ಸ್ವಾಮೀ ವಿವೇಕಾನಂದರ ಮೂರ್ತಿ ಅನಾವರಣ ನಾಳೆ: ಬೈಕ್ ರ್ಯಾಲಿ


ಹುಬ್ಬಳ್ಳಿ,ಮಾ.26: ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಬೃಹತ್ ಬೈಕ್ ರ್ಯಾಲಿಯನ್ನು ನಗರದಲ್ಲಿಂದು ಹಮ್ಮಿಕೊಳ್ಳಲಾಯಿತು.
ಹುಬ್ಬಳ್ಳಿಯ ಸಿದ್ಧಾರೂಢ ರೇಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸ್ವಾಮೀ ವಿವೇಕಾನಂದರ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮ ಇದೇ ದಿ. 27 ರಂದು ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಆಶ್ರಮದ ವತಿಯಿಂದ ಇಂದು ನಗರದ ಬಿ.ವಿ.ಬಿ ಕಾಲೇಜಿನಿಂದ ರೇಲ್ವೆ ನಿಲ್ದಾಣದವರೆಗೆ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಯಿತು.
ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ರಘುವಿರಾನಂದಾಜಿ ಮಹಾರಾಜ್ ಮತ್ತು ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮಿಜಿಯವರು ಸಾನಿಧ್ಯ ವಹಿಸಿ ಮಾರ್ಗದರ್ಶನ ನೀಡಿದರು. ಬಿ.ವ್ಹಿ.ಬಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಅಶೋಕ ಶೆಟ್ಟರ ರವರು ಭಗವಾ ಧ್ವಜ ಬೀಸುವ ಮೂಲಕ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಸ್ವಾಮೀ ವಿವೇಕಾನಂದರು 1892ರಲ್ಲಿ ಗೋವಾದಿಂದ ಹುಬ್ಬಳ್ಳಿ ಮಾರ್ಗವಾಗಿ ರೈಲಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಅದರ ಸವಿನೆನಪಿಗಾಗಿ ರೇಲ್ವೆ ನಿಲ್ದಾಣದಲ್ಲಿ ವಿವೇಕಾನಂದರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. 10.5 ಅಡಿ ಎತ್ತರದ ಕಂಚಿನ ಮೂರ್ತಿಯನ್ನು ಸುಂದರ ಮಂಟಪ ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದು.
ಬೈಕ್ ರ್ಯಾಲಿ ಕಾರ್ಯಕ್ರಮದಲ್ಲಿ ಬುದ್ಧಿಯೊಗಾನಂದಾಜಿ, ಉದ್ಯಮಿಗಳಾದ ಕರಮರಿ, ಲೆಕ್ಕ ಪರಿಶೋಧಕರಾದ ಎಸ್ .ಬಿ ಶೆಟ್ಟಿ,ಸ್ವರ್ಣ ಸಮೂಹ ಸಂಸ್ಥೆಯ ವಿ.ಎಸ್.ವಿ ಪ್ರಸಾದ, ಮಲ್ಲಿಕಾರ್ಜುನ ಬಾಳಿಕಾಯಿ, ಪ್ರೀತಂ ಅರಕೇರಿ, ಕಿರಣ್ ಉಪ್ಪಾರ ಹಾಗೂ ವಿವೇಕಾನಂದರ ನೂರಾರು ಭಕ್ತರು ಉಪಸ್ಥಿತರಿದ್ದರು.