ಹಂಗನಹಳ್ಳಿಗೆ ಹೋಗುವ ರಸ್ತೆಯಲ್ಲಿ ತೆಗ್ಗು ಗುಂಡಿ ಸರಿಪಡಿಸುವಂತೆ ಗ್ರಾಮಸ್ಥರ ಆಗ್ರಹ

ಸೇಡಂ, ಸ,13: ತಾಲೂಕಿನ ಊಡಗಿ ಗ್ರಾಮದಿಂದ ಹಂಗನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿ ಬೃಹತ್ ತೆಗ್ದು ಗುಂಡಿ ಬಿದ್ದಿದ್ದು ದ್ವಿಚಕ್ರ ವಾಹನ ಸವಾರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ ಸಂಬಂಧಪಟ್ಟ ಅಧಿಕಾರಿಗಳು ತೆಗ್ಗುಂಡೆ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಹಂಗನಹಳ್ಳಿ ಗ್ರಾಮಸ್ಥ ರಾಜು ಪಾಟೀಲ್ ಆಗ್ರಹಿಸಿದ್ದಾರೆ.

ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಊಡಗಿ ಗ್ರಾಮದಿಂದ ತಾಂಡದ ಮಧ್ಯದಲ್ಲಿ ತಿರುವುಗಳಿವೆ ಅಪಘಾತವಾಗುವ ಎಲ್ಲಾ ಲಕ್ಷಣಗಳಿದ್ದರೂ ರಸ್ತೆ ಆಗಲಿ ಕಾಣುವಾಗಬೇಕಿದೆ ಹಾಗೂ ರೈಲ್ವೆ ಟ್ರ್ಯಾಕ್ ಕೆಳಗೆ ಇರುವ ರಸ್ತೆಯಲ್ಲಿ ಎರಡು ಕಡೆ ದರ್ಪಣ ಅಳವಡಿಸುವ ಮೂಲಕ ಅಪಘಾತ ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಿ ಗ್ರಾಮಸ್ಥರ ಅನುಕೂಲಕ್ಕಾಗಿ ಅಳವಡಿಸಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.