ಹಂಡೆ ವಜಿರ ಸಂಸ್ಥಾನದ ರಾಜಾ ಹನುಮಪ್ಪ ನಾಯಕ ಅವರ ಜಯಂತಿ ಆಚರಣೆ

ಬಸವನಬಾಗೇವಾಡಿ:ಎ.10: ಬ್ರಿಟಿಷರ ವಿರುದ್ಧ ಹೋರಾಡಲು ಬೇಕಾಗುವ ಸೈನ್ಯವನ್ನು ಕಟ್ಟಿ ದೇಶದ ಸ್ವಾತಂತ್ರ್ಯಗೋಸ್ಕರ ಹೋರಾಡಿದ ಮಹಾನ್ ವೀರ ರಾಜಾ ಹನುಮಪ್ಪ ನಾಯಕರ ಸಾಧನೆಯನ್ನು ಇಂದು ನಾವು ಸ್ಮರಿಸಬೇಕಾಗಿದ್ದು ಅತಿ ಅವಶ್ಯಕವಾಗಿದೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಹೇಳಿದರು
ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ರಾಜ ಹನುಮಪ್ಪ ನಾಯಕ್ ಅವರ ಜಯಂತೋತ್ಸವದ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ರಾಜಾ ಹನುಮಪ್ಪ ನಾಯಕ ಅವರು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಗಳಿಗೆ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು ಬಳ್ಳಾರಿ ಗುಡ್ಡದ ಮೇಲೆ ಬಲಿಷ್ಠ ಐತಿಹಾಸಿಕ ಕೋಟೆ ನಿರ್ಮಾಣ ಮಾಡಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು ಅವರ ಶೌರ್ಯ ಧೈರ್ಯವನ್ನು ನಾವು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ತಾಲೂಕ ಅಧ್ಯಕ್ಷರಾದ ಸಂಜು ಬಿರಾದಾರ್ ಮುಖಂಡರಾದ ಶ್ರೀಕಾಂತ್ ಕೊಟ್ರಶೆಟ್ಟಿ ಸುನಿಲಗೌಡ ಚಿಕ್ಕೊಂಡ ಜಟ್ಟಿಂಗರಾಯ ಮಾಲಗಾರ ಮನ್ನಾನ ಶಾಬಾದಿ ಸುರೇಶಗೌಡ ಪಾಟೀಲ್ ಮಾಂತೇಶ್ ಆದಿಗೊಂಡ ಪ್ರಶಾಂತ್ ಮುಂಜಾನೆ ಶಂಕರಗುರು ರಜಪೂತ್ ಮಾಂತೇಶ್ ಹೆಬ್ಬಾಳ ಹಂಡೆ ವಜೀರ್ ಸಮಾಜದ ಮುಖಂಡರಾದ ಮಲ್ಲು ಬನಾಸಿ ಶಾಂತು ಕ್ಯಾಡದ್ ಶ್ರೀಶೈಲ್ ಚೌರಿ ಶಿಕ್ಷಕರಾದ ಏ.ಡಿ.ಗೋನಾಳ ರುದ್ರಗೌಡ ಪಾಟೀಲ್ ಬಸವರಾಜ್ ಚೌರಿ ಮಾಂತೇಶ್ ಬಾಡಿಗಿ ವೀರೇಶ್ ಗಬ್ಬುರ್ ಶ್ರೀಧರ್ ಕುಂಬಾರ್ ಅರುಣ ಗೋಳಸಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು