ಸ್ವಿಮ್ಮಿಂಗ್ ಪೂಲ್ ಬಳಿ ಜಾನ್ಹವೀ ಕಪೂರ್ ನೃತ್ಯ

ಟಿ ಜಾನ್ಹವೀ ಕಪೂರ್ ತಮ್ಮ ಸ್ನೇಹಿತರ ಜೊತೆ ಒಂದು ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಸ್ವಿಮ್ಮಿಂಗ್ ಪೂಲ್ ಬಳಿ ತಮ್ಮ ಸ್ನೇಹಿತರ ಜೊತೆ ಅವರು ನೃತ್ಯ ಮಾಡುತ್ತಿದ್ದಾರೆ .ಈ ವೀಡಿಯೋದಲ್ಲಿ ಅವರ ಪೈಲೆಟ್ಸ್ ಟ್ರೈನರ್ ಜೊತೆಗೆ ಇತರ ಟೀಮ್ ಮೆಂಬರ್ ಗಳು ಕೂಡ ಇದ್ದಾರೆ.

ಜಾನ್ಹವಿ ಇದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಾ – “ನಾವು ಇದಕ್ಕಿಂತಲೂ ಹೆಚ್ಚು ಕೂಲ್ ಆಗಿ ಕಾಣುತ್ತೇವೆ. ಆದರೆ…” ಹೀಗೆ ಬರೆದಿದ್ದಾರೆ. ಜಾನ್ಹವಿ ಇತ್ತೀಚೆಗೆ ಮಾಲ್ಡೀವ್ಸ್ ನಲ್ಲಿ, ನಂತರ ಉದಯಪುರದಲ್ಲಿ ಪ್ರವಾಸ ಮುಗಿಸಿ ಬಂದಿದ್ದರು. ಜಾನ್ಹವಿ ಅವರು ತನ್ನ ಈ ಹಳೆಯ ಪ್ರವಾಸದ ಸುಂದರ ನೆನಪುಗಳನ್ನೂ ಫ್ಯಾನ್ಸ್ ಜೊತೆಗೆ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜಾನ್ಹವಿ ಅನೇಕ ಚಿತ್ರಗಳನ್ನು ಶೇರ್ ಮಾಡಿದ್ದಾರೆ .ಅದರಲ್ಲಿ ಅವರು ತಮ್ಮ ಸ್ನೇಹಿತರ ಜೊತೆ ಮೋಜು ಮಸ್ತಿ ಮಾಡುತ್ತಿರುವುದನ್ನು ಕಾಣಬಹುದು.

ಬಾಲಿವುಡ್ ನಟಿ ಅನನ್ಯಾ ಪಾಂಡೆ ಗೆ ಬಾಲ್ಯದ ನೆನಪು ಬಂದಾಗ….

ಬಾಲಿವುಡ್ ನಟಿ ಅನನ್ಯಾ ಪಾಂಡೆ ಕೆಲವು ಫಿಲ್ಮ್ ಗಳಲ್ಲಿ ಮಾತ್ರ ಕೆಲಸ ಮಾಡಿದ್ದರು.ಆದರೂ ಅವರು ಆಗಾಗ ಚರ್ಚೆಯಾಗುತ್ತಲೇ ಇರುತ್ತಾರೆ. ಅನನ್ಯಾ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿಯೂ ಬಹಳ ಸಕ್ರಿಯರಾಗಿರುತ್ತಾರೆ ಹಾಗೂ ತನ್ನ ಹೊಸ ಹೊಸ ಫೋಟೋಗಳನ್ನು ವಿಡಿಯೋಗಳನ್ನು ಶೇರ್ ಮಾಡುತ್ತಾ ಇರುತ್ತಾರೆ.


ಇದೀಗ ನಟಿಗೆ ತನ್ನ ಬಾಲ್ಯದ ನೆನಪುಗಳು ತುಂಬಾ ಕಾಡುತ್ತಿದ್ದು ಕೆಲವು ಫೋಟೋಗಳನ್ನು ಶೇರ್ ಮಾಡುವ ಮೂಲಕ ಬಾಲ್ಯದ ನೆನಪುಗಳನ್ನು ಹಂಚಿ ಕೊಂಡಿದ್ದಾರೆ. ಅದರಲ್ಲಿ ಎದುರಿನ ಹಲ್ಲು ಹೋದ ಕ್ಯೂಟ್ ಮಗುವಿನ ಫೋಟೋ ಗಮನಸೆಳೆಯುತ್ತದೆ.


ಈ ವರ್ಷ ಹೋಳಿ ಸಂದರ್ಭದಲ್ಲಿ ತನ್ನ ಬಾಲ್ಯದ ಫೋಟೋಗಳನ್ನು ಅವರು ಶೇರ್ ಮಾಡಲಾರಂಭಿಸಿದ್ದರು.
“ತಾನು ಚಿಕ್ಕಂದಿನಲ್ಲಿ ಇಬ್ಬರ ಜೊತೆ ಮಾತ್ರ ಹೋಳಿ ಆಡುತ್ತಿದ್ದೆ. ತನ್ನ ಬೆಸ್ಟ್ ಫ್ರೆಂಡ್ ಸುಹಾನಾ ಖಾನ್ ಮತ್ತು ಶನಾಯಾ ಕಪೂರ್” ಅನ್ನೋ ಮಾತನ್ನೂ ಹೇಳಿದ್ದರು. ಅನನ್ಯಾ ಪಾಂಡೆ ನಿರ್ದೇಶಕ ಶಕುನ್ ಬತ್ರಾ ಅವರ ಫಿಲ್ಮ್ ನಲ್ಲಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ ಚತುರ್ವೇದಿಯವರ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ’ಲಾಯಿಗರ್ ’ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಅಮಿತಾಭ್ ಬಚ್ಚನ್ ನ್ಯೂಯಾರ್ಕ್ ನ ತನ್ನ ಮೊದಲ ಕಾರ್ಯಕ್ರಮದ ಝಲಕ್ ಹಂಚಿಕೊಂಡರು

ನಟ ಅಮಿತಾಭ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲಿ ತನ್ನ ಫಸ್ಟ್ ಲೈವ್ ಪರ್ಫಾರ್ಮೆನ್ಸ್ ನ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ .ಈ ಲೈವ್ ಪರ್ಫಾರ್ಮೆನ್ಸ್ ನಲ್ಲಿ ಅನೇಕ ಸಂಗತಿಗಳು ಅಡಗಿಕೊಂಡಿವೆ. ಇದರ ಉಲ್ಲೇಖಗಳನ್ನು ಅಮಿತಾಭ್ ಬಚ್ಚನ್ ತನ್ನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ವಿಶೇಷ ಅಂದರೆ ಅಮಿತಾಭ್ ರ ಈ ಚಿತ್ರಕ್ಕೆ ಅವರ ಮೊಮ್ಮಗಳು ನವ್ಯಾ ನವೇಲಿ ಕೂಡಾ ಕಮೆಂಟ್ ಮಾಡಿದ್ದಾಳೆ.


ಅಮಿತಾಭ್ ಬಚ್ಚನ್ ಇದನ್ನು ಪೋಸ್ಟ್ ಮಾಡುತ್ತಾ ಕೆಲವು ಮಹತ್ವದ ಮಾತುಗಳನ್ನು ಉಲ್ಲೇಖಿಸಿದ್ದಾರೆ. ಅಮಿತಾಭ್ ಬಚ್ಚನ್ ಮುಖದಲ್ಲಿ ಕನ್ನಡಕ ಹಾಗೂ ಕೈಯಲ್ಲಿ ಮೈಕ್ ಇದೆ. “ನನ್ನ ಮೊದಲ ಲೈವ್ ಪರ್ಫಾರ್ಮೆನ್ಸ್ ಇದು. ಹಿಂಬದಿಯಲ್ಲಿ ಕಾಣುವ ಸೈನ್ ಬೋರ್ಡ್ ನಲ್ಲಿ ಮೆಡಿಸನ್ ಸ್ಕ್ವಾರ್ ಗಾರ್ಡನ್ ನ್ಯೂಯಾರ್ಕ್.ವಿಶ್ವದ ಪ್ರಸಿದ್ಧ ಸ್ಟೇಡಿಯಂನಲ್ಲಿ ಎಲ್ಲಕ್ಕಿಂತ ಮೊದಲ ಇಂಡಿಯನ್ ಪರ್ಫಾರ್ಮರ್” ಹೀಗೆ ಬರೆದಿದೆ.
ಅಮಿತಾಭ್ ರ ಈ ಪೋಸ್ಟಿಗೆ ಅವರ ಮೊಮ್ಮಗಳು ನವ್ಯಾ ನವೇಲಿ ಕೂಡಾ ಕಮೆಂಟು ಮಾಡಿದ್ದಾಳೆ. ಫ್ಯಾನ್ಸ್ ಗಳು ಕೂಡ ನಿರಂತರವಾಗಿ ಕಮೆಂಟ್ ಮಾಡುತ್ತಿದ್ದಾರೆ. ಅಮಿತಾಭ್ ರ ಮುಂದಿನ ಫಿಲ್ಮ್ ’ಬ್ರಹ್ಮಾಸ್ತ್ರ’ ಆಗಿದೆ.ಇದರಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡಾ ಅಭಿನಯಿಸುತ್ತಿದ್ದಾರೆ.