ಸ್ವ ಪರಿವರ್ತನೆಯಿಂದ ವಿಶ್ವ ಪರಿವರ್ತನೆಯತ್ತ ಬ್ರಹ್ಮಕುಮಾರಿ ವಿವಿ ಕಾರ್ಯ : ಈಶ್ವರಯ್ಯ

ಇಂಡಿ:ಎ.16:ದುಶ್ಚಟ ದುರಾಲೋಚನೆ, ದುರಹಂಕಾರಗಳನ್ನು ತ್ಯಜಿಸಿ ಬ್ರಹ್ಮಕುಮಾರಿ ವಿವಿಯಲ್ಲಿ ಸ್ವಯಂ ಪರಿವರ್ತನೆಯಾಗುವ ಜೊತೆಗೆ ವಿಶ್ವ ಪರಿವರ್ತನೆ ವಿರುದ್ಧ ಸಾಗಬೇಕಾಗಿದೆ. ಭೌತಿಕ ವಿನಾಶದಿಂದ ಆಧ್ಯಾತ್ಮಿಕತೆಯತ್ತ ಸಾಗುವ ಕೆಲಸ ಬ್ರಹ್ಮಕುಮಾರಿ ವಿವಿ ಮಾಡುತ್ತಿದೆ ಎಂದು ನಿವೃತ್ತ ಮುಖ್ಯ ನ್ಯಾಯಾಧೀಶರು ಆಂಧ್ರ ಪ್ರದೇಶ ಹೈಕೋರ್ಟು ಮತ್ತು ಕೇಂದ್ರದ ಹಿಂದುಳಿದ ವರ್ಗಗಳ ಅಧ್ಯಕ್ಷ ವಿ. ಈಶ್ವರಯ್ಯಾ ಹೇಳಿದರು.

ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ವಿವಿಯಿಂದ ನಡೆದ 25ನೆಯ ವರ್ಷದ ರಜತ ಮಹೋತ್ಸವ ಹಾಗೂ ಸಮಿರ್ಪಿತ ಸಹೋದರಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸಾನಿಧ್ಯ ವಹಿಸಿದ ಶಿರಶ್ಯಾಡದ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿ ಅಜ್ಞಾನದ ಅಂಧಕಾರವನ್ನು ದೂರ ಮಾಡಿ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಪ್ರಜಾಪಿತ ಬ್ರಹ್ಮಕುಮಾರಿ ನಿಶ್ವಾರ್ಥ ಸೇವೆ ಸ್ಮರಣೀಯ ಎಂದರು.

ನಾಗರತ್ನ ಅಕ್ಕನವರು ಮಾತನಾಡಿ ಈಶ್ವರಿಯ ವಿವಿಯಲ್ಲಿ ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿ ಮತ್ತು ಮಾನವನಿಂದ ದೇವಮಾನವ ಮಾಡುವ ಕಾರ್ಯ ನಡೆಯುತ್ತದೆ ಎಂದು ಮಾತನಾಡಿದ ಅವರು ಈಶ್ವರಿಯ ವಿವಿ ನಡೆದು ಬಂದ ದಾರಿಯ ಕುರಿತು ಮಾತನಾಡಿದರು.

ಇಂಡಿಯ ಸಿದ್ದಾರೂಢ ಮಠದ ಡಾ. ಸ್ವರೂಪಾನಂದ ಶ್ರೀಗಳು, ವಲಯ ಕೇಂದ್ರ ಬೆಳಗಾವಿ ನಿದೇಶಕರು ಹಾಗೂ ಮುಖ್ಯ ಸಂಚಾಲಕಿ ಅಂಬಿಕಾ ಅಕ್ಕನವರು, ರಾಜಯೋಗಿನಿ ಸೋಮಪ್ರಭ ಅಕ್ಕನವರು, ಬೆಳಗಾವಿಯ ವಿದ್ಯಾ ಅಕ್ಕನವರು, ಶೈಲಜಾ ತೆಲ್ಲೂರ, ಮಹೇಶ ಕೇಸಟ್ಟಿ, ಬಸವರಾಜ ಪಾಟೀಲ, ಬಿಕೆ.ರೇಣುಕಾ , ಬಿ.ಕೆ. ಯಮುನಾ ಅಕ್ಕನವರು ಮಾತನಾಡಿದರು.

ಇದೇ ವೇಳೆ 51 ಸಮರ್ಪಿತ ಸಹೋದರಿಯರಿಗೆ ಸನ್ಮಾನ ಮಾಡಲಾಯಿತು.

ಮೀರಾ ಅಕ್ಕನವರು,ವಿಜಯಪುರ ಸೇವಾ ಕೇಂದ್ರದ ಸರೋಜಾ ಅಕ್ಕನವರು ವೇದಿಕೆಯ ಮೇಲಿದ್ದರು.

ಅರವಿಂದ ಕಠಾರೆ, ವಿಜಯಕುಮಾರ ಪತಂಗೆ, ರಾಜಶ್ರೀ ಕೋಳೆಕರ ಮತ್ತಿತರಿದ್ದರು.