ಹಂದಿ ಸ್ಥಳಾಂತರ ಮಾಡಿದ ಪ.ಪಂ

ಜಗಳೂರು. ಜೂ.೭; ಪಟ್ಟಣದ ಬೀದಿಗಳಲ್ಲಿ ಓಡಾಡುತ್ತಿರುವ ಹಂದಿಗಳನ್ನು ಹಿಡಿಸುವಂತೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಹಂದಿ ಮಾಲೀಕರ ಸಭೆಯನ್ನು ಕರೆದು ಹಂದಿಗಳನ್ನು ಹಿಡಿದು ಘನತ್ಯಾಜ್ಯ ಘಟಕದಲ್ಲಿ ನಿರ್ವಹಿಸುವಂತೆ ಸೂಚಿಸಲಾಗಿದ್ದು, ಅದರಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಪಟ್ಟಣದಲ್ಲಿರುವ 45 ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಡಿ ಬಣಕಾರ್, ಕಂದಾಯ ನಿರೀಕ್ಷರರು ಜೆ.ಕೆ. ಸಂತೋಷ್‌ಕುಮಾರ್ ಹಾಗೂ ಆರೋಗ್ಯ ನಿರೀಕ್ಷಕರು ಕಿಫಾಯತ್ ಅಹಮ್ಮದ್ ಹಂದಿ ಮಾಲೀಕರಾದ ಹನುಮಂತಪ್ಪ, ಅಂಜಿನಿ ಸೇರಿದಂತೆ ಇತರರು ಇದ್ದರು. Attachments area