ಸ್ವಾಮಿ ವಿವೇಕಾನಂದ ೧೫೮ನೇ ಜಯಂತಿ

ರಾಯಚೂರು.ಜ.೧೨- ಸ್ವಾಮಿ ವಿವೇಕಾನಂದ ಅವರ ೧೫೮ನೇ ಜಯಂತಿಯ ಆಚರಣೆಯನ್ನು ರಾಯಚೂರು ನಗರದ ಶ್ರೀ ಸ್ವಾಮಿ ವಿವೇಕಾನಂದ ಸರ್ಕಲ್ ನಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಸೋಮವಾರಪೇಟೆ ಸ್ವಾಮಿಗಳು ಸ್ವಾಮಿ ವಿವೇಕಾನಂದ ಅವರ ಆದರ್ಶ ಜೀವನ ಇಡೀ ಮಾನವಕುಲಕ್ಕೆ ಮಾದರಿಯಾಗಿದೆ .ಅವರ ವಿಚಾರ ಆದರ್ಶಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕು. ಪ್ರತಿ ವರ್ಷವೂ ಜಯಂತಿ ಕಾರ್ಯಕ್ರಮವು ನಡೆಯುತ್ತದೆ. ಇದು ಸಂತೋಷಕರ ವಿಷಯ ಎಂದು ಹೇಳಿದರು. ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ ನಗರಸಭಾ ಸದಸ್ಯರಾದ ಶಶಿರಾಜ್ ಅವರು ಮುಂದಿನ ವರ್ಷದಲ್ಲಿ ಸ್ವಾಮಿ ವಿವೇಕಾನಂದ ಅವರ ಪುತ್ಥಳಿಯನ್ನು ಸ್ಥಾಪಿಸಲಾಗುವುದು. ಅದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಇನ್ನೊಬ್ಬ ಅತಿಥಿಯಾಗಿರುವ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷರಾಗಿರುವ ಸಮೀರ್ ಅವರು ತಮ್ಮ ಎಲ್ಲಾ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಕಾರ ಮತ್ತು ಬೆಂಬಲ ಇರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಸ್ವಾಮಿ ವಿವೇಕಾನಂದ ಅವರ ಪುತ್ಥಳಿ ಪ್ರತಿಷ್ಠಾನ ಸಮಿತಿ ಅಧ್ಯಕ್ಷರಾದ ವಿಜಯಭಾಸ್ಕರ್ ಇಟಗಿ ಮಾತನಾಡಿದರು. ಸಮಿತಿಯ ಸದಸ್ಯರಾದ ಬಂಡೇಶ, ವಾಸು, ರಮೇಶ್ ಕುಲ್ಕರ್ಣಿ, ಕಡಗೋಲ ರಾಮು, ಯುವರಾಜ್ ಜೈಕುಮಾರ್, ರಾಘವೇಂದ್ರ ಬಂಗಿ, ಮುನಿರೆಡ್ಡಿ, ಶಂಕರ್ ರೆಡ್ಡಿ, ರಾಮು ನಾಯಕ್, ನರಸಪ್ಪ, ಈರಣ್ಣ, ವಿಷ್ಣುವರ್ಧನ್ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.