ಸ್ವೀಪ್ ಚಟುವಟಿಕೆಗಳಿಂದ ಜಾಗೃತಿ ವೃದ್ಧಿ ; ಶಿಲ್ಪಾಶರ್ಮಾ

ಯಾದಗಿರಿ:ಡಿ.20: ಸ್ವೀಪ್ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನ, ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಜ್ಞಾನ ವೃದ್ಧಿಯಾಗುತ್ತದೆ ಎಂದು ಸ್ವೀಪ್ ಜಿಲ್ಲಾ ನೋಡಲ್ ಅಧಿಕಾರಿಗಳೂ ಆದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶಿಲ್ಪಾ ಶರ್ಮಾ ನುಡಿದರು.
ನಗರದ ನ್ಯೂ ಕನ್ನಡ ಪದವಿಪೂರ್ವ ಕಾಲೇಜಿನಲ್ಲಿ ಭಾರತ ಚುನಾವಣೆ ಆಯೋಗ, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯಿತಿ, ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪದವಿಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಸ್ವೀಪ್ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಚುನಾವಣೆ ಮಹತ್ವ ಅರಿಯಬೇಕು ಪ್ರಜಾಪ್ರಭುತ್ವ ವ್ಯವಸ್ಥೆನಲ್ಲಿ ಮತದಾನ ನಿಮ್ಮ ಹಕ್ಕು, ನಿಮ್ಮ ಅಧಿಕಾರ ಹಾಗೂ ಬದಲಾವಣೆ ತರಲು ಇರುವ ಅಸ್ತ್ರವಾಗಿದೆ ಎಂದು ತಿಳಿ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಹಿಳ್ಳಿ ಮಾತನಾಡಿ ಇಲಾಖೆ ವತಿಯಿಂದ ಇದುವರೆಗೆ 3962 ಹೊಸ ಮತದಾರರನ್ನು ಗುರ್ತಿಸಿ ಮದಾರರ ವಾಹಿನಿಗೆ ತರುವ ಕಾರ್ಯ ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಈಲ್ಲೆಯ ಪ್ರಾಂಶುಪಾಲರು, ಉಪನ್ಯಾಸಕರು ಸಕ್ರಿಯವಾಗಿ ತೊಡಗಿ ಜಿಲ್ಲಾಡಳಿತ ನೀಡಿದ ಕಾರ್ಯ ಯಶಸ್ವಿಗೊಳಿಸಲಾಗಿದೆ ಎಂದು ತಿಳಿಸಿ ‘ಸ್ವೀಪ್’ ಕಾರ್ಯಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ನ್ಯೂಕನ್ನಡ ಕಾಲೇಜು ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ವಿದ್ಯಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ರಾಮಪ್ಪ ಪಾಟೀಲ್ ಚೇಗುಂಟಾ ಮಾತನಾಡಿ ನಾಗರಿಕರು ಮತದಾನದ ಕರ್ತವ್ಯ ಹಾಗೂ ಹಕ್ಕುಗಳನ್ನು ತಿಳಿದುಕೊಂಡು ಮತದಾನ ಪ್ರಕ್ರಿಯೆಯಲ್ಲಿ ಜವಬ್ದಾರಿಯಿಂದ ಭಾಗವಹಿಸಬೇಕೆಂದರು.
ಪ್ರಾಚಾರ್ಯ ವೆಂಕಟರಾವ್ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಅಂಗಡಿ ಸ್ವಾಗತಿಸಿದರು, ಗಿರಿಜಾ ಹಿರೇಮಠ ಪ್ರಾರ್ಥಿಸಿದರು, ಸಹಾಯಕ ನೋಡಲ್ ಅಧಿಕಾರಿ ಶರಣಪ್ಪ ರಾಹುಲ್, ಪ್ರಾಚಾರ್ಯರಾದ ಗಣಪತಿ ಪೂಜಾರಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಮಹಾಂತೇಶ ಕಲಾಲ್, ಉಪನ್ಯಾಸಕರಾದ ಸಿದ್ರಾಮಪ್ಪ, ಭೀಮಶಪ್ಪ, ಲಕ್ಷ್ಮಣ, ಪ್ರಕಾಶ ರೆಡ್ಡಿ, ಶ್ರೀಶೈಲ ಜಿ, ಶಾಮರಾವ ಪಾಟೀಲ್, ಅಶೋಕ ಅವಂಟಿ, ರೀನಾವತಿ, ರಾಘವೇಂದ್ರರೆಡ್ಡಿ ಸೇರಿದಂತೆ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚಂಡ್ರಿಕಿ ರಂಗೋಲಿ ಸ್ಪರ್ಧೆ.
ಗುರುಮಠಕಲ್ ತಾಲೂಕಿನ ಚಂಡ್ರಿಕಿ :ಗ್ರಾಮ ಪಂಚಾಯಿತಿ ವತಿಯಿಂದ ಗ್ರಪಂ ಚುನಾವಣೆ ಮತದಾನ ಜಾಗೃತಿ ಜಾಥಾ ಅಂಗವಾಗಿ ಗ್ರಾಮ ಪಂಚಾಯತ ವತಿಯಿಂದ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವಿಧ್ಯಾರ್ಥಿನಿಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಭೀಮರಾಯ ಹಾಗು ಕರವಸುಲಿಗರಾದ ಖಾಜಹುಶೆನ್. ಪಶುವೈದ್ಯಪರಿವಿಷ್ಕಾರಾದ ಶ್ರೀಮತಿ ಸಂಗನಬಸಮ್ಮ ಹಾಗು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಶ್ರೀ ನಿವಾಸ ರೆಡ್ಡಿ ಖಲೀಲುನ್ನಿಸಾಬೇಗಂ. ಡಿ. ಕ್ರುಷ್ಣ ರೆಡ್ಡಿ. ಮೌನೇಶ್ವರ.. ಚಂದ್ರನಾಯಕ.. ಭಾರತಿ ಎಸ್.. ಧ್ಯೆಹಿಕ ಶಿಕ್ಷರಾದ ಸುಧಾಕರ್ ಜನಾಜ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಯಶೊಧಮ್ಮ. ವಿಜಯ ಮ್ಮ. ಲಕ್ಷ್ಮಿ. ರಾಜೇಶ್ವರಿ ಹಾಗೂ ಗ್ರಾಮ ಸ್ಥರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.