ಹಂದಿಗೆ ಹಾಲು ಕುಡಿಸಿದ ಹಸು

ಆಲಮೇಲ : ಸೆ.9:ಆಲಮೇಲದಲ್ಲಿ ಆಕಳು (ಹಸು) ಹಂದಿಗೆ ಹಾಲನ್ನು ಕುಡಿಸುತ್ತಿದ್ದುದು ಈ ವಿಚಿತ್ರವಾದಂತಹ ದೃಶ್ಯ ಇಲ್ಲಿನ ಜನರು ತಂಡೋಪ ತಂಡವಾಗಿ ಆಗಮಿಸಿ ಈ ಘಟನೆಯನ್ನು ಆಲಮೇಲದ ಗಾಂಧಿಚೌಕ ಆವರಣದಲ್ಲಿ ಆಕಳು ಹಾಲನ್ನು ಹಂದಿ ಕುಡಿಯುವುದನ್ನು ಸುಮಿತ್ ಸೊನ್ನದರವರು ನೋಡಿ ಎಲ್ಲರಿಗೂ ಸಂಗತಿ ತಿಳಿಸಿದಾಗ ಪಟ್ಟಣದಲ್ಲಿ ಎಲ್ಲರ ಬಾಯಿಂದ ಬಾಯಿಗೆ ಈ ಸುದ್ದಿ ಹರಡಿತು. ಕರು ಆಕಳು ಮುಂದೆ ಇದ್ದರು, ನಂದೆ ಕರು ಎಂದು ತಿಳಿದು ಹಂದಿಗೆ ಹಾಲು ಕುಡಿಸುತ್ತಿದ್ದುದು ಹಸುವಿನ ಗಮನಕ್ಕೆ ಬರಲಿಲ್ಲ, ಮಾನವನಿಗೆ ಜ್ಞಾನಪಶಕ್ತಿ ಕಡಿಮೆಯಾಗುತ್ತಿರುವಾಗ, ಪ್ರಾಣಿಗಳಿಗೂ ಸಹಿತ ಜ್ಞಾನಪಶಕ್ತಿಯು ಕಡಿಮೆಯಾಗುತ್ತಿದೆ.ಮಾನವರು ಹಾಗೂ ಪ್ರಾಣಿಗಳು ರಾಸಾಯನಿಕ ಪದಾರ್ಥ ಸೇವಿಸುತ್ತಿರುವುದೇ ಇದಕ್ಕೆ ಕಾರಣವಾಗಿರಬಹುದು, ಎಂಬುದು ಅಥವಾ ಮುಂದೆ ಗ್ರಾಮಕ್ಕೆ ಅನಾಹುತ ಸಂಭವಿಸಬಹುದು ಎಂದು ಇಲ್ಲಿನ ಜನರ ಆತಂಕ.