ಸ್ವೆಟ್ ಪಾರ್ಕ್ ಫಿಟ್ನೆಸ್ ನಿಂದ ಕ್ರಿಕೇಟ್ ಪಂದ್ಯಾವಳಿ:

ದಾವಣಗೆರೆ.ನ.೨೨; ಸ್ವೆಟ್ ಪಾರ್ಕ್ ಫಿಟ್ನೆಸ್ ವತಿಯಿಂದ ‘ಪುನಿತ್ ರಾಜ್ ಕುಮಾರ್’ ಸ್ಮರಣಾರ್ಥ ಇಂದು ಮತ್ತು 23 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸ್ವೆಟ್ ಪಾರ್ಕ್ ಫಿಟ್ ನೆಸ್ ಮಾಲೀಕ ರೂಪಿತ್ ನಾಗರಾಜ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವೆಟ್ ಪಾರ್ಕ್ ಫಿಟ್ನೆಸ್ ವತಿಯಿಂದ ಜಿಮ್‌ನ ಸದಸ್ಯರುಗಳಿಗೆ ಪುನಿತ್ ರಾಜಕುಮಾರ್ ನೆನಪಿಗಾಗಿ ‘ಪುನೀತ್ ರಾಜ್ ಕುಮಾರ್ ಕಪ್’ ಕ್ರಿಕೆಟ್ ಪಂದ್ಯವಳಿಗಳನ್ನು ಏರ್ಪಡಿಸಲಾಗಿದ್ದು, ಈ ಪಂದ್ಯಾವಳಿಯಲ್ಲಿ ಒಂಭತ್ತು ತಂಡಗಳು ಭಾಗವಹಿಸಲಿವೆ ಎಂದರು.ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ನ. 23 ರಂದು ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಬಹುಮಾನ ವಿತರಿಸಲಿದ್ದಾರೆ ಎಂದು ತಿಳಿಸಿದರು.ಪಂದ್ಯಾವಳಿಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ತಂಡಗಳಿಗೆ ನಗದು ಬಹುಮಾನ ಮತ್ತು ಪಾರಿತೋಷಕ ನೀಡಲಾಗುವುದು. ಅಲ್ಲದೆ ಶ್ರೇಷ್ಠ ಆಟಗಾರ, ಬೆಸ್ಟ್ ಬ್ಯಾಟ್ಸ್ ಮನ್, ಬೆಸ್ಟ್ ಬೌಲರ್ ಗಳಿಗೆ ನಗದು ಹಾಗೂ ಪಾರಿತೋಷಕ ಇರುತ್ತದೆ ಎಂದು ವಿವರಿಸಿದರು.ಪಾಲಿಕೆ ಸದಸ್ಯರಾದ ಎ. ನಾಗರಾಜ್ ಮಾತನಾಡಿ, ಪುನೀತ್ ರಾಜಕುಮಾರ್ ಅವರು ನಮ್ಮ ಸ್ವೆಟ್ ಪಾರ್ಕ್ ಫಿಟ್ನೆಸ್ ಉದ್ಘಾಟನೆಗೆ ಬರಬೇಕಿತ್ತು. ಆದರೆ, ಆಗ ಲಾಕ್ಡೌನ್ ಇದ್ದ ಕಾರಣ ಅವರು ಬರಲು ಸಾಧ್ಯವಾಗಿರಲಿಲ್ಲ. ಇದೇ ನ.10 ಕ್ಕೆ ಬರುವುದಾಗಿ ತಿಳಿಸಿದ್ದರು. ಆದರೀಗ ಅವರೆ ನಮ್ಮ ಜೊತೆಯಲ್ಲಿಲ್ಲ ಎಂಬುದನ್ನು ನೆನೆಯಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪುನೀತ್ ಸ್ಮರಣಾರ್ಥವಾಗಿಯೇ ನಾವು ಕ್ರಿಕೇಟ್ ಪಂದ್ಯಾವಳಿ ಆಯೋಜಿಸಿದ್ದೇವೆ ಎಂದು ತಿಳಿಸಿದರು.ನಮ್ಮ ಫಿಟ್ನೆಸ್ ಪಾರ್ಕ್ ನಲ್ಲಿ ಆರೋಬಿಕ್ಸ್, ಯೋಗ, ಜುಂಬಾ ಮತ್ತು ಜಿಮ್ ನ್ನು ಕಲಿಸಿಕೊಡಲಾಗುತ್ತದೆ. ಪುನೀತ್ ಅವರ ಘಟನೆಯ ನಂತರ ಬಿಪಿ, ಆಕ್ಸಿಜನ್, ಟೆಂಪ್ರೆಚರ್ ಪರಿಶೀಲಿಸಿಯೆ ಒಳಗೆ ಪ್ರವೇಶ ನೀಡಲಾಗುತ್ತದೆ ಎಂದರು.ಗೋಷ್ಠಿಯಲ್ಲಿ ಫಿಟ್ನೆಸ್ ಪಾರ್ಕ್ ಫಿಟ್ನೆಸ್ ಕನ್ಸಲ್ಟೆಂಟ್ ನಿಖಿಲ್, ಅರುಣ್, ನವೀನ್ ಬೆಳ್ಳೊಡಿ ಇದ್ದರು.