ಹಂದಿಗಳ ತಾಣವಾದ ಸಾತಕೇಡ ಬಸ್ ನಿಲ್ದಾಣ ಸಾರ್ವಜನಿಕರ ಆಕ್ರೋಷ

ಮಡಿವಾಳಪ್ಪ ಟಿ ಯತ್ನಾಳ

ಯಡ್ರಾಮಿ:ಜ.22:ತಾಲೂಕಿನ ಸರ್ವ ಜನಾಂಗದ ಪವಿತ್ರ ದೇವಸ್ಥಾನ ಎಂದು ಪ್ರಸಿದ್ಧಿ ಪಡೆದ ಈರಣ್ಣ ಮುತ್ಯ ಹಾಗೂ ಶ್ರೀ ರಾಜ ಬಾಸ್ಕರ್ ರವರ ಪುರಾತನ ದೇವಸ್ಥಾನ ಸಾತಕೇಡ ಗ್ರಾಮ ಅಂತಹ ದೇವಸ್ಥಾನದ ಬಸ್ ನಿಲ್ದಾಣ ಹಂದಿಗಳ ತಾಣವಾಗಿದೆ ಎಂದು ಸಾರ್ವಜನಿಕರು ಆಕ್ರೋಷ.

ಸಾಥಖೇಡ ಗ್ರಾಮದ ನಡೆದಾಡುವ ದೇವರು ಎಂದೇ ಪ್ರಸಿದ್ಧವಾದ ಶ್ರೀಗುರು ಈರಣ್ಣ ಮುತ್ಯಾ ಹಾಗೂ ಶ್ರೀ ರಾಜ ಬಾಸ್ಕರ ರವರ ಪುರಾತನ ದೇವಸ್ಥಾನ ವಿದ್ದು.

ಸರ್ವ ಜನಾಂಗದ ಭಾವೈಕ್ಯತೆ ಬೀಡಾಗಿದ್ದು ಇಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಪ್ರತಿದಿನ ಆಗಮಿಸುತ್ತಾರೆ ಹಾಗೂ ದಿನನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜೇವರ್ಗಿ ಹಾಗೂ ಯಡ್ರಾಮಿ ಪಟ್ಟಣದ ಕಡೆಗೆ ಹೋಗುತ್ತಾರೆ

ದೇವಸ್ಥಾನದ ಮುಂದೆ ಇರುವ ಬಸ್ ನಿಲ್ದಾಣದ ಕಟ್ಟಡವು ಕಸದ ರಾಶಿಗಳು ಹಾಗೂ ಸರಾಯಿ ಬಾಟಲ್ ಮತ್ತು ಮಲಮೂತ್ರದಿಂದ ತುಂಬಿಕೊಂಡ ಕಾರಣ ಹಂದಿಗಳ ವಾಸವಾಗಿದ್ದು.

ಸ್ಥಳೀಯ ಸಾತಕೇಡ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಇದ್ದು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಸಾರ್ವಜನಿಕರು ದೇವಸ್ಥಾನದ ಭಕ್ತರು ಗ್ರಾಮ ಪಂಚಾಯತಿ ವಿರುದ್ಧ ಗ್ರಾಮದ ಮೆಹಬೂಬ್ ಸೌದಾಗರ್ ಆಕ್ರೋಷ ವ್ಯಕ್ತಪಡಿಸಿದ್ದಾರೆ.