
ರಾಯಚೂರು,ಮೇ.೧೯- ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಐದನೇ ಬಾರಿ ಗೆದ್ದಿರುವ ಪಕ್ಷದ ಹಿರಿಯ ರಾಜಕೀಯ ನಾಯಕ ಹಾಲಿ ಶಾಸಕರಾದ ಹಂಪನಗೌಡ ಬಾದರ್ಲಿಯವರಿಗೆ ಕಾಂಗ್ರೆಸ್ ಸರ್ಕಾರ ರಚನೆಯ ಮೊದಲ ಹಂತದಲ್ಲಿ ಸಚಿವ ಸ್ಥಾನ ನೀಡಬೇಕೆಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಬಸವರಾಜ್ ರೆಡ್ಡಿಯವರು ಒತ್ತಾಯ ಮಾಡಿದರು.
ಇಂದು ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತಾನಾಡಿದ ಜಿ ಬಸವರಾಜ್ ರೆಡ್ಡಿಯವರು ಐದು ವರ್ಷ ಪೂರ್ಣವಾಗಿ ಸಚಿವ ಸ್ಥಾನ ನೀಡದೆ ರಾಯಚೂರು ಜಿಲ್ಲೆಯನ್ನು ಇಲ್ಲಿಯವರಿಗೆ ಕಡೆಗಣಿಸಲಾಗಿದ್ದು,ಈ ಬಾರಿಯಾದರು ನಮ್ಮ ಜಿಲ್ಲೆಯ ಹಿರಿಯ ರಾಜಕಾರಣಿ ಅನುಭವಿ ಶಾಸಕರಾದ ಹಂಪನಗೌಡ ಬಾದರ್ಲಿಯವರಿಗೆ ಸಚಿವ ಸ್ಥಾನ ನೀಡಬೇಕು, ಒಂದು ವೇಳೆ ಇವರಿಗೆ ಕೈ ತಪ್ಪಿದರೆ ಈ ಬಾರಿ ಜಿಲ್ಲೆಯಲ್ಲಿ ಗೆದ್ದಿರುವ ನಾಲ್ಕು ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಕೊಟ್ಟರು ತೊಂದರೆ ಇಲ್ಲಾ ಎಂದು ಹೇಳಿದರು.
ಈ ಸಂಧರ್ಭದಲ್ಲಿ ನೂತನವಾಗಿ ಆಯ್ಕೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಹಾಗೂ ಚುನಾವಣೆಯಲ್ಲಿ ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ,ಮತದಾರರಿಗೆ ಕೃತಜ್ಞತೆಗಳನ್ನು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಅಸ್ಲಾಂ ಪಾಷಾ,ಜಿ ಶಿವಮೂರ್ತಿ,ಅಬ್ದುಲ್ ಕರೀಂ,ರುದ್ರಪ್ಪ ಅಂಗಡಿ,ಅಮರೇಗೌಡ ಹಂಚಿನಾಳ,ಜಯಂತ್ ರಾವ್ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.