ಹಂದಿಗಳ ಹಾವಳಿ ನಿಯಂತ್ರಿಸದಿದ್ದರೆ ಸೂಕ್ತ ಕ್ರಮ

ಜಗಳೂರು.ಏ.೨೦: ಹಂದಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಯ್ದುಕೊಳ್ಳಿ ಎಂದು ಪ.ಪಂ ಮುಖ್ಯಾಧಿಕಾರಿ ರಾಜು.ಡಿ.ಬಣಕಾರ್ ಖಡಕ್ ಸೂಚಿನೆ ನೀಡಿದರು.ಪಟ್ಟಣದ ಪಟ್ಟಣಪಂಚಾಯಿತಿ ಸಭಾಂಗಣದಲ್ಲಿ ಹಂದಿ ಮಾಲಿಕರಿಗೆ ಕರೆದಿದ್ದ  ಜಾಗೃತಿ ಸಭೆ ಯಲ್ಲಿ ಮಾತನಾಡಿದರು.
ಪಟ್ಟಣದ ವಿವಿಧ ವಾರ್ಡಗಳಲ್ಲಿ ಚರಂಡಿ ನೈರ್ಮಲ್ಯ ಕಾಪಾಡಬೇಕು ಕೊವಿಡ್ ಅಲೆ  ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಳ್ಳಬೇಕು ಹಂದಿಗಳಿಂದ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿರಿ.ಸರ್ಕಾರದ ಆದೇಶದಂತೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಂರಕ್ಷಣೆ ಮಾಡಿಕೊಳ್ಳಬೇಕು ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ವರಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಖಿಫಾಯತ್,ಕಂದಾಯ ನಿರೀಕ್ಷಕ ಸಂತೋಷ್ ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.