ಹಂಚಿನಾಳ ಭಕ್ತರ ಶ್ರೀಶೈಲಕ್ಕೆ ಪಾದಯಾತ್ರೆ

ಗಬ್ಬೂರು.ಏ.೦೩- ಕೈಯಲ್ಲೋಂದು ಕೋಲು; ಬೆನ್ನಿಗೊಂದು ಚೀಲ, ಮಲ್ಲಯ್ಯನ ಸ್ಮರಿಸುತ್ತ ನೆತ್ತಿ ಸುಡುವಂಥ ಉರಿಬಿಸಿಲು ಲೆಕ್ಕಿಸದೆ ಬರಿಗಾಲಲ್ಲಿ ಅವರೆಲ್ಲ ಹೆಜ್ಜೆ ಹಾಕುತ್ತಿದ್ದಾರೆ. ದೇವದುರ್ಗ ತಾಲೂಕಿನ ಹಂಚಿನಾಳ ಗ್ರಾಮದ ಅನೇಕ ಜನ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಆರಂಭಿಸಿದರು.
ಗ್ರಾಮದ ಆಂಜನೇಯ ದೇವರ ದೇವಸ್ಥಾನದ ಬಳಿಯಲ್ಲಿ ಸೇರಿದ್ದ ಪಾದಯಾತ್ರರ್ಥಿಗಳ ಕುರಿತು ಅನೇಕರು ಮಾತನಾಡಿ, ಸತತ ೭ನೇ ವರ್ಷದ ಪಾದಯಾತ್ರೆಯನ್ನು ಇಂದು ತಾವೆಲ್ಲರೂ ಆರಂಭಿಸುತ್ತಿದ್ದೀರಿ, ಶ್ರೀಶೈಲ ಮಲ್ಲಿಕಾರ್ಜುನ ತಮಗೆಲ್ಲರಿಗೂ ಅನುಗ್ರಹವನ್ನು ತೋರಲೆಂದು ಪಾದಯಾತ್ರಿಗೆ ಶುಭ ಹಾರೈಸಿ ಎಲ್ಲರಿಗೂ ಗೌರವಿಸಿ ಬೀಳ್ಕೋಟ್ಟರು.