ಹಂಪನಗೌಡರಿಗೆ ಶಾಕ್ ನೀಡಿದ ಬಸನಗೌಡ ಬಾದರ್ಲಿ

ಚಿದಾನಂದ ದೊರೆ
ಸಿಂಧನೂರು.ಜ೧೪- ಮಾಜಿ ಶಾಸಕ ಹಂಪನಗೌಡ ಬಾದರ್ಲಿ ವಶದಲ್ಲಿದ್ದ ಸಿಂಧನೂರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಕಸಿದುಕೊಳ್ಳುವ ಮೂಲಕ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಬಸನಗೌಡ ಬಾದರ್ಲಿ ಹಂಪನಗೌಡ ಬಾದರ್ಲಿರಿಗೆ ಶಾಕ್ ನೀಡಿದ್ದಾರೆ. ಇದರಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಗೊಂದಲಕ್ಕಿಡಾಗಿದ್ದು ಕಂಡುಬಂದಿದೆ. ಇದು ಸಿನಿಮಾದ ಟ್ರೈಲ್ಲರ್ ಮುಂದೆ ಅಭಿ ಸಿನಿಮಾ ಬಾಕಿ ಹೈ ಎಂದು ಬಸನಗೌಡ ಬಾದರ್ಲಿ ಟೀಮ್ ಹೇಳುತ್ತಿದೆ. ಹಂಪನಗೌಡ ಬಾದರ್ಲಿ ನಡೆ ಮುಂದೇನು ಎಂಬುದು ತೀರ್ವ ಕುತೂಹಲ ಮೂಡಿಸಿದೆ.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಬಸನಗೌಡ ಬಾದರ್ಲಿ ಎರಡು ಬಣಗಳ ಒಣ ರಾಜಕೀಯ ಬಡಿದಾಟ ತಾಲೂಕಿನಲ್ಲಿ ನಡೆಯುತ್ತಿದ್ದು ಈ ಎರಡು ಬಣಗಳ ಕಾದಾಟದಿಂದ ಗಾಯ ಮಾಡಿಕೊಂಡಿರುವ ಮುಖಂಡರಿಗೆ ಹೈಕಮಾಂಡ ಮಲಮ್ ಹಚ್ಚುವ ಬದಲು ಗಾಯದ ಮೇಲೆ ಬರೆ ಎಳೆದಿದೆ ಎನ್ನುವಂತೆ ಪಂಪನಗೌಡ ಬಾದರ್ಲಿಯನ್ನು ಸಿಂಧನೂರು ಗ್ರಾಮೀಣ ಬ್ಲಾಕ್‌ಕಾಂಗ್ರೆಸ್ಸ ಅಧ್ಯಕ್ಷ ಸ್ಥಾನ ದಿಂದ ತೆಗೆದು ಶಿವಕುಮಾರ ಜವಳಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.
೧೫ ವರ್ಷಗಳ ಕಾಲ ನಗರ ಹಾಗೂ ಗ್ರಾಮೀಣ ಬ್ಲಾಕ್‌ಕಾಂಗ್ರೆಸ್ಸ ಅಧ್ಯಕ್ಷರಾಗಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು, ಬಸನಗೌಡ ಬಾದರ್ಲಿ ಅದನ್ನು ಕಿತ್ತುಕೊಂಡು ತಮ್ಮ ಹಿಂಬಾಲಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಮೇಲುಗೈಯಿ ಸಾಧಿಸಿ ತಾತನಿಗೆ ಮೊಮ್ಮಗ ಮುಟ್ಟಿನೋಡಿ ಕೊಳ್ಳವಂತೆ ಮಾಡಿದ್ದು ಇದರಿಂದ ಹಂಪನಗೌಡ ಬಾದರ್ಲಿಗೆ ನಿದ್ದೆ ಬಾರದಂತಾಗಿದೆ.
ಬಸನಗೌಡ ಬಾದರ್ಲಿ ತಮ್ಮ ಹಿಂಬಾಲಕರನ್ನು ಪಕ್ಷದ ಪದಾಧಿಕಾರಿಗಳನ್ನಾಗಿ ಮಾಡಿಕೊಂಡು ಬಂದಾಗ ಅದಕ್ಕೆ ನಗರ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಒಪ್ಪಿಗೆ ಇಲ್ಲದೆ ಇರುವದರಿಂದ ಆ ಪಟ್ಟಿ ಅದಿಕೃತವಾಗದೆ ಅನಧಿಕೃತ ವಾಗಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಪತ್ರಿಕಾಗೋಷ್ಠಿ ನಡೆಸಿ ಅಸಮಾಧಾನ ಹೊರಹಾಕಿದ್ದಾಗ ಇದರಿಂದ ಬಸನಗೌಡ ಬಾದರ್ಲಿ ಹಾಗೂ ಅವರ ಟೀಮ ತೀರ್ವ ಮುಜುಗರಕ್ಕೆ ಒಳಗಾಗಿತ್ತು, ಗ್ರಾಮೀಣ ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷರಾಗಿದ್ದ ಪಂಪನಗೌಡ ಬಾದರ್ಲಿಯನ್ನು ತೆಗೆದುಹಾಕಿ ತಮ್ಮ ಪರಮ ಆಪ್ತರಾದ ಶಿವಕುಮಾರ ಜವಳಿಯನ್ನು ನೇಮಕ ಮಾಡಿಕೊಳ್ಳುವ ಮೂಲಕ ಹಂಪನಗೌಡ ಬಾದರ್ಲಿ ವಿರುದ್ಧ ಬಸನಗೌಡ ಬಾದರ್ಲಿ ಮೀಸೆ ತಿರಗಿ ನಗೆಯ ಕಡಲಿನಲ್ಲಿ ತೇಲಿದರೆ ಹಂಪನಗೌಡ ಟೀಮ ತೀರ್ವ ಮುಜುರ ಅನುಭವಿಸಿ ಮುಖಭಂಗ ಅನುಭವಿಸುವಂತಿಗಿದೆ.
ಚುನಾವಣೆಯ ಹತ್ತಿರ ಇರುವಾಗಲೆ ಹೊಸ ಪದಾಧಿಕಾರಿಗಳ ಪಟ್ಟಿ ಅವಶ್ಯಕತೆ ಇತ್ತಾ ಇದು ಎಷ್ಷು ಸರಿ ಇದರಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈಗ ಗೊಂದಲಕ್ಕೆ ಇದಾಗಿದ್ದು ಕಂಡುಬಂದಿದೆ. ಇದರಿಂದ ಹಂಪನಗೌಡ ಹಾಗೂ ಬಸನಗೌಡ ಪ್ರತೇಕವಾಗಿವೆ ಎನ್ನುವದು ಇದರಿಂದ ತಿಳಿದುಬಂದಿದೆ ಮುಂದೆ ಹಂಪನಗೌಡ ಬಾದರ್ಲಿ. ಏನು ಮಾಡುತ್ತಾರೊ ಎನ್ನುವದು ಕುತೂಹಲ ಮುಡಿಸಿದೆ ಆದರೆ ಹಂಪನಗೌಡ ಟೀಮ ಮಾತ್ರ ಬಸನಗೌಡ ವಿರುದ್ಧ ಕತ್ತಿ ಮಸೆಯುತ್ತಿದೆ.