ಸ್ವಾವಲಂಬಿ ಮಹಿಳೆ ಸಮಾಜಕ್ಕೆ ಮಾದರಿ


ಧಾರವಾಡ, ನ.3: ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್, ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ನಾಡಹಬ್ಬ ಪ್ರಯುಕ್ತ ಕನ್ನಡ ನಾಡು ನುಡಿ ಕುರಿತು ನಡೆದ ಮಹಿಳಾ ಮಂಡಳಗಳ ಸಂಗೀತ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಡಾ.ಸುನೀತ್ ಪುರೋಹಿತ ಮಾತನಾಡಿ, ಇಂದಿನ ಸ್ಫರ್ಧಾಯುಗದಲ್ಲಿ ಮಹಿಳೆ ಧೀಮಂತವಾಗಿ ಮುನ್ನಡೆಯುತ್ತಾ ಸ್ವಾವಲಂಬನೆಯಿಂದ ಜೀವನ ನಡೆಸುತ್ತ ಎಲ್ಲರಿಗೂ ಆದರ್ಶ ಪ್ರಾಯಳಾಗಿದ್ದಾಳೆ. ಕುಟುಂಬದಲ್ಲಿ ಅವಳ ಅಸ್ತಿತ್ವಕ್ಕೆ ಮಹತ್ವವಿದೆ. ಅವಳಿಂದ ಮೆನೆಗೆ, ಸಮಾಜಕ್ಕೆ ಸಂಸ್ಕಾರಯುತ ಜೀವನ ದೊರೆತಿದೆ ಎಂದರು.
ಕನ್ನಡ ಕವಿಗಳ ನಾಡ ಗೀತೆಗಳನ್ನು ಮಹಿಳಾ ಮಂಡಳಗಳು ಪ್ರಸ್ತುತ ಪಡಿಸಿದವು. ಸುವರ್ಣಾ ಮಹಿಳಾ ಮಂಡಳ ಪ್ರಥಮ, ಓಂಕಾರ ಮಹಿಳಾ ಮಂಡಳ ದ್ವೀತಿಯ, ಯೋಗಮಿತ್ರ ಮಹಿಳಾ ಮಂಡಳ ತೃತೀಯ ಬಹುಮಾನ ಪಡೆದುಕೊಂಡರು. ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಸುಚೇತಾ ಭಟ್ಟ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.
ಜಿ.ಎನ್. ಇನಾಂದಾರ್ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ದೇಸಾಯಿ ಸ್ವಾಗತಿಸಿ, ಪರಿಚಯಿಸಿದರು. ಡಾ. ದೀಪಕ ಆಲೂರ ವಂದಿಸಿದರು. ರಾಜು ಪಾಟೀಲ ಕುಲಕರ್ಣಿ, ವಿನಾಯಕ ಜೋಷಿ, ವಿ.ಸಿ. ಕುಲಕರ್ಣಿ, ಎಸ್.ಆರ್. ಕುಲಕರ್ಣಿ, ಪಾಮಡಿ ಆಚಾರ್ಯ, ಶಾಮ ನಾಡಗೌಡ, ಜಗದೀಶ ಜಡಿಯವರ, ರವಿ, ಹೂವಪ್ಪಾ ಮತ್ತಿತರರು ಉಪಸ್ಥಿತರಿದ್ದರು.