ಸ್ವೀಡನ್‍ನ “ಆರ್ಟ್‍ಕ್ವೀನ್ ಉದ್ಯಾನ ಕಲಾಕೂಟ” ದಲ್ಲಿ ಸಂಡೂರಿನ ಕಲಾವಿದ ಶ್ರೀನಾಥ್ ಕಾಳೆ


ಸಂಜೆವಾಣಿ ವಾರ್ತೆ
ಸಂಡೂರು :ಜು:22: ಇಂದಿನಿಂದ ಅಂದರೆ ಜುಲೈ 22 ಮತ್ತು 23 ರಂದು ಸ್ವೀಡನ್ ದೇಶದ ಕ್ರಿಶ್ಚಿಯನ್‍ಸ್ಟ್ಯಾಡ್‍ನಲ್ಲಿ ಆರ್ಟ್‍ಕ್ವೀನ್ “ಉದ್ಯಾನ ಕಲಾಕೂಟ” ದೊಂದಿಗೆ ತನ್ನ ಮೂರನೇ ವರುಷದ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದೊಂದು ಅದ್ಭುತ “ಕಲಾಬಂದ”ವಾಗಿರುತ್ತದೆ ಈ ಕಲಾ ಕೂಟವು ಪ್ರತಿ ಬೇಸಗೆಯಲ್ಲಿ ಆರ್ಟ್‍ಕ್ಯಾಸಲ್‍ನ ಹೊರವಲಯದಲ್ಲಿ ನಡೆಯುತ್ತಿದ್ದು ಸುಮಾರು 10 ರಿಂದ 15 ಕಲಾವಿದರು ವಿವಿಧ ಶೈಲಿ ಮತ್ತು ತಂತ್ರಗಾರಿಕಯಿಂದ ಸ್ಥಳದಲ್ಲಿಯೇ ಕಲಾಕೃತಿಗಳನ್ನು ರಚಿಸುತ್ತಾರೆ.  ಈ ಉದ್ಯಾನ ಕಲಾಕೂಟದಲ್ಲಿ ಸಂಡೂರಿನ ಕಲಾವಿದ ಶ್ರೀನಾಥ್ ಕಾಳೆಯವರು ಭಾಗವಾಹಿಸುತ್ತಿದ್ದಾರೆ.
50 ಮತ್ತು 60 ವರುಷದ ಹಳೆಯ ಕಾರುಗಳ ಪ್ರದರ್ಶನವೂ ಈ ಉದ್ಯಾನ ಕಲಾಕೂಟದಲ್ಲಿ ನಡೆಯುತ್ತಿದ್ದು ನಮ್ಮದೇ ಆದ ಆರ್ಟ್ ಫಾರ್ ಯು (Art 4 U) ಬ್ಯಾಂಡ್‍ನೊಂದಿಗೆ ಪ್ರತ್ಯಕ್ಷ ಸಂಗೀತ, ನೃತ್ಯ ಪಟುಗಳ ನರ್ತನಗಳೂ ನಡೆಯಲಿವೆಯಲ್ಲದೇ ಜೊತೆಗೆ ಶ್ರೀನಾಥ್ ಕಾಳೆ ಅವರಿಂದ ಪ್ರತ್ಯಕ್ಷ ಕಲಾಕೃತಿ ರಚನೆ ಹಾಗೂ ಇನ್ನಿತರ ಕಲಾಪ್ರಕಾರಗಳ ಪ್ರದರ್ಶನಗಳೂ ಇರುತ್ತವೆ ಎಂದು ಆರ್ಟ್‍ಕ್ವೀನ್ ರೆಬೆಕ್ಕಾ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Attachments area