ಸÀಂವಿಧಾನವೇ ಭಾರತದ ಸರ್ವ ಶ್ರೇಷ್ಠ ಧರ್ಮಗ್ರಂಥ : ಡಾ. ಜ್ಞಾನಪ್ರಕಾಶ ಸ್ವಾಮೀಜಿ

ಸೇಡಂ,ಎ,24: ದೇಶದಲ್ಲಿರುವ ಎಲ್ಲಾ ಸರ್ವಧರ್ಮದ ಗ್ರಂಥಗಳನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಭಾರತಕ್ಕೆ ಸಂವಿಧಾನವೇ ಸರ್ವ ಶ್ರೇಷ್ಠ ಧರ್ಮ ಗ್ರಂಥವಾಗಿದೆ ಎಂದು ಡಾ.ಜ್ಞಾನಪ್ರಕಾಶ್ ಸ್ವಾಮೀಜಿ ಮೈಸೂರು ಅವರು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತೋತ್ಸವ ಅಂಗವಾಗಿ ಸ್ವಾಭಿಮಾನ ಸರ್ವಧರ್ಮ ಸಮನ್ವಯ ಸಮಿತಿ, ಸೇಡಂ ವತಿಯಿಂದ ಅಂಬೇಡ್ಕರ್ ಪುತ್ತಳಿ ಎದುರುಗಡೆ ಅಯೋಜಿಸಲಾಗಿರುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶ್ರೀಗಳು ಪೆನ್ನು ಮತ್ತು ಓಟು ಚಾಣಕ್ಯತನದಿಂದ ಉಪಯೋಗಿಸಿದರೆ ಈ ದೇಶದ ಉನ್ನತ ಹುದ್ದೆಯಲ್ಲಿ ನಿಲ್ಲುವಲ್ಲಿ ಯಾವುದೇ ಸಂದೇಹವಿಲ್ಲ ಮಕ್ಕಳು ಅಂಬೇಡ್ಕರ್ ಅವರ ಸಂದೇಶವನ್ನು ಪಾಲಕರು ತಿಳಿಯಬೇಕು, ಹಾಗೂ ಎಸ್ಸಿ ಎಸ್ಟಿ ಒಬಿಸಿ ಒಗ್ಗಟ್ಟಾದರೆ ಪಾರ್ಲಿಮೆಂಟಿನಲ್ಲಿ ಅಧಿಕಾರ ನಿಮ್ಮದಾಗುತ್ತದೆ ಎಂದ ಹೇಳಿದರು. ಪೂಜ್ಯ ಭಂತೆ ಅಮರಜ್ಯೋತಿ ಅವರು ಸಭಿಕರನ್ನು ಪಂಚಶೀಲ ಬೋಧಿಸಿದರು,ಕಾರ್ಯಕ್ರಮ ಉದ್ದೇಶಿಸಿ ಶಿವಕುಮಾರ್ ಪಾಟೀಲ್ ತೇಲ್ಕೂರ್,ಬಸವರಾಜ್ ಪಾಟೀಲ್ ಊಡಗಿ, ಬಸವರಾಜ್ ಬೆಣ್ಣೂರು, ಡಾ.ಕೆ.ಎಮ್. ಸಂದೇಶ್, ಖ್ಯಾತ ಅಂಬೇಡ್ಕರ್ ವಾದಿ ರಂಜೇರಲ್ಲಾ ರಾಜೇಶ್, ಸಮಿತಿಯ ಅಧ್ಯಕ್ಷ ಭಾಷಣ ರೇವಣಸಿದ್ದಪ್ಪ ಎಸ್.ಸಿಂದೆ ಮಾಡಿದರು. ವೇದಿಕೆ ಮೇಲೆ ಶಿವಶರಣ ರೆಡ್ಡಿ ಪಾಟೀಲ್, ಶಂಭುಲಿಂಗ ನಾಟಿಕರ್, ಸಂಜೀವಕುಮಾರ್ ರಾಜಪುತ್, ಮಾರುತಿ ಕೊಡಂಗಲಕರ್, ಜಗನ್ನಾಥ್ ಚಿಂತಪಳ್ಳಿ, ಸತೀಶ್ ಎನ್ ಪೂಜಾರಿ, ರಶೀದ್ ರಂಜೋಳ್, ಶಿವಕುಮಾರ್ ತೋಟ್ನಳ್ಳಿ, ಗೋಪಾಲ್ ನಾಟೇಕರ್, ಭೀಮು ಮುಧೋಳ್, ಸಾಗರ್ ಕಲಕಂಭ್, ಅನೇಕರು ಇದ್ದರು.
ಸ್ವಾಗತ ಸಿದ್ದಾರ್ಥ್ ಚಿಂತಪಳ್ಳಿ, ನಿರೂಪಣೆ ಜಾನಕಿ ಹಂಗನಳ್ಳಿಕರ್, ವಂದನಾರ್ಪಣೆ ಶ್ರೀ ಗೌತಮ್ ಹಳ್ಳಿ ಮಾಡಿದರು.


ಸರ್ವಧರ್ಮ ಸಮುದಾಯದವರು ಒಗ್ಗಟ್ಟಿನಿಂದ ಜಯಂತೋತ್ಸವ ಸೇಡಂನಲ್ಲಿ ಮಾಡುತ್ತಿರುವುದು ಸಂತಸ ಪ್ರತಿವರ್ಷನೂ ಮುಂದುವರಿಸಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಮೀಸಲಿಟ್ಟರೆ ಅವರು ರಾಷ್ಟ್ರಧ್ರೋಹಿಗಳು.
ಶ್ರೀ.ಜ್ಞಾನಪ್ರಕಾಶ್ ಸ್ವಾಮೀಜಿ


ಅಂಬೇಡ್ಕರ್ ಅವರು ತನ್ನ ಕಷ್ಟವನ್ನು ಮರೆಮಾಚಿ ತನ್ನವರಿಗೆ ಕಷ್ಟ ಬರದ ಹಾಗೆ ಸಂವಿಧಾನ ಬರೆದು ನಿವಾರಿಸಿದಾರೆ, ನಾವು ನೀವು ಜಾಗೃತರಾಗಬೇಕಿದೆ,ಸಿನಿಮಾ ಇನ್ನಿತರ ಕ್ಷೇತ್ರಗಳಲ್ಲಿ ಹಿಂಬದಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಆದರೆ ಮುಖ್ಯ ವಾಹಿನಿಯಲ್ಲಿ ಕೆಲಸ ಮಾಡುವಂತಹವರಾಗಬೇಕಿದೆ.
ಡಾ. ಕೆ.ಎಮ್. ಸಂದೇಶ್ ಸಂಸ್ಥಾಪಕರು
ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ


ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ಸಂವಿಧಾನ ನೀಡಿರುವ ಜೊತೆಗೆ ಅಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಭಾರತಕ್ಕೆ ಆರ್ಥಿಕ ತಜ್ಞರಾಗಿ ಕಾರ್ಯನಿರ್ವಹಿಸುತ್ತಾರೆ. ಬಸವರಾಜ್ ಪಾಟೀಲ್ ಊಡಗಿ ಮಾಜಿ ರಾಜ್ಯಾಧ್ಯಕ್ಷರು ತೋಟಗಾರಿಕೆ ಮಹಾಮಂಡಳಿ ಬೆಂಗಳೂರು.


ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯವನ್ನು ಪ್ರತಿಯೊಬ್ಬರೂ ಪಾಲಿಸಿ ಮುನ್ನಡಿಸೋಣ.
ಶಿವಕುಮಾರ್ ಪಾಟೀಲ್ ತೇಲ್ಕೂರ್