ಸ್ವ ಉದ್ಯೋಗ ಪ್ರೇರಣಾ ಶಿಬಿರ

ಕಲಬುರಗಿ,ಆ.17:ತಾಲೂಕಿನ ಫರತಾಬಾದ ಗ್ರಾಮದಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರವನ್ನು ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಯಿತು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶರಣಮ್ಮ ಚಂದ್ರಶೇಖರ ಸಜ್ಜನ ಅವರು ವಹಿಸಿದ್ದರು.
ಉದ್ಘಾಟನೆಯನ್ನು ಶರಣಬಸವೇಶ್ವರ ದೇವಸ್ಥಾನದ ಕಾರ್ಯದರ್ಶಿಗಳಾದ ಚನ್ನಬಸಪ್ಪ ಸಜ್ಜನರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಲಕ್ಕೆ ಚಾಲನೆ ನೀಡಿದರು. ಜಿಲ್ಲಾ ನಿರ್ದೇಶಕರಾದ ಸತೀಶ ಸುವರ್ಣ ಅವರು ಸ್ವದ್ಯೋಗಕ್ಕಾಗಿ ಯೋಜನೆಯು ಕೈಗೊಂಡ ವಿವಿಧ ಕಾರ್ಯಕ್ರಮದ ಕುರಿತು ಪರಿಚಯಿಸಿದರು. ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡುವಂತಹ ಕೌಶಲ್ಯ ಅಭಿವೃದ್ಧಿ ತರಬೇತಿಯ ಬಗ್ಗೆ ಸೆಲ್ಕೋ ಸೋಲಾರ್‍ನ ಉಪಕರಣಗಳ ಬಗ್ಗೆ ಸಿಡ್ಬಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪರಿಸರ ಜಾಗೃತಿ ಮತ್ತು ನೀರು ಉಳಿಸಿ ಅಭಿಯಾನದ ಬಗ್ಗೆ, ದುಶ್ಚಟ ಮುಕ್ತ ಸಮಾಜದ ನಿರ್ಮಾಣದ ಬಗ್ಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ರೀಸೆಟ್ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಅರ್ಜುನರಾವ ಅವರು ತರಬೇತಿ ಸಂಸ್ಥೆಯು ನೀಡುತ್ತಿರುವ ವಿವಿಧ ಸ್ವದ್ಯೋಗ ತರಬೇತಿಗಳು ಹಾಗೂ ಅರ್ಹತೆಗಳ ಬಗ್ಗೆ ತರಬೇತಿ ಸಂಸ್ಥೆಯ ವ್ಯವಸ್ಥೆಗಳ ನೀಡುವ ವಿಧಾನಗಳ ಬಗ್ಗೆ ವಿವರಿಸಿದರು.
ಸೆಲ್ಕೋ ಸೋಲಾರ್ ಸಂಸ್ಥೆಯ ಅಧಿಕಾರಿಗಳಾದ ವಿಷ್ಣು ಅವರು ಸೆಲ್ಕೋ ಸೋಲಾರ್ ಅಡಿಯಲ್ಲಿ ಸಿಗುವ ವಿವಿಧ ಸ್ವ ಉದ್ಯೋಗ ಪ್ರೇರಿತ ಉಪಕರಣಗಳ ಬಗ್ಗೆ ಪರಿಚಯಿಸಿದರು. ಮತ್ತು ಅಂಗವಿಕಲರು, ವಿಧವೆಯರಿಗೆ ಇರುವ ವಿಶೇಷ ರಿಯಾಯಿತಿಗಳ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ತಾಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ಸಂಸ್ಥೆಯ ಕಾರ್ಯಕ್ರಮಗಳನ್ನು ಸ್ಮರಿಸಿ ಪ್ರಶಂಸಿದರು. ಹಾಗೂ ಸ್ವಉದ್ಯೋಗ ತರಬೇತಿಯ ಪ್ರಯೋಜನಗಳನ್ನು ತಿಳಿಸಿದರು. ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಶಿವರಾಜ ಸಜ್ಜನ, ತಾಲೂಕಿನ ಯೋಜನಾಧಿಕಾರಿಗಳಾದ ಪ್ರವೀಣ್ ಆಶ್ಚರ್ಯ, ಯೋಗ ಶಿಕ್ಷಕರಾದ ಈರಣ್ಣ ಸೋನಾರ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ.ಮಮತಾ, ವಲಯದ ಮೇಲ್ವಿಚಾರಕರಾದ ಜಗನ್ನಾಥ ಸಿಂಧೂರ, ಮಮತಾ ಸೇವಾ
ಪ್ರತಿನಿಧಿಗಳು, ಶರಣಮ್ಮ ಹಿರೇಮಠ, ಗ್ರಾಮೀಣ ಸೇವಾದಾರರಾದ ಶ್ರೀಧರ್ ಬೆಣ್ಣೂರ್, ರಾಘವೇಂಧ್ರ ಅಳ್ಳಳ್ಳಿ, ಪ್ರಜ್ವಲ್ ಫರತಾಬಾದ ವಲಯದ ಮಹಿಳಾ ಸಂಘದ ಬಹುಸಂಖ್ಯೆಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.