ಹಂದಿ ಸಾಕಾಣಿಕೆಗೆ ಸೂಕ್ತವಾದ ಜಾಗ ನಿಗದಿ ಮಾಡಲು ಒತ್ತಾಯ

ಚಿತ್ರದುರ್ಗ.ಜು.೨೦; ನಗರದ ಸುತ್ತಮುತ್ತ ಕೆಲವೊಂದು, ಭಾಗದಲ್ಲಿ ಹಂದಿಗಳು ಸ್ವಚ್ಚತೆಯನ್ನು ನಾಶಗೊಳಿಸುತ್ತವೆ, ಅಂಥದೇ ಒಂದು ದೃಶ್ಯವನ್ನ ಇಂದು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪಕ್ಕದ ರಸ್ತೆಗೆ ಹಂದಿಗಳ ಆಗಮನವಾಯಿತು. ಹಂದಿಗಳನ್ನು ಓಡಿಸುವಂತಹ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಯ್ತು. ಹಂದಿಗಳೇ ಹೆಚ್ಚಾಗಿರುವಂಥ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು ಬಹಳ ಕಷ್ಟಕರ, ಮೊನ್ನೆ ತಾನೆ ನಗರಸಭೆಯವರು ಸ್ವಚ್ಚಗೊಳಿಸಿದ ಪಕ್ಕದ ರಸ್ತೆಗೆ, ಇಂದು ಹಂದಿಗಳು ಆಗಮಿಸಿ ಅಶ್ಚರ್ಯ ಉಂಟುಮಾಡಿದವು. ಅವುಗಳನ್ನು ಓಡಿಸುವ ಕೆಲಸವನ್ನು ಅಟೆಂಡರ್ ಅವರು ಮಾಡುತ್ತಿದ್ದರು, ನಗರದ ಸ್ವಚ್ಚತೆಗಾಗಿ ಹಂದಿಗಳನ್ನು ನಿರ್ದಿಷ್ಟವಾದ ಜಾಗದಲ್ಲಿ ಸಾಕುವಂತೆ ಏರ್ಪಾಡನ್ನು ಮಾಡಿಕೊಡಬೇಕೆಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಮತ್ತು ಕಲ್ಪವೃಕ್ಷ ಚಾರಿಟಬಲ್ ಟ್ರಸ್ಟ್ನ ಗೌರವಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ನಗರಾಡಳಿತ, ನಗರಸಭೆಗೆ ವಿನಂತಿಸಿಕೊAಡಿದ್ದಾರೆ  ಸಾಮಾನ್ಯವಾಗಿ ನಗರಗಳ ಗಲೀಜು ಹರಡಲು ಹಂದಿಗಳು, ನಾಯಿಗಳು, ಕೋಳಿಗಳು ಕಾರಣವಾಗುತ್ತದೆ, ಅವು ಗುಡ್ಡೆ ಹಾಕಿದ ಕಸವನ್ನ ಕೆದಕುವುದರಿಂದ ಅಥವಾ ಚರಂಡಿಗಳಲ್ಲಿ ಇಳಿದು ಆ ಕೊಚ್ಚೆಯಲ್ಲಿ ಹೊರಳಾಡುವುದು, ಅನಾರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ. ಹಿಂದೆಲ್ಲ ಹಂದಿಗಳನ್ನು ಊರ ಹೊರಭಾಗದಲ್ಲಿಯೇ ಸಾಕುತ್ತಿದ್ದರು, ಆಹಾರದ ಸಮಸ್ಯೆಯಾದಾಗ ಮಾತ್ರ ಊರೋಳಗೆ ಬರುತ್ತಿದ್ದವು. ಹಾಗಾಗಿ ಹಂದಿ ಸಾಕುವವರಿಗೆ ನಿರ್ದಿಷ್ಟ ಜಾಗದಲ್ಲಿ ಹಂದಿಗಳನ್ನು ಸಾಕಿ, ಪರಿಸರವನ್ನ ಸ್ವಚ್ಛವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಹಾಗಾಗಿ ನಗರಸಭೆಯವರು, ಪಂಚಾಯಿತಿಯವರು, ಆರೋಗ್ಯ ಇಲಾಖೆಯವರು ಒಗ್ಗೂಡಿ ಹಂದಿ ಸಾಕಾಣಿಕೆ ಮಾಡುವವರ ಮನಪರಿವರ್ತಿಸಿ, ನಗರದ ಸ್ವಚ್ಛತೆಯನ್ನು ಕಾಪಾಡಲು, ಹೊರಗಡೆ ಒಂದು ನಿರ್ದಿಷ್ಟ ಜಾಗದಲ್ಲಿ ಮಾತ್ರ ಹಂದಿಗಳನ್ನ ಸಾಕಬೇಕು, ನಗರದ ಒಳಗೆ ಅವುಗಳನ್ನು ಬಿಡಬಾರದು ಎಂಬ ಸಂದೇಶವನ್ನು ನೀಡಬೇಕೆಂದು ವಿನಂತಿಸಿಕೊAಡಿದ್ದಾರೆ ಇದರಿಂದ ಅವರ ದುಡಿಮೆಗೆ ಯಾವುದೇ ತೊಂದರೆಯಾಗುವುದಿಲ್ಲ, ನಗರದ ಹೊರಗೆ ಹಂದಿಗಳನ್ನು ಸಾಕುವ ಏರ್ಪಾಡನ್ನು ಎಲ್ಲ ನಗರಗಳಲ್ಲೂ ಕೈಗೊಂಡಿದ್ದಾರೆ, ಚಿತ್ರದುರ್ಗದಲ್ಲಿ ಹಂದಿಗಳು ಕಾಲೇಜಿನ ಬಳಿ ಬರುತ್ತಿವೆ, ಅದರ ಬಗ್ಗೆ ನಗರಸಭೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಹೋಟೆಲ್‌ನವರು ಹಿಂಭಾಗದಲ್ಲಿ ಹೊರಚೆಲ್ಲುವ ಎಲ್ಲಾ ಆಹಾರ ತ್ಯಾಜ್ಯವನ್ನು ಹಂದಿಗಳು ಬಂದು ತಿನ್ನುವ ದೃಶ್ಯ ಸಾಮಾನ್ಯ. ಹೋಟೆಲ್ಲನವರ ಸ್ವಚ್ಚತೆಗೂ ಸಹ ಅನಾಹುತವನ್ನುಂಟು ಮಾಡುತ್ತದೆ. ಆರೋಗ್ಯ ಇಲಾಖೆಯವರು ಆ ಹೋಟೆಲ್‌ಗಳನ್ನು ಪರಿಶೀಲನೆ ಮಾಡಿ, ಹಿಂಭಾಗದಲ್ಲಿ ಹಂದಿಗಳು ಬರದ ರೀತಿ ವ್ಯವಸ್ಥೆ ಮಾಡಿಕೊಳ್ಳಬೇಕು. ಕಸದ ತೊಟ್ಟಿ ಸುತ್ತ ಮುತ್ತ ಹಂದಿಗಳು, ಕಿರುಚಾಡಿಕೊಂಡು, ಕಚ್ಚಾಡಿಕೊಂಡು ಕಸವನ್ನ ಎಳಿಯುತ್ತಿರುವುದು ಸಾಮಾನ್ಯವಾಗಿ ಎಲ್ಲ ಕಡೆ ಕಾಣಸಿಗುತ್ತವೆ. ಹಾಗಾಗಿ ನಗರದ ಸ್ವಚ್ಛತೆ ಗೋಸ್ಕರವಾದರೂ ಹಂದಿಗಳನ್ನು ನಾವೀಗ ಊರ ಹೊರಗೆ ಕಳುಹಿಸುವ ಪರಿಸ್ಥಿತಿ ಬಂದಿದೆ. ಹಂದಿ ಸಾಕಾಣಿಕೆ ಮಾಡುವರಿಗೆ ಇದು ನೋವು ತರುತ್ತದೆ, ಆದರೆ ಜನರ ಆರೋಗ್ಯಕ್ಕಾಗಿ ಅವರು ಸಹ ತ್ಯಾಗ ಮಾಡಬೇಕಾಗಿದೆ ಎಂದಿದ್ದಾರೆ.ಬಿಡಾಡಿ ದನಗಳು ಮಾರ್ಕೆಟ್ ಸುತ್ತ ಓಡಾಡುವ ದೃಶ್ಯ ಸಹ ಮಾರುಕಟ್ಟೆಯಲ್ಲಿ ನೋಡಬಹುದು. ಬೆಳಿಗ್ಗೆ ಮತ್ತು ಸಂಜೆ ಬಿಸಾಕಿದ ತರಕಾರಿಗಳನ್ನು ತಿನ್ನಲು ನೂರಾರು ದನಗಳು ಮಾರ್ಕೆಟ್ ಸುತ್ತಮುತ್ತ ನೋಡಲು ಸಿಗುತ್ತವೆ, ಅವು ಆಹಾರ ಹುಡುಕಿಕೊಂಡು ಬರುವ ಸಂದರ್ಭದಲ್ಲಿ, ಜನರ ಮೇಲೆ ನುಗ್ಗಿ, ಜನರನ್ನ ಗಾಯಗೊಳಿಸುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ಅಮೂಲ್ಯವಾದ ಜನರ ಜೀವ ರಕ್ಷಣೆಗೋಸ್ಕರವಾದರೂ, ನಾವು ಪ್ರಾಣಿಗಳನ್ನು ನಿಯಮಬದ್ಧವಾಗಿ ಸಾಕಬೇಕಾಗಿದೆ. ಇದನ್ನ ಜನರಿಗೆ ಮನದಟ್ಟು ಮಾಡಿಕೊಡಬೇಕಿದೆ. ಹಂದಿ ಸಾಕಾಣಿಕೆ, ದನ ಸಾಕಾಣಿಕೆ, ನಾಯಿ, ಕೋಳಿ ಸಾಕುವವರು ನಗರದ ಸ್ವಚ್ಛತೆಗೆ, ಯಾವುದೇ ತೊಂದರೆ ಆಗದಂತೆ, ಅವುಗÀಳ ಸಾಗಾಣಿಕೆ ಮಾಡಬೇಕಾಗುತ್ತದೆ. ಜನರು ತಮ್ಮ ಲಾಭಕ್ಕೋಸ್ಕರ ಪರಿಸರ ಹಾನಿ ಮಾಡುವುದು, ಜನರಿಗೆ ತೊಂದರೆ ಮಾಡುವುದು, ನಗರದ ಸೌಂದರ್ಯಕ್ಕೆ ಹಾನಿ ಮಾಡುವುದನ್ನು, ಖಂಡಿತಾ ಒಳ್ಳೆಯದಲ್ಲ. ಇದಕ್ಕಾಗಿ ಕಟ್ಟುನಿಟ್ಟಿನ ಕ್ರಮವನ್ನು ನಗರಸಭೆಯವರು, ಪೊಲೀಸ್ ಇಲಾಖೆಯವರು, ಅರಣ್ಯ ಇಲಾಖೆಯವರು ತೆಗೆದುಕೊಳ್ಳಬೇಕಾಗುತ್ತದೆ. ನಗರದಲ್ಲಿ ಯಾವುದೇ ಕಾಯಿಲೆ ಬರದಂತೆ, ಜನರ ಆರೋಗ್ಯಗೋಸ್ಕರವಾದರೂ ನಾವು ಈ ರೀತಿ ಗಲೀಜು ಮಾಡಲು ಬರುವಂಥ ಪ್ರಾಣಿಗಳನ್ನು, ನಿರ್ದಿಷ್ಟವಾದ ಸ್ಥಳದಲ್ಲಿ ಸಾಕುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದಿದ್ದಾರೆ.ಹಾಗಾಗಿ ಹಂದಿ ಸಾಕುವವರು ಯಾವುದೇ ಮನಸ್ತಾಪ ಮಾಡಿಕೊಳ್ಳದೆ, ನಗರದ ಸ್ವಚ್ಚತೆಗೋಸ್ಕರ ಸ್ವಲ್ಪ ತ್ಯಾಗ, ಅವರು ಹಂದಿಗಳನ್ನು ಒಂದು ನಿರ್ದಿಷ್ಟವಾದ ಜಾಗದಲ್ಲೇ ಸಾಕಬೇಕೆಂದು ಈ ಮೂಲಕ ವಿನಂತಿಸಿಕೊAಡಿದ್ದಾರೆ.