ಸ್ವಾಮಿ ವಿವೇಕಾನಂದ ಸೇವಾ ಸಂಘದ ವತಿಯಿಂದ ವಿವೇಕಾನಂದ 161ನೇ ಜಯಂತಿ ಆಚರಣೆ

ವಿಜಯಪುರ, ಜ.13:ಇಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರು ತೋರಿದ ಮಾರ್ಗದಲ್ಲಿ ಸಾಗಿದರೆ ಮಾತ್ರ ಭಾರತ ವಿಶ್ವದಲ್ಲೇ ಮಾದರಿ ರಾಷ್ಟ್ರವಾಗಿ ಹೊರ ಹೊಮ್ಮಲು ಸಾಧ್ಯವಾಗುವುದು ಎಂದು ಯುವ ಮುಖಂಡ ಶಿವಶರಣ ಲಾಳಸಂಗಿ ಹೇಳಿದರು.

ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವಶಕ್ತಿ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಸ್ವಾಮಿ ವಿವೇಕಾನಂದರು ಯುª Àಜನಾಂಗ ಆತ್ಮ ವಿಶ್ವಾಸ, ಶ್ರದ್ದೆ, ಧೈರ್ಯ ತುಂಬಿಕೊಂಡು ಸ್ಪೂರ್ತಿಯ ಸೆಲೆಯಾಗಿ ದೇಶದಲ್ಲಿ ಅಭಿವೃದ್ದಿ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕೆಂದು ವಿವೇಕಾನಂದರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಯುವ ಜನಾಂಗ ಶ್ರಮಿಸಬೇಕಿದೆ ಎಂದರು.

ಇಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರು ತೋರಿದ ಮಾರ್ಗದಲ್ಲಿ ಸಾಗಿದರೆ ಮಾತ್ರ ಭಾರತ ದೇಶ ವಿಶ್ವದಲ್ಲೇ ಮಾದರಿ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ ಎಂದು ಬೇರೆ ಹೇಳಬೇಕಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿವಾನಂದ ಲಾಳಸಂಗಿ, ಮುದಕಣ್ಣ ಅವಟಿ, ಅನಿಲ ಒಂಟಿ, ವಿಶ್ವನಾಥ ರೆವೂರ, ಆನಂದ ರಾಠೋಡ, ಶರಣು ಮಾಗಾಂವಿ, ಶಿವರಾಜ ಬಿರಾದಾರ, ಸಿದ್ರಾಮ ಉಪ್ಪಿನ, ಗುರುರಾಜ ಪೂಜಾರಿ, ಮಂಜುನಾಥ ಬಿರಾದಾರ, ಶಶಿಧರ ಮಳ್ಳಿ, ಮಲ್ಲಿಕಾರ್ಜುನ ಶೆಟಗಾರ, ವಿಕ್ರಮ ಸುತಾರ, ಸುನೀಲ ಮೋದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.