ಹಂಚಿಕೆಯಾಗದ ಮನೆಗಳು: ಯಾಕಪೂರ ಆಕ್ರೋಶ

ಚಿಂಚೋಳಿ,ಏ.1- ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. 311ರಲ್ಲಿ ನಿರ್ಮಾಣಗೊಂಡಿರುವ ಎರಡು ನೂರು ಮನೆಗಳನ್ನು ಹಂಚಿಕೆ ಮಾಡದೆ ನಿರ್ಲಕ್ಷ ವಹಿಸಿರುವ ಕಲಬುರ್ಗಿ ವಿಭಾಗ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಪಕ್ಷದ ಮುಖಂಡ ಸಂಜೀವನ ಯಾಕಪೂರ ಅವರು ಒತ್ತಾಯಿಸಿದ್ದಾರೆ.
ಮನೆ ಹಂಚಿಕೆ ಮಾಡದೇ ಪಾಳುಬಿದ್ದಿರುವ ಮನೆಗಳನ್ನು ವಿಕ್ಷಿಸಿದ ಯಾಕಪೂರ, ಬರುವ ಒಂದೆರಡು ವಾರಗಳಲ್ಲಿ ಹಂಚಿಕೆ ಪ್ರಕ್ರಿಯೆ ಪ್ರಾರಂಭಿಸದಿದಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಿರ್ಮಾಣಗೊಂಡಿರುವ ಮನೆಗಳ ಸುತ್ತಮುತ್ತ ಗಿಡಗಂಟೆಗಳು ಬೆಳೆದು ಪಾಳು ಬಿದ್ದಂತಾಗಿವೆ. ಮನೆ ಪ್ರವೇಶಕ್ಕೂ ಮುನ್ನವೇ ಮನೆಯಗೊಡೆಗಳು ಬಿರುಕು ಬಿಟ್ಟಿವೆ. ಕೆಲವೋಂದು ಕುಸಿದು ಬಿದ್ದಿವೆ. ಹೀಗಾಗಿ ಇಲ್ಲಿನ ಮನೆ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಲ್ಲಿ ನಡೆದಿದೆ ಎಂದರು.
ಇಲ್ಲಿನ ಅವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಗುತ್ತೇದಾರ ವಿರುದ್ಧ ಕ್ರಿಮಿನ ಮೊಕದ್ದಮೆ ದಾಖಲಿಸಿ ಕಪ್ಪು ಪಟ್ಟಿಗೆ ಅವರ ಹೆಸರು ಸೇರಿಸಬೇಕು ಎಂದ ಯಾಕಾಪೂರ ಅವರು, ಇದಕ್ಕೆಲ್ಲ ಚಿಂಚೋಳಿಯ ಶಾಸಕರ ನಿರ್ಲಕ್ಷ ಹಾಗೂ ಅಧಿಕಾರಿಗಳ ಮೇಲೆ ಹಿಡಿತ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ ಎಂದರು.
ಅವರೊಂದಿಗೆ ಜೆಡಿಎಸ್ ಪಕ್ಷದ ಮುಖಂಡರಾದ ವಿಷ್ಣುಕಾಂತ ಮೂಲಗಿ. ಸಿದ್ದು ಬುಬುಲಿ. ನಾಗೇಂದ್ರಪ್ಪ ಗುರಂಪಲ್ಲಿ. ಬಸವರಾಜ ಶಿರಸಿ. ಇದ್ದರು.