ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ

ಗದಗ, ಮೇ 5: ನರಗುಂದ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕಡ್ಡಾಯ ಮತದಾನ ಜಾಗೃತಿ ಕುರಿತು ಕ್ಯಾಂಡಲ್ ಲೈಟ್ ಮತ್ತು ಮೊಬೈಲ್ ಟಾರ್ಚ್ ಬೆಳಗುವುದರ ಮೂಲಕ ಮತದಾರರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು. ನಗರದ ಕೊಟ್ನೂರು ಬಸವೇಶ್ವರ ದೇವಸ್ಥಾನದಿಂದ ಜಾಥಾ ಆರಂಭವಾಗಿ ಬಸ್ ನಿಲ್ದಾಣದ ಬಳಿಕ ಸರ್ಕಾರಿ ಶಾಲೆಯ ಮೈದಾನದಲ್ಲಿ ಸೇರುವುದರ ಮೂಲಕ ಕ್ಯಾಂಡಲ್ ಲೈಟ್ ಬೆಳಗಲಾಯಿತು.

    ಈ ವೇಳೆ ಮೇ 7 ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಲಾಯಿತು. ಬಳಿಕ ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ರಚಿಸಿ ಮೊಬೈಲ್ ಟಾರ್ಚ್ ಬೆಳಗುವುದರ ಮೂಲಕ ಕಡ್ಡಾಯ ಮತದಾನ ಕುರಿತು ಘೋಷಣೆಗಳನ್ನು ಕೂಗಲಾಯಿತು.
     ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಸೋಮಶೇಖರ್ ಬಿರಾದಾರ ಮಾತನಾಡಿ,  ಎಲ್ಲ ಮತದಾರರು ಮೇ 7 ರಂದು ಎಲ್ಲೂ ವಲಸೆ ಹೋಗದೇ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು. ಸ್ವೀಪ್ ಸಮಿತಿ ಕಾರ್ಯ ಮತ್ತು ಉದ್ದೇಶ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾದಾಗ ಮಾತ್ರ ಯಶಸ್ವಿಯಾಗುತ್ತದೆ ಎಂದರು.
    ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾ.ಉ) ಸಂತೋಷಕುಮಾರ್ ಪಾಟೀಲ್, ಪುರಸಭೆ ಮುಖ್ಯ ಅಧಿಕಾರಿ ಅಮಿತ್ ತೇರದಾಳ, ಪುರಸಭೆ ಆರೋಗ್ಯ ನಿರೀಕ್ಷಕ ಎಸ್.ಎಸ್.ಬ್ಯಾಳಿ, ಪಶೋಸಂಗೋಪನೆ ಸಹಾಯಕ ನಿರ್ದೇಶಕ ಡಾ.ವಂಕಟೇಶ್, ತಾಲೂಕಿನ  ಗ್ರಾಮ ಪಂಚಾಯತ ಪಿಡಿಓಗಳು, ಕಾರ್ಯದರ್ಶಿಗಳು, ನರೇಗಾ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಎನ್.ಆರ್.ಎಲ್.ಎಂ ಸಿಬ್ಬಂದಿ ಭಾಗವಹಿಸಿದ್ದರು.