುವದು ರೈತರಿಗೆ ಗೊತ್ತಿದೆ ಎಂದು ಶಾಸಕ ವೆಂಟರಾವ ನಾಡಗೌಡ ಬಾದರ್ಲಿ ವಿರುದ್ಧ ಕಿಡಿ ಕಾರಿದರು.
ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಂಪನಗೌಡರು ಶಾಸಕರಾಗಿದ್ದಾಗ ನೀರು ಇಲ್ಲದೆ ಬೆಳೆ ಒಣಗುತ್ತೀವೆ. ನೀರು ಬೇಕು ಎಂದು ರೈತರು ಬೀದಿಗಿಳಿದು ಹೋರಾಟ ಮಾಡಿದರು.
ಐಸಿಸಿ ಸಭೆ ಇದ್ದರು ಸಹ, ಮಂತ್ರಿ ತನ್ವಿರ ಶೇಠ್‌ರನ್ನು ಕರೆದುಕೊಂಡು ನಗರದ ಶ್ರೀಶಕ್ತಿ ಭವನದಲ್ಲಿ ಕಾರ್ಯಕ್ರಮದಲ್ಲಿ ಕಾಲಹರಣ ಮಾಡಿ ಐಸಿಸಿ ಸಭೆಗೆ ಹೋಗಲಿಲ್ಲ ಇದು ಇವರಿಗೆ ರೈತರ ಬಗ್ಗೆ ಇರುವ ಕಾಳಜಿನಾ ಎಂದರು.
ನೀರಿನ ಲಭ್ಯತೆ ಆಧಾರದ ಮೇಲೆ ಐಸಿಸಿ ಸಭೆ ಮಾಡಿದ್ದು, ಸಭೆಯಲ್ಲಿ ಐಸಿಸಿ ಅಧ್ಯಕ್ಷರು ಸಚಿವರು ಸಂಸದರು ಶಾಸಕರು ರೈತ ಸಂಘದ ಮುಖಂಡರು ಭಾಗವಸಿದ್ದು, ರೈತರ ಬಗ್ಗೆ ಕಾಳಜಿ ಇದ್ದರೆ ಹಂಪನಗೌಡ ಸಭೆಗೆ ಬಂದು ಸಲಹೆ ಸೂಚನೆ ನೀಡುಲು ಇವರಿಗೆ ಯಾರು ಬೇಡ ಎಂದರು. ಸಭೆಗೆ ಬಾರದೆ ಮನೆಯಲ್ಲಿ ಕುಳಿತು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಇವರು ನೀರಿನ ತಜ್ಞರಾ? ಅದು ದೊಡ್ಡ ಮಹಾ ಮೇಧಾವಿಯಂತೆ ಮಾತನಾಡುತ್ತಾರೆ ಎಂದು ನಾಡಗೌಡ ಹಂಪನಗೌಡರ ವಿರುದ್ಧ ವ್ಯಂಗ್ಯ ಮಾಡಿದರು.
ನಾನೊಬ್ಬನೇ ಐಸಿಸಿ ಸಭೆಯಲ್ಲಿ ಕುಳಿತು ತೀರ್ಮಾನ ಮಾಡಿಲ್ಲ, ಎಲ್ಲರು ಸೇರಿ ರೈತರ ಹಿತದೃಷ್ಟಿಯಿಂದ ನೀರಿನ ಲಭ್ಯತೆ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹಂಪನಗೌಡ ನೀರಿನ ತಜ್ಞನಾ ದೊಡ್ಡ ಮೇದಾವಿಯಂತೆ ಮಾತನಾಡುತ್ತಾರೆ. ೫ ವರ್ಷ ಮನೆಯಲ್ಲಿ ಕುಳಿತು ಈಗ ಚುನಾವಣೆ ಹತ್ತಿರ ಬಂದ ಕಾರಣ ಇವರಿಗೆ ರೈತರು ನೆನಪು ಆಗಿದ್ದಾರೆ. ಇವರ ಬಣ್ಣದ ಮಾತುಗಳಿಗೆ ರೈತರು ಮರುಳಾಗುವದಿಲ್ಲ.
ಐಸಿಸಿ ಸಭೆಯ ತೀರ್ಮಾನದಂತೆ ಮಾ. ೩೧ ತನಕ ನೀರು ಬಿಡಲಾಗುತ್ತದೆ. ಅಲ್ಲದೆ ಭದ್ರದಿಂದ ೩ ಟಿ.ಎಂಸಿ ನೀರು ಬಿಟ್ಟು ರೈತರ ಬೆಳೆಯನ್ನು ರಕ್ಷಣೆ ಮಾಡಲಾಗುತ್ತಿದೆ. ಆದ್ದರಿಂದ ರೈತರು ಆತಂಕ ಪಡಬಾರದು ಎಂದು ಶಾಸಕರು ರೈತರಲ್ಲಿ ಮನವಿ ಮಾಡಿಕೊಂಡರು.
ತಾಲೂಕಿನ ಗೊಮರ್ಸಿ ಗ್ರಾಮದ ಸೋಮು, ಬಸವ, ತೌಸೀಪ್, ನಾಗರಾಜ, ಖಾಜಾಸಾಬ,ಸೇರಿದಂತೆ ನೂರಾರು ಯುವಕರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ನನ್ನ ಹಾಗೂ ಪಕ್ಷದ ಮೇಲೆ ಅಭಿಮಾನ ಇಟ್ಟು ನನ್ನ ಅಭಿವೃದ್ಧಿ ಕೆಲಸ ಮೆಚ್ಚಿ ಯುವಕರು ಕಾಂಗ್ರೆಸ್ ಬಿಟ್ಟು ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸಿ ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಚುನಾವಣೆ ಸಮಯ ಕಡಿಮೆ ಇದೆ. ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೋಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಈಗ ಟೆಂಡರ್ ಕರೆದು ಮಾಡುವ ಕೆಲಸಗಳನ್ನು ನನ್ನ ಅವಧಿ ಎಂದು ಹಂಪನಗೌಡ ಹೇಳುತ್ತಿದ್ದು, ಹಾಸ್ಯಾಸ್ಪದವಾಗಿದೆ. ಒಂದು ಸುಳ್ಳನ್ನು ನೂರು ಸಲ ಹೇಳಿ ಅದನ್ನೆ ಸತ್ಯ ಮಾಡಲು ಹೊರಟಿದ್ದಾರೆ. ಅದೆ ಸುಳ್ಳೆ ಅವರಿಗೆ ಮುಳುವಾಗಲಿದೆ ಎಂದರು.
ಜೆಡಿಎಸ್ ತಾಲೂಕಾಧ್ಯಕ್ಷರಾದ ಬಸವರಾಜ ನಾಡಗೌಡ, ಮುಖಂಡರಾದ ಧರ್ಮನಗೌಡ, ಮಲ್ಕಾಪೂರ ಚಂದ್ರು, ಭೂಪಾಲ್ ನಾಡಗೌಡ, ವೆಂಕಟೇಶ ನಂಜಲದಿನ್ನಿ ಸೇರಿದಂತೆ ಇನ್ನಿತರರು ಇದ್ದರು.