ಸ್ವಿಪ್ ‌ಸಮಿತಿ ವತಿಯಿಂದ ಮತದಾನ ಜಾಗೃತಿ ಅಭಿಯಾನ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.13:   ಮತದಾನ ಜಾಗೃತಿ ಜಾಥಾ  ಅಂಗವಾಗಿ   ‘ನಾನು ಮತದಾನವನ್ನು ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ’ ಎಂದು ಬೋರ್ಡ್ ಮೇಲೆ ಸಹಿ ಮಾಡುವ ಅಭಿಯಾನ ಕಾರ್ಯಕ್ರಮಕ್ಕೆ ಚುನಾವಣಾ ಅಧಿಕಾರಿ ಸತೀಶ್ ರವರು ಚಾಲನೆ ನೀಡಿದರು.
 ಮತದಾನ ಮಾಡುವುದು ಎಲ್ಲ ನಾಗರೀಕರ ಜವಾಬ್ದಾರಿ, ಇದು ನಮ್ಮ ರಾಷ್ಟ್ರದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ ಎಂದು ತಾ.ಚುನಾವಣಾಧಿ ಕಾರಿ ಕೆ.ಹೆಚ್. ಸತೀಶ್ ತಿಳಿಸಿದರು.
 ನಗರದಲ್ಲಿ ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ನಗರಸಭೆ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ತಾಲೂಕು ಕ್ರೀಡಾಂಗಣ ದಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳ ಮುಖಾಂತರ ಗಾಂಧಿ ವೃತ್ತ ಮತ್ತು ಅಂಬೇಡ್ಕರ್ ವೃತ್ತ ಹಾಗೂ ಟಿಪ್ಪು ವೃತ್ತದ ವರೆಗೆ ಮತದಾನದ ಜಾಗೃತಿ ಕುರಿತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಮತದಾನ ಜಾಗೃತಿ ಅಭಿಯಾನ ನಡೆಸಿದರು.
ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಜಾಥಕ್ಕೆ ಚಾಲನೆ ಅವರು ಮಾತನಾಡಿದರು. ನಮ್ಮ ದೇಶವನ್ನು ಪರಿಕೀಯರ ಆಡಳಿತದ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆದಿದ್ದೇವೆ. ಈ ಕಾರಣದಿಂದಾಗಿ ನಾವು ಮತ ದಾನದ ಹಕ್ಕನ್ನು ಹೊಂದಿದ್ದೇವೆ, ನಮ್ಮ ಮತ ಹಾಕುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ ಸ್ವತಂತ್ರ ಮತ್ತು ಪ್ರಜಾಪ್ರಭುತ್ವ ನಮ್ಮ ದೇಶ ಎಂಬುದನ್ನು ಎಲ್ಲರೂ ನಿರೂಪಿಸಬೇಕು. ಮತದಾನವು ಸ್ವಾತಂತ್ರ್ಯದ ಹಕ್ಕನ್ನು ಎತ್ತಿ ಹಿಡಿಯುತ್ತದೆ. ಹಕ್ಕುಗಳು ಚುನಾವಣಾ ವ್ಯವಸ್ಥೆಯ ಪ್ರಮುಖ ಮತದಾನದ ಅಂಶವಾಗಿದೆ, ನಾಗರೀಕರ ಮೂಲಭೂತ ರಾಜಕೀಯ ಹಕ್ಕುಗಳಲ್ಲಿ ಒಂದಾಗಿದೆ ಅದ್ದರಿಂದ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು.
 ಸಮಿತಿ ಅಧ್ಯಕ್ಷ ಎಂ.ಬಸಪ್ಪ, ಪೌರಾಯುಕ್ತ ಜೀವನ್ ಕಟ್ಟಿಮನಿ, ಸಿ.ಡಿ.ಪಿ.ಒ. ಜಲಾಲಾಪ್ಪ ಟಿ.ಹೆಚ್.ಒ. ಈರಣ್ಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್ವರಿ, ಬಿ.ಆರ್.ಸಿ. ತಮ್ಮನಗೌಡ ಪಾಟೀಲ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಅಮರೇಶ್ ಸೇರಿದಂತೆ ಎಲ್ಲಾ ಇಲಾಖೆಯ ಸಿಬ್ಬಂದಿಗಳು  ಕಾರ್ಯಕ್ರಮದಲ್ಲಿ ಇದ್ದರು.