ಸ್ವಾರ್ಥ ಬಿಟ್ಟು ಅಭಿವೃದ್ಧಿಗೆ ಆದ್ಯತೆ ನೀಡಿ

ಗದಗ ಜ.12 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮಗಳ ಸರ್ವೋತೋಮುಖ ಅಭಿವದ್ಧಿಗೆ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡುತ್ತಿದ್ದು, ಸ್ವಾರ್ಥ ಕೆಬಿಟ್ಟು ಗ್ರಾಪಂ ಸದಸ್ಯರು ಇದರ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಯತ್ತ ಗಮನ ಹರಿಸಬೇಕು . ಸಮಸ್ಯೆ ಎಂದು ಕಾರ್ಯಾಲಯಕ್ಕೆ ಬರುವ ಗ್ರಾಮದ ಸಾರ್ವಜನಿಕರ ಮನವಿಗಳಿಗೆ ಸ್ಪಂದಿಸಿ ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.
ಜಿಲ್ಲೆಯ ರೋಣ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಹಾಗೂ ಜಿಲ್ಲಾ ಪಂಚಾಯತ್, ಗ್ರಾ.ಪಂ 15ನೇ ಹಣಕಾಸು ಹಾಗೂ ಎನ್.ಆರ್.ಇ.ಜಿ 40 ಲಕ್ಷ ರೂ,ಗಳ ಅನುದಾನದಲ್ಲಿ ನಿರ್ಮಾಣವಾದ ನೂತನ ಗ್ರಾಮ ಪಂಚಾಯತಿ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲ ಈಗ ಬದಲಾಗಿದೆ. ಗ್ರಾಮವನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಸ್ವಚ್ಛ ಭಾರತ ಅಭಿಯಾನ ಯೋಜನೆ, ಕುಡಿಯುವ ನೀರಿನ ಯೋಜನೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಪ್ರತಿ ವರ್ಷದ ಹಣಕಾಸು ಯೋಜನೆ, ಹೀಗೆ ಹಲವಾರು ಯೋಜನೆಗಳ ಮೂಲಕ ಗ್ರಾಮ ಪಂಚಾಯಿತಿಗೆ ಹಣ ಹರಿದು ಬರುತ್ತದೆ. ಈ ಹಣದಿಂದ ಗ್ರಾಮದಲ್ಲಿ ಮಕ್ಕಳ ಮೆದಾನ, ಸ್ಮಶಾನ ಅಭಿವೃದ್ಧಿ, ಕುರಿದೊಡ್ಡಿ, ರೆತರ ಭೂಮಿಗಳಿಗೆ ಬದು, ಕಷಿ ಹೊಂಡ, ಹೊಳಗಟ್ಟಿ, ರಸ್ತೆ ನಿರ್ಮಾಣದ ಕಾಮಗಾರಿಗಳನ್ನು ಹಮ್ಮಿಕೊಳ್ಳಬಹುದು. ಇಂಥ ಯೋಜನೆಯ ರೂಪುರೇಷೆಗಳನ್ನು ತಿಳಿಸಲು ಅಭಿವದ್ಧಿ ಅಧಿಕಾರಿಯನ್ನು ಸಹ ಸರಕಾರ ನೀಡಿದೆ. ಸದಸ್ಯರು ಒಗ್ಗಾಟ್ಟಾಗಿ ಈ ಯೋಜನೆಗಳನ್ನು ಸದುಯೋಗಪಡಿಸಿಕೊಳ್ಳಬೇಕು ಎಂದರು.
ಗ್ರಾ.ಪಂ ಉಪಾಧ್ಯಕ್ಷೆ ರೇಖಾ ಮಾದರ, ಉಪಾಧ್ಯಕ್ಷ ಕಳಕಪ್ಪ ರಾಜೂರ ಗ್ರಾ.ಪಂ ಸದಸ್ಯ ಬಸವರಾಜ ರಡ್ಡೇರ, ಮಾರನಬಸರಿ, ಶಿದ್ರಾಮಪ್ಪ ಕಟ್ಟಿಮನಿ, ಶಿವಯೋಗಿ ತಡಿ, ಪ್ರವೀಣ ಬಸೇಗೌಡ್ರ, ಶೋಭಾ ಗೊಟ್ಟಗೊಂಡ, ಅನ್ನಪೂರ್ಣ ಈರಗಾರ, ಬಸಮ್ಮ ಸಾತ್ತಮರಮಠ, ಲಲಿತಾ ಕುರಿ, ಶಾರದಾ ಅಂಗಡಿ, ಮಾಜಿ. ಎ.ಪಿಎಂಸಿ ಅಧ್ಯಕ್ಷ ರಾಜಣ್ಣ ಹೂಲಿ, ಅಶೋಕ ನವಲಗುಂದ, ಮಲ್ಲು ಮಾದರ, ಶರಣಪ್ಪ ಕಂಬಳಿ, ಪರಶುರಾಮ ಮಾದರ, ಚಂದ್ರು ಮಾದರ, ಮುಖಪ್ಪ ಹೂಗಾರ, ಪರಸಪ್ಪ ಬಂಢರಗಲ್ಲ, ಗೂಳಪ್ಪ ಕುರಿ, ಬಸವರಾಜ ಕಾತ್ರಾಳ, ಮಲ್ಲಪ್ಪ ಹಾಲವರ, ವಸಂತಪ್ಪ ಮಾರನಬಸರಿ, ಬಸವಲಿಂಗಯ್ಯ ಹಿರೇಮಠ, ಮುತ್ತಣ್ಣ ಕಡಗದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.