
ರಾಯಚೂರು.ನ.೦೯- ಬೀದಿಬದಿ ವ್ಯಾಪಾರಸ್ಥರನ್ನು ಸ್ವಾವಲಂಬಿ ಗೊಳಿಸುವ ಉದ್ದೇಶದಿಂದ ಪ್ರಧಾನಿಮಂತ್ರಿ ಆತ್ಮನಿರ್ಭರ ಮತ್ತು ಪಿ.ಎಂ.ಸ್ವ ನಿಧಿ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಪ್ರತಿಯೊಬ್ಬ ಬಡ ವ್ಯಾಪಾರಸ್ಥರಿಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ ಎಂದು ಸಂಸದ ಅಮರೇಶ ನಾಯಕ ಅವರು ಹೇಳಿದರು.
ಅವರಿಂದು ನಗರದ ಜಿಲ್ಲಾಡಳಿತ ಮತ್ತು ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಸಹಯೋಗದಲ್ಲಿ ಆಯೋಜಿಸಿದ ಪ್ರಧಾನಿಮಂತ್ರಿ ಆತ್ಮನಿರ್ಭರ ಮತ್ತು ಪಿ.ಎಂ.ಸ್ವ ನಿಧಿ ಯೋಜನೆ ಬೀದಿಬದಿ ವ್ಯಾಪಾರಸ್ಥರಿಗೆ ಕಿರು ಸಾಲ ಯೋಜನೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ,
ಪ್ರಧಾನಿಮಂತ್ರಿ ಆತ್ಮನಿರ್ಭರ ಮತ್ತು ಪಿ.ಎಂ. ಸ್ವ-ನಿಧಿ ಯೋಜನೆ ಸಾಲ ಸೌಲಭ್ಯಕ್ಕೆ ಉತ್ತೇಜನ ನೀಡುವುದರ ಮೂಲಕ ಬಡ ಮತ್ತು ಬೀದಿಬದಿ ವ್ಯಾಪಾರಸ್ಥರ ಕಲ್ಯಾಣಕ್ಕಾಗಿ ಸಹಕಾರಿಯಾಗಿದೆ ಎಂದರು. ಪ್ರಧಾನಿ ಯೋಜನೆ ಆತ್ಮನಿರ್ಭರ ಪಿ. ಎಂ ಸ್ವ-ನಿಧಿ ಅತ್ಯಂತ ಪ್ರಮುಖ ಯೋಜನೆಯಾಗಿದೆ. ಜನರಿಗೆ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಾಗಿದೆ.
ಜನ ಅಭಿವೃದ್ಧಿ ಕಾಯಕದಲ್ಲಿ ತೊಡಗಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ಜಾರಿಗೆ ತಂದಿದ್ದಾರೆ. ಜಿಲ್ಲೆಯಲ್ಲಿ ಶೇ. ೧೦೦ರಷ್ಟು ಗುರಿ ತಲುಪಬೇಕು. ಬೀದಿ ಬದಿ ವ್ಯಾಪಾರಿಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.ಅನುದಾನ ಸಣ್ಣ ಪುಟ್ಟ ವ್ಯಾರಸ್ಥರಿಗೆ ಹೆಚ್ಚು ಯೋಜನೆ ನೀಡಬೇಕು. ಸಾಲ ವಿತರಣೆಯಲ್ಲಿ ಒಂದು ಲಕ್ಷ ಭೌತಿಕಗುರಿ ಹೊಂದಲಾಗಿದೆ. ನಮ್ಮಲ್ಲಿ ೬ ಸಾವಿರ ಗುರಿ. ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ, ಪಿಎಂ ವಿಶ್ವಕರ್ಮ ಯೋಜನೆ ಕರ ಕುಶಲ ಕರ್ಮಿಗಳಿಗೆ ಅನುಕೂಲವಾಗಲಿದೆ. ಜನರ ಅರ್ಥಿಕ ಸುಧಾರಣೆಯಾದರೆ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಸುಧಾರಣೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್, ಮೆಹೇಬೂಬಿ ಜಿಲಾನಿ, ಬಸವರಾಜ, ಜಗದೀಶ್ ಗಂಗಣ್ಣವಾರ್, ತಾಲೂಕು ಮಟ್ಟದ ಸೇರಿದಂತೆ ಉಪಸ್ಥಿತರಿದ್ದರು.