ಸ್ವಾವಲಂಬಿ ರೈತಮಹಿಳೆ

ಕಲಬುರಗಿ,ಜೂ 11: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿ ಹತ್ತಿರ ನಡಕೂರು ಎಂಬ ಚಿಕ್ಕ ಗ್ರಾಮದಲ್ಲಿ ಉಷಾ ಎಂಬ ರೈತ ಮಹಿಳೆ ಬಗೆಬಗೆಯ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಉಷಾ ಅವರು ನಿಂಬೆಹಣ್ಣು, ಮಾವಿನಕಾಯಿ, ಬೆಳ್ಳುಳ್ಳಿ, ನೆಲ್ಲಿಕಾಯಿ, ಹಸಿಶುಂಠಿ, ಕೊತಂಬರಿ, ಟೊಮೇಟೊ, ದಪ್ಪ ಮೆಣಸಿನಕಾಯಿ, ಹಾಗಲಕಾಯಿ, ಹೀಗೆ ಬಗೆ ಬಗೆಯ ರುಚಿಕರ ಉಪ್ಪಿನಕಾಯಿ ತಯಾರಿಸುವರು. ಆಂಧ್ರ ಮೂಲದ ಈ ದಂಪತಿಗಳಿಗೆ ಉಪಜೀವನಕ್ಕಾಗಿ ಎರಡು ಎಕರೆ ಜಮೀನು ಹೊಂದಿದ್ದು ಬೇರೆಯವರ ಜಮೀನು ಗುತ್ತಿಗೆ ಆಧಾರದಲ್ಲಿ ಪಡೆದು ವ್ಯವಸಾಯ ಮಾಡುವರು.
ಬಡ ಕುಟುಂದಲ್ಲಿ ಹುಟ್ಟಿದ ಉಷಾ ಪತಿ ಕೆ.ಸುಬ್ರಮಣ್ಯ ಅವರೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತ ಪತಿಗೆ ಸಹಕಾರ ನೀಡುವ ಮೂಲಕ ಕೃಷಿಯ ಜೊತೆಗೆ ಸ್ವಾವಲಂಬಿ ಜೀವನ ಸಾಗಿಸುವ ಬಯಕೆಯಿಂದ ಉಪ್ಪಿನ ಕಾಯಿ ಮಾರಾಟ ಮಾಡುವರು. ದೂರದ ಊರಿನಿಂದ ಬಂದು ಇವರಲ್ಲಿ ಉಪ್ಪಿನಕಾಯಿ ಖರೀದಿಸುವರು.ಮಹಿಳೆಯ ಇಂತಹ ಸ್ವಾವಲಂಬಿ ಬದುಕು ಮತ್ತೊಬ್ಬರಿಗೆ ಮಾದರಿಯಾಗಲಿ.
-ಗುರುರಾಜ.ಕೆ.ಪಟ್ಟಣಶೆಟ್ಟಿ.ಯಾದಗಿರಿ