ಹಂದ್ಯಾಳು ಗ್ರಾ.ಪಂ.ಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.4: ತಾಲೂಕಿನ ಹಂದ್ಯಾಳು ಗ್ರಾಮ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಅಧ್ಯಕ್ಷರಾಗಿ ಯು.ಗಣೇಶ್, ಉಪಾಧ್ಯಕ್ಷರಾಗಿ ಹೆಚ್.ವಸಂತಮ್ಮ ಆಯ್ಕೆಯಾಗಿದ್ದಾರೆ.
ಒಟ್ಟು 13 ಸದಸ್ಯರಿರುವ ಗ್ರಾ.ಪಂ.ನಲ್ಲಿ ಅದ್ಯಕ್ಷ ಸ್ಥಾನಕ್ಕೆ ಗಣೇಶ ವಿರುದ್ಧ ಕೆ.ಶಾಂತಿ ಸ್ಪರ್ಧೆ ಮಾಡಿದ್ದರು. ಓಟಿಂಗ್ ನಡೆದು ಗಣೇಶ್ 8 ಮತಪಡೆದರೆ ಶಾಂತಿ ಅವರಿಗೆ 5 ಮತಗಳು ಬಂದವು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ವಸಂತಮ್ಮ ವಿರುದ್ಧ ಹುಲಿಗೆಮ್ಮ ಸ್ಪರ್ಧಿಸಿ ಸೋಲು ಕಂಡರು. ಇವರಿಗೂ ಕ್ರಮವಾಗಿ 8-5 ಮತಗಳು ಬಂದಿದ್ದವು.
ಆಯ್ಕೆಯಾದವರು ಕಾಂಗ್ರೆಸ್ ಪಕ್ಷ ಬೆಂಬಲಿತರಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಹೆಚ್.ಕೆ.ಯೋಗೇಶ್ವರ್ ಕಾರ್ಯನಿರ್ವಹಿಸಿದರು. ಪಿಡಿಓ ಎಂ.ಕೆ. ಸಂಧ್ಯಾರಾಣಿ, ಡಿ.ಇ.ಓ ಹೆಚ್.ಅಂಜಿನಪ್ಪ ಮೊದಲಾದವರು ಇದ್ದರು.