ಸ್ವ-ಗ್ರಾಮ ಭೀಮಸಮುದ್ರದಲ್ಲಿ 75ನೇ ಗಣರಾಜ್ಯೋತ್ಸವ ಆಚರಿಸಿದ ಸಂಸದರು

ಸಂಜೆವಾಣಿ ವಾರ್ತೆ

ದಾವಣಗೆರೆ. ಜ.೨೭; ಸ್ವ-ಗ್ರಾಮ ಭೀಮಸಮುದ್ರದ ಶ್ರೀ ಭೀಮೇಶ್ವರ ಬಾಲ ವಿಕಾಸ ಕನ್ನಡ ಹಾಗೂ ಆಂಗ್ಲ ಮಾಧ್ಯ ಪೂರ್ವ ಪ್ರಾಥಮಿಕ ಕಿರಿಯ-ಹಿರಿಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸದ ಕಾರ್ಯಕ್ರಮದಲ್ಲಿ ಸಂಸದರಾದ ಡಾ. ಜಿ.ಎಂ. ಸಿದ್ದೇಶ್ವರ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು.ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ದೇವಣ್ಣ, ಕಾರ್ಯದರ್ಶಿಗಳಾದ ಧನ್ಯಕುಮಾರ್, ಯುವ ಮುಖಂಡರಾದ ಅನಿತ್‌ಕುಮಾರ್ ಜಿ.ಎಸ್., ಶ್ರೀಮತಿ ಅಶ್ವಿನಿ ಶ್ರೀನಿವಾಸ್, ಶಾಲಾ ಸಮಿತಿ ಸದಸ್ಯರಾದ ಬಸವರಾಜಪ್ಪ ಹಾಗೂ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.