ಸ್ವ ಸಹಾಯ ಗುಂಪುಗಳಿಗೆ ದದ್ದಲ್ ಚೆಕ್ ವಿತರಣೆ

ರಾಯಚೂರು, ಜುಲೈ,೩೧, ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಗ್ರಾಮೀಣ ಶಾಸಕರ ಕಾರ್ಯಲಯದಲ್ಲಿ ಅಂಬೇಡ್ಕರ ಅಭಿವೃದ್ಧಿ ನಿಗಮ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಸ್ವ ಸಹಾಯ ಗುಂಪು ಮಹಿಳೆಯರಿಗೆ ಚೆಕ್ ವಿತರಣೆ ಮಾಡಿದರು.
ಶಿವಮ್ಮ ಮಹಿಳಾ ಸ್ವ ಸಹಾಯ ಸಂಘ ಚಿಕ್ಕಮಂಚಾಲಿ ಪರಿಶಿಷ್ಟ ಜಾತಿ ೨.೫೦ ಲಕ್ಷ ರೂ, ಇಂದಿರಾ ಮಹಿಳಾ ಸ್ವ ಸಹಾಯ ಸಂಘ ಗಾಜರಾಳ ಪರಿಶಿಷ್ಟ ಜಾತಿ ೨.೫೦ ಲಕ್ಷ ರೂ, ಕಾಳಿಕದೇವಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಸಾದಪೂರ ಪರಿಶಿಷ್ಟ ಜಾತಿ ಸಮುದಾಯದ ವರಿಗೆ ೨.೫೦ ಲಕ್ಷ ರೂ ಹಾಗೂ ತುರುಕುನಡೊಡ ಗ್ರಾಮದ ಶ್ರೀನಿಧಿ ಮಹಿಳಾ ಸ್ವ ಸಹಾಯ ಸಂಘ ಪರಿಶಿಷ್ಟ ಪಂಗಡ ಸಮುದಾಯದವರೆಗೆ ೨.೫೦ ಲಕ್ಷ ರೂ, ಕಟ್ಲಟ್ಕೂರ್ ದೇವಿ ಮಹಿಳಾ ಸ್ವ ಸಹಾಯ ಸಂಘ ಪರಿಶಿಷ್ಟ ಪಂಗಡದ ಸಮುದಾಯದ ವರಿಗೆ ೨.೫೦ ಲಕ್ಷ ರೂ, ಉಮಾಮಹೇಶ್ವರಿ ಸ್ವ ಸಹಾಯ ಸಂಘ ಗಾರಲದಿನ್ನಿ ಪರಿಶಿಷ್ಟ ಪಂಗಡ ೨.೫೦ ಲಕ್ಷ ರೂ, ಎಸ್ ಈರಣ್ಣ ನಾಯಕ ಮಹಿಳಾ ಸ್ವ ಸಹಾಯ ಸಂಘ ರಾಜೋಳ್ಳಿ ಪರಿಶಿಷ್ಟ ಪಂಗಡ ಸಮುದಾಯದ ವರಿಗೆ ೨.೫೦ ಲಕ್ಷ ರೂ ಚೆಕ್ ನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ದೇವಸೂಗೂರು, ಗಿಲ್ಲೇಸೂಗೂರು ಬ್ಲಾಕ್ ಅಧ್ಯಕ್ಷರು ಪಕ್ಷದ ಹಿರಿಯ ಮುಖಂಡರುಗಳು, ಪಕ್ಷದ ಪದಾಧಿಕಾರಿಗಳು ಗ್ರಾ.ಪಂ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.