ಗುರುಮಠಕಲ್:ಮಾ.31: ಹದಿನೆಂಟು ವರ್ಷ ಮೇಲ್ಪಟ್ಟ ಜನರು ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಯಾರೂ ಕೂಡ ಮತದಾನದಿಂದ ವಂಚಿತ ರಾಗಬಾರದು ಎಂದು ಚುನಾವಣೆ ಅಧಿಕಾರಿ ಶ್ರೀ ಸಂತೋಷ್ ಕುಮಾರ ಅವರು ಹೇಳಿದರು. 39- ಗುರುಮಠಕಲ್ ವಿಧಾನಸಭಾ ಮತಕ್ಷೇತ್ರದ ಚುನಾವಣೆ ಅಧಿಕಾರಿಗಳ ಸಮ್ಮುಖದಲ್ಲಿ ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಸ್ ನಿಲ್ದಾಣದ ಆವರಣದಲ್ಲಿ ಸ್ವೀಪ್ ಕಾರ್ಯಕ್ರಮವನ್ನು ತಾಲೂಕು ಸ್ವೀಪ್ ಸಮಿತಿ ಅಧಿಕಾರಿಗಳ ಸಮ್ಮುಖದಲ್ಲಿ ಮೇಣದ ಬತ್ತಿಗಳನ್ನು ಹಚ್ಚುವದರಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ವೇಳೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ಶ್ರೀ ಸಂತೋಷ್ ಕುಮಾರ ನಿರೇಟಿ ಯವರು ಮಾತನಾಡುತ್ತ ಪ್ರತಿಯೊಬ್ಬರಿಗು ನಾವು ಮತದಾನದ ಬಗ್ಗೆ ಅರಿವು ಮೂಡಿಸಬೇಕು ನಮ್ಮ ಪಟ್ಟಣದ ಭಾಗದ ಬಹಳಷ್ಟು ಜನರು ಬೊಂಬಾಯಿ. ಬೆಂಗಳೂರು. ಹೈದರಾಬಾದ್.ಪೂಣೆ ಅಂತಹ ನಗರಗಳಿಗೆ ಬದುಕಲು ಹೋಗಿದ್ದಾರೆ ಅಂತವರನ್ನು ಕರೆಯಿಸಿ ಅವರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿ ನಮ್ಮ ತಾಲೂಕಿನ ಮತದಾನದ ಸಂಖ್ಯೆ ಹೆಚ್ಚು ಮಾಡಿದರೆ ತಾಲೂಕಿನ ಎಲ್ಲಾ ಅಧಿಕಾರಿಗಳಿಗು ಕೀರ್ತಿ ಬರುವುದು ಜೊತೆಗೆ ನಮ್ಮ ಗುರುಮಠಕಲ್ ವಿಧಾನಸಭಾ ಮತಕ್ಷೇತ್ರದಿಂದ ಹದಿನೆಂಟು ವರ್ಷ ಮೇಲ್ಪಟ್ಟ ವರು ಎಲ್ಲಾರು ಹೆಚ್ಚಿನ ಸಂಖ್ಯೆಯಲ್ಲಿ ಮತಹಾಕ ಬೇಕು ಮತ್ತು ಇದು ಅಲ್ಲದೆ ಎಂಬತ್ತು ವರ್ಷ ವಯಸ್ಸಿನ ಮೆಲ್ಪಟ್ಟವರಿಗೆ ಅವರವರ ಮನೆಗೆ ಹೋಗಿ ಮತವನ್ನು ಪಡೆಯುವುದು ಈ ವರ್ಷ ಮೊಟ್ಟ ಮೊದಲು ಜಾರಿಯಲ್ಲಿ ಬಂದಿದೆ ಆದ್ದರಿಂದ ನಾವೆಲ್ಲರೂ ಹೆಚ್ಚಿನ ಶ್ರಮ ವಹಿಸಿ ಮತದಾನರಿಗೆ ಮತದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಬಹಳಷ್ಟು ಶ್ರಮ ವಹಿಸ ಬೇಕೆಂದರು. ಮತಹಾಕುವದು ನಮ್ಮ ನಿಮ್ಮೆಲ್ಲರ ಹಕ್ಕು ಮತದಾನದ ಸಂಖ್ಯೆ ಈ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕೆಂದು ಮನವಿ ಮಾಡಿದರು. ಈ ವೇಳೆ ಸಹಾಯಕ ಚುನಾವಣಾಧಿಕಾರಿ ಮೊಹಮ್ಮದ್ ಮೋಸಿನ್ ಆಹ್ಮದ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಎಸ್ ಎಸ್ ಕಾದ್ರೊಳ್ಳಿ ಯವರು. ಹಣ್ಮಂತ್ರಾಯ ಗೋಂಗಲೆ ಅವರು ಮಾತನಾಡಿದರು. ಅರಿವು ಮೂಡಿಸುವ ಜಾತ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀ ಮತಿ ಭಾರತಿ ಎಸ್ ದಂಡೋತಿ. ಸಿಡಿಪಿಓ ಅಧಿಕಾರಿ ಶ್ರೀ ಮತಿ ವನಜಾಕ್ಷಿ ಬೆಂಡಿಗೇರಿ. ನೌಕರರ ಸಂಘದ ಅಧ್ಯಕ್ಷರಾದ ನಾರಾಯಣ ರೆಡ್ಡಿ ಪೆÇಲೀಸ್ ಪಾಟೀಲ್ ಎಲ್ಲಾ ಸರ್ಕಾರಿ ನೌಕರರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನ ಅರಿವು ಮೂಡಿಸುವ ಜಾತ ಕಾರ್ಯಕ್ರಮವು ಮೇಣದಬತ್ತಿ ಹಚ್ಚಿಕೊಂಡು ಸಾರ್ವಜನಿಕ ಬಸ್ ನಿಲ್ದಾಣದಿಂದ ಪ್ರಾರಂಭ ಗೊಂಡು ಮುಖ್ಯ ರಸ್ತೆಯಮೂಲಕ ಜನರಿಗೆ ಅರಿವು ಮೂಡಿಸುವಲ್ಲಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.