ಸ್ವ್ವಾತಂತ್ರ್ಯ ದಿನದಂದು ಅನಾಥ ಮಕ್ಕಳಿಗೆ ಊಟ, ಹಣ್ಣು ವಿತರಣೆ

ಬೀದರ :ಆ.16:ನಗರದಲ್ಲಿ ಸ್ವತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಗುರು ನಾನಕ್ ದೇವ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಆಧಂತ್ಯ ಸಂಘದ ವತಿಯಿಂದ ನಗರದ ಹಲವೆಡೆ ಬಸ್ ನಿಲ್ದಾಣ , ಅಂಬೇಡ್ಕರ ವೃತ್ತ ,ರೈಲ್ವೇ ಸ್ಟೇಷನ್, ಸರ್ಕಾರಿ ಆಸ್ಪತ್ರೆ ಸೇರಿ ಹಲವು ಕಡೆ ಅನಾಥ ಮಕ್ಕಳಿಗೆ ಊಟ, ಹಣ್ಣು, ನೀರು ವಿತರಣೆ ಮಾಡುವ ಮೂಲಕ ಸ್ವತಂತ್ರ್ಯ ದಿನಾಚರಣೆ ಆಚರಿಸಿದ್ದರು.
ಈ ಸಂದರ್ಭದಲ್ಲಿ ಮುಖರಾದ ಪ್ರಣವ ಪಾಟೀಲ್, ಆಶಿಷ್ ಪಾಟೀಲ್,ಆದಿತ್ಯ, ಅಮಿತ್, ಸ್ಪ್ಯಾನಿ,ಅಭಿಷೇಕ್ ಪಾಟೀಲ್,ರಾಜೀವ್,ಮಹೇಶ್ ಟಿ,ಮಹೇಶ್ ,ಕೈಲಾಶ್,ಅಂಕಿತ್,ಶಿವಶಂಕರ್, ಅದೈತ, ಮೌನಿಲ್ ಇದ್ದರು.