
ಕಲಬುರಗಿ:ಮಾ.25: ಸಾರ್ವಜನಿಕಗೋಸ್ಕರ ಹುಟ್ಟಿಕೊಂಡಿರುವ ಸಂಘಟನಾ ಸಂಸ್ಥೆಗಳು ಪ್ರಸ್ತುತ ಸ್ವಾರ್ಥ ಸೇವೆಗೈಯುವುದರ ಮೂಲಕ ತಮ್ಮನ್ನೇ ತಾವೇ ಆತ್ಮ ವಂಚನೆ ಮಾಡಿಕೊಳ್ಳುತ್ತಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಚಾಲಕರಾದ ಡಾ.ಮೋಹನ್ ರಾಜ್ ಅವರು ಬೇಸರವ್ಯಕ್ತಪಡಿಸಿದರು.
ಅವರು ನಗರದ ಬಿಷಫ್ ಟ್ರೈನಿಂಗ್ ಸೆಂಟರ್‍ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ವತಿಯಿಂದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಎಲ್ಲಾ ಗ್ರಾಮ ಘಟಕಗಳ ಸಂಚಾಲರಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ಅಧ್ಯಯನ ಶಿಬಿರವನ್ನು ಉದ್ಘಾಟಿಸುತ್ತಾ ಕೇವಲ ಒಂದು ಸಂಘಟನೆಗಳು ಈ ರೀತಿ ಅಲ್ಲ ಸಾಮಾನ್ಯವಾಗಿ ಈಗ ಆರಂಭಗೊಂಡಿರುವ ಸಂಘಟನೆಗಳು ಸಹ ಇದಕ್ಕೆ ಹೊರತಾಗಿಲ್ಲ. ಸಾರ್ವಜನಿಕರ ಸಂಕಷ್ಟಗಳಿಗೆ, ನ್ಯಾಯiÀುುತ ಬೇಡಿಕೆಗಳಿಗೆ ಸ್ಪಂದಿಸ ಬೇಕಾಗಿರುವ ಸಂಘಟನೆಗಳು ಪರಸ್ಪರ ವ್ಯಯಕ್ತಿಕ ಲಾಭಗೋಸ್ಕರ ಕಾರ್ಯನಿರ್ವಹಿಸುತ್ತಿರುವುದು ಶೋಚನೀಯ ಸಂಗತಿ. ನಾವೆಲ್ಲಾ ಒಗ್ಗೂಡಿ ಸಾಮಾಜಿಕ ನ್ಯಾಯ ಸಿಗುವವರೆಗೂ ಹೋರಾಡಬೇಕಾಗಿದೆ. ಇದಕ್ಕೆ ಸಾರ್ವಜನಿಕರೇ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡು ಯಾವ ಸಂಘಟನೆಗಳಿಗೆ ಬೆಂಬಲ ಕೊಡಬೇಕು ಎಂಬುದನ್ನು ತೀರ್ಮಾನಿಸಬೇಕಾಗಿರುವುದು ಕಾಲಸನ್ನಿತವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್‍ರವರ ಚಳುವಳಿ ಪ್ರಸ್ತುತ ದಲಿತ ಚಳುವಳಿಗಳು ಕುರಿತು ಸಾಹಿತಿ ದೇವಿಂದ್ರ ಹೆಗಡೆ ಅವರು ಉಪನ್ಯಾಸ ನೀಡಿದರೆ ಯಾದಗಿರಿ ಜಿಲ್ಲಾ ಸಂಚಾಲರಕರಾದ ಶರಣು ದೋರನಹಳ್ಳಿ ಅವರು ಅನಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ಪ್ರತಿಭಂದಕ ಕಾಯ್ದೆ 1980 ತಿದ್ದುಪಡಿ ಕಾಯ್ದೆ 2016 ಕುರಿತು ವಿಶೇಷ ಉಪನ್ಯಾಸವನ್ನು ಸಂಚಾಲಕರಿಗೆ ನೀಡಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಕಲಬುರಗಿ ಜಿಲ್ಲಾ ಸಂಚಾಲಕರಾದ ಚಂದ್ರಶೇಖರ್ ದೊಡ್ಡಮಮನಿ, ಶಿವುಪೋತೆ, ವಿಶ್ವ ನಾಟೇಕಾರ, ಶೇಖರ್ ಬಡಿಗೇರ, ಬಸ್ಸು ಚಿಪ್ಪರ, ಅಯ್ಯಪ್ಪ ಗೊಂದೆನೂರ, ಬಲಭೀಮ ಬೇವಿನಹಳ್ಳಿ, ಮರಿಲಿಂಗ ಸಾವೂರ ಸೇರಿದಂತೆ ವಿವಿಧ ತಾಲ್ಲೂಕಗಳಿಂದ ಜಿಲ್ಲಾ ಸಂಚಾಲಕರು ಪಾಲ್ಗೊಂಡಿದ್ದರು.