`ಸ್ವಿಚ್ ಕೇಸ್ ಎನ್’ ಟ್ರೈಲರ್ ಬಿಡುಗಡೆ

ನಟ ವಿಜಯ್ ಸೂರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ “ಸ್ವಿಚ್ ಕೇಸ್ ಎನ್” ಚಿತ್ರವನ್ನು ನಿರ್ದೇಶಕ ಚೇತನ್ ಶೆಟ್ಟಿ ಹೊಸತನದ ಕಥೆಯೊಂದಿಗೆ ತೆರೆಗೆ ತರಲು ಸಜ್ಜಾಗಿದ್ದಾರೆ.

ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಐಟಿ ಉದ್ಯೋಗಿ ಕೆಲಸ ಬದಲಾಯಿಸುವುದನ್ನು ಸ್ವಿನ್ ಆನ್ ಅನ್ನುತ್ತಾರೆ. ನಿರ್ದೇಶಕ ಚೇತನ್ ಶೆಟ್ಟಿ ಐಟಿ ಮೂಲದಿಂದ ಬಂದಿರುವ ಹಿನ್ನೆಲೆಯಲ್ಲಿ ಅದೇ ವಿಷಯ ತೆರೆಗೆ ತರಲು ಮುಂದಾಗಿದ್ದಾರೆ.

ಚಿತ್ರದ ಟ್ರೈಲರ್ ಬಿಡುಗq ಬಳಿಕ ಮಾತಿಗಿಳಿದ ನಟ ವಿಜಯ್ ಸೂರ್ಯ ಮಾತನಾಡಿ ಐಟಿ ಉದ್ಯೋಗಿಗಳು ಚಿತ್ರ ನೋಡಿದರೂ ಏನೇನೋ ತುರುಕಿದ್ದಾರೆ ಅನ್ನಿಸುವುದಿಲ್ಲ. ಹೊಸ ಪಾತ್ರ, ನಾನೇ ಮಾಡಲಾ ಅಂತ ಕೇಳಿದೆ ಅವಕಾಶ ಕೊಟ್ಟಿದ್ದಾರೆ ಪ್ರಾಮಾಣಿಕ ಪ್ರಯತ್ನ, ಪ್ರೀತಿಯಿಂದ ಮಾಡಿದ್ದೇವೆ. ಸಹಕಾರ ಇರಲಿ ಎಂದರು

ನಟಿ ಶ್ವೇತ ವಿಜಯ್ ಕುಮಾರ್ ಮಾತನಾಡಿ ಮೊದಲ ಚಿತ್ರ  ಹಳ್ಳಿ ಹುಡುಗಿಯ ಪಾತ್ರ, ಜೀವನ ಕಟ್ಟಿಕೊಳ್ಳಲು ನಗರಕ್ಕೆ ಬರ್ತಾಳೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಆಸೆ  ಇರುವ ಪಾತ್ರ ಎಂದರು.

ನಿರ್ದೇಶಕ ಚೇತನ್ ಶೆಟ್ಟಿ  ಮಾತನಾಡಿ,ಸೈಕಾಲಜಿಕಲ್ ಥ್ರಿಲ್ಲರ್ ಜಾನರ್ ಸಿನಿಮಾ ಇಷ್ಟ. ಯಾರೂ ಈ ಮಾದರಿಯ ಸಿನಿಮಾ ಮಾಡಿಲ್ಲ ಎನ್ನುವ ಕಾರಣಕ್ಕೆ ಐಟಿ ಬೇಸ್ ಕಥೆ ಸಿನಿಮಾ .ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ . ಸದ್ಯದಲ್ಲಿಯೇ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.

ಛಾಯಾಗ್ರಾಹಕ ಪ್ರಶಾಂತ್ . ಕಲಾವಿದರಾದ ಕಾರ್ತಿಕ್  ವೈಭವ್, ವಿಜಯ್ ಸಿದ್ಧರಾಜ್, ಗಣೇಶ್, ವಿನಯ್ ಸೇರಿದಂತೆ ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಚಿತ್ರಕ್ಕೆ ಬೇಬಿ ಎಸ್ ಶೆಟ್ಟಿ,  ಕೆಮಂತ್ ಪಿ ರೆಡ್ಡಿ, ಸುದಾಂಶು ಶಂಕರ್ ಬಂಡವಾಳ ಹಾಕಿದ್ದಾರೆ.