
ಮಾನವರ ಬಾಳನ್ನು ಪರಿಶುದ್ಧಗೊಳಿಸುವ ಮುಖೇಣ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಅನೇಕ ಶರಣರಲ್ಲಿ ಹಂದ್ಯಾಳ್ ಗ್ರಾಮದಲ್ಲಿ ಜನಿಸಿದ ಎಮ್ಮಿಗನೂರಿನ ಜಡೇಸಿದ್ದೇಶ್ವರರು ಒಬ್ಬರು. ಜನ ಸಾಮಾನ್ಯರಲ್ಲಿದ್ದ ಮೌಢ್ಯತೆ, ಅಂಧಕಾರ, ಅಜ್ಞಾನ, ಕಂದಾಚಾರಗಳನ್ನು ತೊಡೆದು ಹಾಕುವ ಮಹಾಮಣಿ ಮಹೋನ್ನತ್ತ ಶ್ರೀಜಡೇಸಿದ್ಧೇಶ್ವರರು ಬಳ್ಳಾರಿ ತಾಲೂಕಿನ ಹಂದ್ಯಾಳ್ ಗ್ರಾಮದ ಹಿರೇಮಠದ ಚನ್ನ ಬಸವಯ್ಯ ಹಾಗೂ ನೀಲಮ್ಮ ದಂಪತಿಯ ಗರ್ಭದಲ್ಲಿ ಜನಿಸಿದರು.
ಬಾಲ್ಯದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಮೈಗೂಡಿಸಿಕೊಂಡಿದ್ದ ಶ್ರೀ ಜಡೇಸಿದ್ಧೇಶ್ವರರು ಗುರುಗಳಾದ ತೆಕ್ಕಲಕೋಟೆಯ ಶ್ರೀಸಂಗಮೇಶ್ವರ ಶಿವಾಚಾರ್ಯರಿಂದ ದೀಕ್ಷೆ ಪಡೆದು ವೀರಶೈವ ಧರ್ಮದ ತತ್ವ-ಸಿದ್ಧಾಂತಗಳನ್ನು ಅರಿತುಕೊಂಡರು.
ಯೌವನಾವಸ್ತೆಗೆ ಬಂದರೂ, ಸಾಮಾನ್ಯರಿಗೆ ಇರಬೇಕಾದ ಲೌಕಿಕ ವಿಷಯದ ಕಡೆಗೆ ಹೆಚ್ಚಿನ ಗಮನ ಹರಿಸಲಿಲ್ಲ. ತಂದೆಯವರ ಪ್ರಯತ್ನದಿಂದ ಗುಳ್ಳೇದ ಗಾದಿಲಿಂಗಪ್ಪ ಶರಣರಿಂದ ಸದ್ಭೂದಿತನಾಗಿ ಗೃಹಸ್ಥಾಶ್ರಮ ಸ್ವೀಕರಿಸಿದರು. ‘ನೀ ಬಂದ ಕಾರ್ಯ ಪೂರೈಸು ಸಂಸಾರಿಕ ಜಂಜಾಟಗಳಿಗೆ ಸಿಲುಕಿದರೆ ಕರ್ತವ್ಯ ಚ್ಯುತಿಯಾದಿತು’ ಎಂಬ ಶರಣರ ಎಚ್ಚರಿಕೆ ಮಾತು ಶ್ರೀಜಡೇಸಿದ್ಧೇಶ್ವರರನ್ನು ತಕ್ಷಣ ಜಾಗೃತಿಗೊಳಿಸಿತು. ಸಿಂಧಿಗೇರಿಯ ಮಲ್ಲಪ್ಪ ತಾತ ಹಾಗೂ ಮತ್ತಿತರರ ಶರಣರ ಜತೆ ಶ್ರೀಶೈಲ ಜಾತ್ರೆ ಕೈಗೊಂಡ ಅವರು, ತಮ್ಮ ಮನ ಪರಿವರ್ತನೆಯಿಂದ ಸಂಸಾರ ತ್ಯಾಗ ಮಾಡಿದರು. ‘ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ಸಾಗಿತು ಅವರ ಲೋಕ ಪರ್ಯಟನ.
12ನೇ ಶತಮಾನದ ಬಸವಾದಿ ಮೊದಲಾದ ಶರಣರ ತತ್ವಗಳಾದ ಜಾತ್ಯಾತೀತೆ, ಸರ್ವಧರ್ಮ ಸಂಹಿಷ್ಣುತೆ, ಸತ್ಯಶುದ್ಧ ಕಾಯಕ ನಿಷ್ಠೆ, ಅನುಷ್ಠಾನಗೊಳಿಸಿದ ಶರಣರ ತತ್ವ ಪ್ರತಿಪಾದಕರಾದರು. ಮಾನವೀಯತೆಯಿಂದ ಮಹಾದೇವತ್ವ ಕಾಣಲು ಸಾಧ್ಯ ಎಂಬ ಸಂದೇಶವನ್ನು ಮನುಜ ಕುಲಕ್ಕೆ ಸಾರಿದರು.
ವೀರಶೈವ ಮಹಾಸಭೆ ಸಂಸ್ಥಾಪಕರಾದ ಹಾನಗಲ್ ಲಿಂಗೈಕ್ಯ ಶ್ರೀಕುಮಾರ ಶಿವಯೋಗಿಗಳಿಗೆ ಬಂದಿದ್ದ ಇಷ್ಟ ಲಿಂಗಧಾರಣೆಯ ಕುರಿತು ಸಂಶಯ ನಿವಾರಿಸಿ(ಅ) ಲಿಂಗಾಂಗ ಸಾಮರಸ್ಯದ ಮಹತ್ವ ಅರುಹಿದರು.
ಸಾಹಿತ್ಯ ಪ್ರಖರಗಳು : ಶ್ರೀ ಜಡೇಸಿದ್ಧ ಶಿವಯೋಗಿಶ್ವರರ ಕುರಿತ ಮೊದಲ ಆಕಾರ ಕೃತಿ ಎಂದರೆ ಎಮ್ಮಿಗನೂರು ಶ್ರೀಗುರು ಮಹಾಂತ ಮಠದ ಲಿಂ. ಶ್ರೀ ಷ.ಬ್ರ.ಸಿದ್ಧಲಿಂಗ ದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಬರೆದ ಶ್ರೀ ಜಡೇಶಿವಯೋಗಿಶ್ವರರ ಚರಿತ್ರೆ, ಡಾ.ಸಿದ್ಧಯ್ಯ ಪುರಾಣಿಕರ ‘ಶರಣ ಚರಿತ್ರಾಮೃತ’, ‘ಚನ್ನಕವಿಗಳ ಶ್ರೀಹಾನಗಲ್ ಕುಮಾರೇಶ್ವರ ಪುರಾಣ,’ ಪ್ರಭಾನಂದ ಪಂಡಿತರ ‘ಶ್ರೀಸಿಂಧಿಗೇರಿ ಮಲ್ಲೇಶ್ವರ ಪುರಾಣ’, ಡಾ.ಪುಟ್ಟರಾಜ ಗವಾಯಿಗಳ ಶ್ರೀಗೂಳ್ಯ ಗಾದಿಲಿಂಗೇಶ್ವರ ಪುರಾಣದಲ್ಲಿ ಶ್ರೀಜಡೇಸಿದ್ದೇಶ್ವರ ಕುರಿತು ಪ್ರಾಸಂಗಿಕವಾಗಿ ಪ್ರಸ್ತಾಪಿತವಾಗಿವೆ.
ಶ್ರೀಜಡೇಸಿದ್ದೇಶ್ವರರ ಜನ್ಮಸ್ಥಳವಾದ ಬಳ್ಳಾರಿ ತಾಲ್ಲೂಕಿನ ಹಂದ್ಯಾಳು ಗ್ರಾಮದಲ್ಲಿ ದಿನಾಂಕ 09.04.2023 ರವಿವಾರ ದಿಂದ ಅಕ್ಷಯ ತೃತೀಯ ರೋಹಿಣಿ ನಕ್ಷತ್ರ ದಿನಾಂಕ 23.04.2023 ವರಿಗೆ ಶ್ರೀ ಅಲ್ಲೀಪುರ ಮಹಾದೇವತಾತ ನವರ ಪುರಾಣ ಪ್ರವಚನಕಾರರಾಗಿ ಪ|| ಷ|| ಶ್ರೀ ಶಿವಾಚಾರ್ಯ ಸ್ವಾಮಿಗಳು, ಹಿರೇಮಠ, ಸಾ|| ಗಿಣಿವಾರ , ತಾ ಸಿಂಧನೂರು , ಜಿಲ್ಲಾ ರಾಯಚೂರು ಪುರಾಣ ಪಠಣಕಾರರಾಗಿ ಶ್ರೀ ಎಂ.ಎಂ.ಶಾಂತಕುಮಾರ. ಹಿರೇಮಠ, ಸಿರುಗುಪ್ಪ , ತಬಲಾ ಸಾತ್ ರಾಮಲಿಂಗಪ್ಪ ಹೂಗಾರ್ , ಸಾ|| ಗಬ್ಬೂರು ನಡೆಸಿಕೊಟ್ಟುರು. ನಾಳೆಯ ದಿನ ವಿಶೇಷವಾಗಿ ಗಂಗೆ ಪೂಜೆ , ತಾತನವರ ಮೂರ್ತಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದು ಸಾಯಂಕಾಲ 6:00 ಕ್ಕೆ ತಾತನವರ ರಥೋತ್ಸವ ಜರಗುವುದು ಮತ್ತು ರಾತ್ರಿ 9:00 ಗಂಟೆಗೆ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂ|| ಪಂಚಾಕ್ಷರಿ ಗವಾಯಿಗಳವರ ಸಂಘ , ಗದಗ , ಇವರಿಂದ ನಲವಡಿ ಶ್ರೀಕಂಠಶಾಸ್ತ್ರೀಗಳವರಿಂದ ರಚಿತವಾದ ಭಕ್ತಿ ಪ್ರಧಾನ ನಾಟಕ ಹೇಮರೆಡ್ಡಿ ಮಲ್ಲಮ್ಮ ಪ್ರದರ್ಶನವಿರುತ್ತದೆ .ಕಾರಣ ಹಂದ್ಯಾಳು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ತಾತನವರ ಕೃಪೆಗೆ ಪಾತ್ರರಾಗಲು ಶ್ರೀಜಡೇಸಿದ್ಧೇಶ್ವರ ಸೇವಾ ಸಮಿತಿ, ಧರ್ಮದರ್ಶಿಗಳಾದ ಹೆಚ್ .ಎಂ. ಶಿವಕುಮಾರ ಸ್ವಾಮಿಗಳು ಹಾಗು ಹಂದ್ಯಾಳು ಶ್ರೀಮಹಾದೇವತಾತ ಕಲಾ ಸಂಘದ ಅಧ್ಯಕ್ಷರಾದ ಪುರುಷೊತ್ತಮ ಹಂದ್ಯಳು ವಿನಂತಿಸಿದ್ದಾರೆ.