ಸ್ವೀಪ್ ಜಾಗೃತಿ ಧ್ವಜಾರೋಹಣ

ಕಲಬುರಗಿ,ಏ.30: ನಮ್ಮ ನಡೆ-ಮತಗಟ್ಟೆ ಕಡೆ ಸ್ವೀಪ್ ಜಾಗೃತಿ ವಿಶೇಷ ಅಭಿಯಾನ ಅಂಗವಾಗಿ ಅಫಜಲಪೂರ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಚುನಾವಣಾಧಿಕಾರಿ ಮಹೆಮೂದ್ ಅವರು ಸ್ವೀಪ್ ಜಾಗೃತಿ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ನೆರದ ಅಧಿಕಾರಿ-ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಮತದಾನ ಪಾವಿತ್ರ್ಯತೆ ಮತ್ತು ಮತದಾನದ ಬಗ್ಗೆ ಪ್ರತಿಜ್ಞೆ ವಿಧಿ ಬೋಧಿಸಿದರು.
ಸಹಾಯಕ ಚುನಾವಣಾಧಿಕಾರಿ ಮತ್ತು ತಹಶೀಲ್ದಾರ ಸಂಜೀವಕುಮಾರ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ,
ಪುರಸಭೆ ಮುಖ್ಯಧಿಕಾರಿ ಪಂಕಜ್ ಸೇರಿದಂತೆ ಇನ್ನಿತರ ಅಧಿಕಾರಿ ಸಿಬ್ಬಂದಿಗಳು, ಬಿ.ಎಲ್.ಓ. ಗಳು ಉಪಸ್ಥಿತರಿದ್ದರು.