ಸ್ವ ಉದ್ಯೋಗ ಪ್ರೇರಣ ಶಿಬಿರ

ಸಂಜೆವಾಣಿ ವಾರ್ತೆ

ಹೊನ್ನಾಳಿ ಆ.12;  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಹೊನ್ನಾಳಿ ಹಾಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ದಾವಣಗೆರೆ ಸಹಯೋಗದೊಂದಿಗೆ ಸ್ವ ಉದ್ಯೋಗ ಪ್ರೇರಣ ಶಿಬಿರವನ್ನು  ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು. ಈವೇಳೆ ಶಿಬಿರವನ್ನು  ಬಿಎಲ್ ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿದರು ಮಹಿಳೆಯರು ಯಾರ ಹಂಗಿಲ್ಲದೆ ಕಷ್ಟಗಳಿಂದ ಹೊರಬರಲು ಉದ್ಯೋಗ ಪ್ರಾಮುಖ್ಯತೆ ಹಾಗಾಗಿ ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸಲು ಇಂಥ ಶಿಬಿರಗಳಿಗೆ ಬಂದು ಸ್ವ ಉದ್ಯೋಗ ಕಲಿಯಬೇಕು ಎಂದರು.ಯೋಜನಾಧಿಕಾರಿ ನವೀನ್ ಮಾತನಾಡಿ ಮಹಿಳೆಯರು ಸ್ವ ಉದ್ಯೋಗ ಕಲಿಯುವುದರಿಂದ ತಮ್ಮ ಜೀವನದ ಶೈಲಿಗಳು ಕಷ್ಟಕಾರ್ಪಣ್ಯಗಳನ್ನು ಹೊಡೆದೋಡಿಸಬಹುದು ತಮಗೆ ಬೇಕಾದಂತ ಜೀವನವನ್ನು ಸಾಗಿಸಲು ಸ್ವ ಉದ್ಯೋಗ ಶಿಬಿರದಲ್ಲಿ ಭಾಗವಹಿಸಿ  ಮಾಹಿತಿಯನ್ನು ತೆಗೆದುಕೊಂಡು ಮಹಿಳೆಯರು ತಮ್ಮ ಸ್ವಂತ ಉದ್ಯೋಗ ಮಾಡುವಲ್ಲಿ ಯಶಸ್ವಿ ಆಗಬೇಕು ಎಂದರು.ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಸುರೇಶ್ ಹೊಸಕೇರಿ ಮಾತನಾಡಿ ಮಹಿಳೆಯರು ಮನೆಯಲ್ಲಿ  ತಾಯಿ ತಂಗಿ ಅಕ್ಕನಾಗಿ ಇರುವುದಲ್ಲದೆ ಮಕ್ಕಳ ಪೋಷಣೆ ಗಂಡನ ಪೋಷಣೆ ಇನ್ನಿತರೆ ಯಾವುದೇ ಒಂದು ವರ್ಗದಲ್ಲೂ ಸಹ ಮಹಿಳೆಯರು ಮುಂದಿರುತ್ತಾರೆ ಏಕೆಂದರೆ ಮಹಿಳೆಯರು ಸ್ವಾ ಉದ್ಯೋಗಗಳನ್ನು ಕಲಿಯುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಉದ್ಯೋಗ ಮಾಡುವುದರಿಂದ ಬಡತನದಿಂದ ಹೊರಗೆ ಬರಬಹುದು ಎಂದರು.ಸ್ವ ಉದ್ಯೋಗದ ಶಿಬಿರದಲ್ಲಿ ಮಾತನಾಡಿದ ಕವಿತಾ ಧರ್ಮಸ್ಥಳ ವೀರೇಂದ್ರ ಹೆಗಡೆಯವರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಕೊಡಬೇಕೆನ್ನುವುದೇ ಅವರ ಮಹಾದಾಸೆಯಾಗಿತ್ತು ಏಕೆಂದರೆ ಮೊದಲೆಲ್ಲ ನಿರುದ್ಯೋಗಿ ಯುವಕರು ಅಲ್ಲಿಗೆ ಹೋಗಿ ಕೆಲಸ ಬೇಕು ಎಂದು ಕೇಳುತ್ತಿದ್ದರು ಬೆಳತಂಗಡಿಯ ಉಜಿರೆಯಲ್ಲಿ 1972 ರಲ್ಲಿ ಗ್ರಾಮ ಅಭಿವೃದ್ಧಿ ಸಂಸ್ಥೆಯನ್ನು ಹುಟ್ಟಿ ಹಾಕಿದ ಅವರು ನಿರುದ್ಯೋಗಿಗಳು ದುಡಿದು ತಿನ್ನಬೇಕೆಂಬುದೇ ಅವರ ಮಹಾದಾಸೆ, ಹಾಗೆ ದಾವಣಗೆರೆಯಲ್ಲಿ ಸರ್ಕಾರ ಸಹಾಯದೊಂದಿಗೆ 2009ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯನ್ನು ಎರಡು ಕೋಟಿ ರೂ ಮೊತ್ತಗಳಲ್ಲಿ ಕಟ್ಟಿಸಿ ಉದ್ಘಾಟಿಸಿ ಮಹಿಳಾ ಸಂಘಗಳನ್ನ ತಾಲೂಕು ಮಟ್ಟದಲ್ಲಿ ಬೆಳೆಸಿ ತಾಲೂಕುಗಳಲ್ಲಿ ಕಚೇರಿಗಳನ್ನಾ ಸ್ಥಪನೆ ಮಾಡಿ ಉದ್ಯೋಗ ಸೃಷ್ಟಿ ಮಾಡಿದರು ಎಂದರು.ಈ ಸಂದರ್ಭದಲ್ಲಿ ಯೋಜನೆಯ ಪದಾಧಿಕಾರಿಗಳು ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರು ಭಾಗವಹಿಸಿದ್ದರು ಮತ್ತು ಮೇಲ್ವಿಚಾರಕರು ಇದ್ದರು.