ಸ್ವಾಮೀಜಿಗಳ ಸೂಕ್ತ ರಕ್ಷಣೆಗಾಗಿ ಸರ್ಕಾರಕ್ಕೆ ಒತ್ತಾಯ.ಡಾ , ಮಹಾಂತ ಸ್ವಾಮೀಜಿ.       

ಸಂಜೆವಾಣಿ ವಾರ್ತೆ

ಸೊರಬ.ಜು.14; ಸಮಾಜದಲ್ಲಿ  ಮಠಾಧೀಶರ ಋಷಿಮುನಿಗಳ.ಯತಿವರ್ಯರರ ಮೇಲೆ ನಿರಂತರವಾಗಿ ಹಲ್ಲೆ  ಪ್ರಯತ್ನಗಳು ನಡೆಯುತ್ತಿವೆ ಅತಂಹ ಹಲ್ಲೆಕೋರರ ಮೇಲೆ ಸರ್ಕಾರ ನಿರ್ಧಾಕ್ಷೀಣ್ಯವಾಗಿ ಕ್ರಮ ಜರುಗಿಸಿ ಸ್ವಾಮೀಜಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಜಡೆ ಸಂಸ್ಥಾನ ಮಠದ ಡಾ.ಮ.ನಿ.ಪ್ರ.ಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ಮುರುಘಾ ಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಮಠದ ಕಾಮನಂದ ಕುಮಾರ ಸ್ವಾಮಿಯ ಹತ್ಯೆಯನ್ನು ಖಂಡಿಸಿ ಮಾತನಾಡಿದ ಅವರು ವ್ಯವಸ್ಥಿತ ಸಂಚು ರೂಪಿಸಿ ಸ್ವಾಮೀಜಿಯನ್ನು ಹತ್ಯೆ ಮಾಡಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಇದರಿಂದಾಗಿ ಸಾಧು ಸಂತರಿಗೆ, ಸ್ವಾಮೀಜಿ ಗಳಿಗೆ  ಧಾರ್ಮಿಕ ಕ್ಷೇತ್ರದಲ್ಲಿ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಇಂತಹ ಸಮಾಜಘಾತುಕ ಹಲ್ಲೆ ಕೋರರ ವಿರುದ್ಧ ಕ್ರಮ ಜರುಗಿಸಿ ಸ್ವಾಮೀಜಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಇತ್ತೀಚೆಗೆ ನಡೆದ ಜೈನ ಮಠದ ಸ್ವಾಮೀಜಿಯ ಹತ್ಯೆ ಮನುಕುಲಕ್ಕೆ ಆಘಾತವನ್ನು ಉಂಟು ಮಾಡಿದೆ ಮಠಾಧೀಶರು ಹಾಗೂ ನಾಗರಿಕರ ಮೇಲೆ ಕೃತ್ಯದಿಂದ ದುಷ್ಪರಿಣಾಮ ಬೀರಲಿದ್ದು ಅಹಿಂಸವಾದಿಗಳಾದ ಮುನಿಗಳಿಗೆ ಹಾಗೂ ಸಾಧು ಸಂತರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.