ಸ್ವಾಸ್ಥ ಸಮಾಜಕ್ಕೆ-ಮಾನವ ಹಕ್ಕುಗಳು: ಅಪ್ಪಾರಾವ ಅಕ್ಕೋಣಿ

ಕಲಬುರಗಿ:ಜ.2:ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಹಾಗಾಂವ ಕ್ರಾಸನಲ್ಲಿ ಇಂದು ದಿನಾಂಕ:01-01-2021 ರಂದು ಭಾರತೀಯ ರೆಡಕ್ರಾಸ್ ಸಂಸ್ಥೆ ಕಲಬುರಗಿ ಇವರ ಸಹಯೋಗದೊಂದಿಗೆ “ಮಾನವ ಹಕ್ಕುಗಳು” ವಿಷಯದ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಭಾರತೀಯ ರೆಡಕ್ರಾಸ ಸಂಸ್ಥೆ ಜಿಲ್ಲಾ ಘಟಕ ಕಲಬುರಗಿಯ ಸಭಾಪತಿಗಳಾದ ಶ್ರೀ ಅಪ್ಪಾರಾವ ಅಕ್ಕೋಣಿ, ಹೆನ್ರಿ ಡುವಂಟ್ ರೆಡಕ್ರಾಸ್ ಸೂಸೈಟಿ ಸಂಸ್ಥಾಪಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ಸ್ವಾಸ್ಥ ಸಮಾಜಕ್ಕೆ ಮಾನವ ಹಕ್ಕುಗಳು ಅವಶ್ಯಕವಾಗಿವೆ ಎಂದರು. ಹೊರಾಟ, ಆಂದೋಲನೆಗಳ ಪರಿಣಾಮವಾಗಿ ಸ್ವಾತಂತ್ರ ಬಂದರೆ ಮಾನವ ಬದುಕಿಗಾಗಿ ಅದರಲ್ಲಿ ಸಮಾಜಿಕ ಜೀವನಕ್ಕೆ ಮಾನವ ಹಕ್ಕುಗಳು ಹುಟ್ಟಿವೆ ಎಂದರು. ಸಂವಿಧಾನದಲ್ಲಿ ಪ್ರಸ್ತಾಪಿಸಿದಂತೆ ಹಕ್ಕು ಮತ್ತು ಕರ್ತವ್ಯಗಳ ‘ಒಂದೇ ನಾಣ್ಯದ ಎರಡು ಮುಖ’ಗಳಾಗಿದ್ದಹಾಗೆ ಎಂದರು. ನಮ್ಮ ಹಕ್ಕುಗಳಿಗೆ ಚುತಿಯಾಗದಂತೆ ನಾವು ವರ್ತಿಸಬೇಕೆಂದರು.

 ವಿಶೇಷ ಉಪನ್ಯಾಸಕರಾಗಿ ಜಿಲ್ಲಾ ಗ್ರಾಹಕರ ವ್ಯಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಶ್ರೀಮತಿ ಮಾಲತಿ ರೇಶ್ಮಿ ಮತನಾಡುತ್ತಾ ಲಿಂಗ ಬೇಧ ಜನಾಂಗ ಬೇಧಗಳಿಲ್ಲದ ಹಕ್ಕುಗಳ ಸಮಾನವಾಗಿರಬೇಕು.  ಸ್ತ್ರೀ ಹಕ್ಕುಗಳಿಗೆ ಮಹತ್ಮ ನೀಡಬೇಕು ಮತ್ತು ಗೌರವಿಸಬೇಕು ಎಂದರು.  ವೇದಿಕೆ ಮೇಲೆ ಗೌರವ ಕಾರ್ಯದರ್ಶಿಗಳಾದ ಶ್ರೀ ರವಿಂದ್ರ ಶಾಬಾದಿ, ಉಪ ಸಭಾಪತಿಗಳಾದ ಅರುಣಕುಮಾರ ಲೋಯೊ, ಯುವ ರೆಡಕ್ರಾಸ್ ಜಿಲ್ಲಾ ಸಂಯೋಕರಾದ ಶ್ರೀ ಧನರಾಜ ಬಾಸಗಿ, ಕಾಲೇಜಿನ ಯುವ ರೆಡಕ್ರಾಸ್ ಘಟಕದ ಸಂಯೋಜಕರಾದ ಪ್ರೊ. ಭಾರತಿ ಬೂಸಾರೆ, ಉಪಸ್ಥಿತಿ ಇದ್ದರು.  ನೇರ ಪ್ರಸಾರದಲ್ಲಿ ನಡೆದ ಈ ಕಾರಕ್ರಮ ಕೊರೊನ ಸಮಯದಲ್ಲಿ ಕೆಲಸ ನಿರ್ವಹಿಸಿದ ಅಭಿಲಾಶ ಹಾಗೂ ಯೋಗಿರಾಜ ಇವರಿಗೆ ಅತಿಥಿಗಳಿಂದ ಸನ್ಮಾನಿಸಲಾಯಿತು ಹಾಗೂ ಉಪಸ್ಥಿತಿ ಇದ್ದ ಎಲ್ಲರನ್ನು ರೆಡಕ್ರಾಸ್ ಘಟಕ ಜಿಲ್ಲಾ ವತಿಯಿಂದ ಮಾಸ್ಕ ವಿತರಿಸಿದರು.  ಈ ಕಾರ್ಯಕ್ರಮದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿಗಳಾದ ಡಾ. ರಾಮಚಂದ್ರ ಬಾಸುತಕರ, ಡಾ. ಶಾಂತ ಅಷ್ಟಿಗೆ, ಡಾ. ಮೊಹಮದ ಯುನುಸ, ಪ್ರೊ. ಶಂಕರ ಗಣಗೊಂಡ, ಡಾ. ರವಿಂದ್ರ ಭಂಡಾರಿ, ಡಾ. ದೇವಿದಾಸ ರಾಠೋಡ, ಪ್ರೊ. ಸತ್ತೇಶ್ವರ ಚೌದರೆ, ಶ್ರೀ ಎ.ಎಂ. ಜಮಾದಾರ, ಪ್ರೊ. ಅಣ್ಣಾರಾಯ ಎಸ್. ಪಾಟೀಲ ಇತರರು ಉಪಸ್ಥಿತಿ ಇದ್ದರು.


ಈ ಕಾರ್ಯಕ್ರಮವು ಪ್ರಾರ್ಥನಾಗೀತೆಯೊಂದಿಗೆ ಪ್ರಾರಂಭವಾಯಿತು. ಡಾ. ಶಶಿಕಾಂತ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು, ಪ್ರೊ. ಭಾರತಿ ಬೂಸಾರೆ ಎಲ್ಲರನ್ನು ಸ್ವಾಗತಿಸಿದರು. ಡಾ. ರಾಬಿಯ ಇಪ್ಪತ್ ಅತಿಥಿಗಳ ಪರಿಚಯಿಸಿದರು, ಡಾ. ಮಲ್ಲಿಕಾರ್ಜುನ ಶೆಟ್ಟಿ ವಂಧಿಸಿದರು, ಪ್ರೊ. ಶಾಮಲಾ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.