ಸ್ವಾವಲಂಬಿ ಜೀವನಕ್ಕೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ                       

ಸೊರಬ.ನ.೨೨: ಸರ್ವರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರು  ಸ್ವಾವಲಂಬಿ ಜೀವನ ವನ್ನುಕಟ್ಟಿಕೊಳ್ಳ ಲು ಆರ್ಥಿಕವಾಗಿ ಸಹಾಯ ನೀಡುವ ಮೂಲಕ  ಅವರಿಗೆ ದಾರಿ ದೀಪವಾಗಿದೆ ಎಂದು ಜಡೆ ಸಂಸ್ಥಾನ ಮಠದ ಹಾಗೂ ಸೊರಬ ಮುರುಗ ಮಠದ ಡಾ.ಮ.ನಿ. ಪ್ರ. ಮಹಾಂತ ಸ್ವಾಮೀಜಿ  ಹೇಳಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾವಲಿ ವಲಯದಿಂದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಏರ್ಪಡಿಸಿದ್ದ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಜಾಗೃತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಜನರಿಗೆ ಆರ್ಥಿಕ ಸಹಾಯ ನೀಡುವುದರ ಜೊತೆಗೆ. ಧರ್ಮ ಸಂಸ್ಕಾರಗಳಂತಹ ಗುಣವೈಶಿಷ್ಟತೆಯನ್ನು ಜನರಲ್ಲಿ ಮೂಡಿಸುವ ಮೂಲಕ   ಸರ್ವಾಂಗಿಣ ಅಭಿವೃದ್ಧಿಯನ್ನು ಸಾಧಿಸಲು ಮಹಾತ್ಮ ಗಾಂಧೀಜಿ ಕಂಡಿರುವ ಗ್ರಾಮಗಳ ಉದ್ಧಾರದ ಕನಸನ್ನು ಸಕಾರಗೊಳಿಸಲು ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯು ಇಂತಹ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿರುವುದು ಅಭಿನಂದನಿಯವಾಗಿದೆ ಎಂದರು.ಜಿಲ್ಲಾ  ಯೋಜನಾ ನಿರ್ದೇಶಕ ಬಾಬು ನಾಯಕ್ ಮಾತನಾಡಿ. ದಯೆ. ದಾನ. ಧರ್ಮ. ಸಹೋದರತ್ವದ ಸಹಬಾಳ್ವೆಯ ಏಕತಾ ಮನೋಭಾವನೆಯನ್ನು ಮೂಡಿಸುವ ಈ ಯೋಜನೆಯ ಉದ್ದೇಶವಾಗಿದೆ. ಕೆರೆಗಳ ಅಭಿವೃದ್ಧಿ. ದೇವಾಲಯಗಳ ಪುನಶ್ಚೇತನ. ಸಂಘಗಳ ಮೂಲಕ ಸಾಲ ಸೌಲಭ್ಯ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ. ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು  ಮಾಡುತ್ತಾ ಬಂದಿದೆ ಎಂದರು. ಪರಮೇಶ್ವರಪ್ಪ ಮಾವಲಿ ಅಧ್ಯಕ್ಷತೆ ವಹಿಸಿದ್ದರು. ಬಿಳವಾಣಿ ಗ್ರಾಪಂ ಅಧ್ಯಕ್ಷೆ ಶೃತಿ ಜಯಕುಮಾರ್, ಮನೋಹರ, ತಾಲ್ಲೂಕು ಯೋ ಜನಾದಿಕಾರಿ ಅಧಿಕಾರಿ ಸುಬ್ರಾಯ ನಾಯಕ್, ಮೇಲ್ವಿಚಾರಕಿ ಮೇದಾ, ಲೋಕೇಶ್, ಯುವರಾಜಗೌಡ, ಶಿವಕುಮಾರ್, ಪ್ರತಿಭಾ ಸೇರಿದಂತೆ ಮೊದಲಾದವರು ಇದ್ದರು.