ಹಂತಕರಿಗೆ ಶಿಕ್ಷೆಯಾಗಲಿ


ಸಂಜೆವಾಣಿ ವಾರ್ತೆ
ಸಂಡೂರು:ಜು: 13: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತಾಶ್ರಮದ ಜೈನ ಮುನಿ ಕಾಮಕುಮಾರ ನಂದೀಮಹಾರಾಜರ ಹತ್ಯೆಯನ್ನು ಖಂಡಿಸಿ ಸಂಡೂರು ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪರಮಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳು ಹಾಗೂ ಯಶವಂತನಗರದ ಶ್ರೀ ಗುರು ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಪರಮಪೂಜ್ಯ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಮಾತನಾಡಿ ಮಠಮಾನ್ಯಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಇಂತಹ ದಾರುಣ ಸಾವು ಯಾವುದೇ ಸಮಾಜದ ಸ್ವಾಮಿಗಳಿಗೆ ಬರಬಾರದು. ಪ್ರತಿಯೊಂದು ಮಠಮಾನ್ಯಗಳಿಗೂ ಭದ್ರತೆಯನ್ನು ಒದಗಿಸುವುದರ ಜೊತೆಗೆ ಜೈನ ಮುನಿಗಳಿಗೆ ರಕ್ಷಣೆಯನ್ನು ನೀಡಿ ಎಲ್ಲಾ ಜೈನ ಅಶ್ರಮಗಳಿಗೆ ಭದ್ರತೆ ಒದಗಿಸಬೇಕು, ಅಲ್ಲದೆ ಜೈನ ಮುನಿಯನ್ನು ಹತ್ಯೆಗೈದ ಹಂತಕರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಮನವಿ ಮಾಡಿದ ಇರ್ವರು ಸ್ವಾಮಿಜಿಯವರು ಸಿ.ಬಿ.ಐ. ಅಥವಾ ರಾಜ್ಯ ಪೋಲಿಸರ ತನಿಖೆಗೆ ಒಪ್ಪಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.