ಹಂಗರ್ ಟ್ರಸ್ಟ್ ವತಿಯಿಂದ ರೋಗಿಗಳಿಗೆ ಆಹಾರ ವಿತರಣೆ

ಸಿರುಗುಪ್ಪ ಮೇ 29 : ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಕ್ಷಯ ರೋಗಿಗಳಿಗೆ ಹಂಗರ್ ಟ್ರಸ್ಟ್‍ವತಿಯಿಂದ ಪೌಷ್ಟಿಕ ಆಹಾರದ ಕಿಟ್‍ಗಳನ್ನು ಡಾಕ್ಟರ್ ಶ್ರವಣ್ ಕುಮಾರ್ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದ ಇಲ್ಲದೆ ಜೀವನ ನಡೆಸಲು ಚಿಂತಾಜನಕವಾಗಿದ್ದು ಆರ್ಥಿಕವಾಗಿ ಹಿಂದುಳಿದ ಕ್ಷಯರೋಗಿಗಳು ಪೌಷ್ಟಿಕ ಆಹಾರವು ಸೇವಿಸುವುದು ಕಷ್ಟಕರವಾಗಿರುತ್ತದೆ, ಈ ದೃಷ್ಟಿಯಿಂದ ಉತ್ತಮ ಪೆÇೀಷಕಾಂಶಗಳನ್ನು ನೀಡಬೇಕಾಗಿರುವುದು ಅವಶ್ಯಕವಾಗಿದೆ, ಗ್ರಾಮೀಣ ಭಾಗದ 25 ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ಕಿಟ್‍ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಡಾಕ್ಟರ್ ಮಲ್ಲಿಕಾರ್ಜುನ್ ರೆಡ್ಡಿ , ತಾಲೂಕ ಕ್ಷೇತ್ರದ ಪ್ರಯೋಗಶಾಲಾ ಮೇಲ್ವಿಚಾರಕರು ಅಂದಾನಪ್ಪ ಅಬ್ಬಿಗೇರಿ, ನಗರ ಕ್ಷಯರೋಗ ಪರಿವೀಕ್ಷಕರು ಹುಲುಗಪ್ಪ, ಕೆಎಂಎಸ್ ಸಂಸ್ಥೆ ಅಧ್ಯಕ್ಷ ಸದಾಶಿವಯ್ಯ, 23ನೇ ವಾರ್ಡಿನ ಸದಸ್ಯ ಮೊಮ್ಮದ್ ರಫಿ, ಮುಖಂಡರಾದ ನಿಜಾಮುದ್ದೀನ್, ರಜಾಕ್, ಇದ್ದರು