ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ

ಹುಬ್ಬಳ್ಳಿ, ಜ 14: ಹು-ಧಾ ಬಿಜೆಪಿ ಪೂರ್ವ ವಿಧಾನಸಭಾ ಕ್ಷೇತ್ರ ಯುವ ಮೋರ್ಚಾ ವತಿಯಿಂದ ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಪೇಮ ಕೇರ ಕ್ಲಿನಿಕ್ ವತಿಯಿಂದ ಹಮ್ಮಿಕೊಳ್ಳಲಾಯಿತು.
ಹು-ಧಾ ಪೂರ್ವ ಮಂಡಲದ ಅಧ್ಯಕ್ಷರಾದ ಪ್ರಭು ನವಲಗುಂದಮಠ ಮಾತನಾಡಿ ಸ್ವಾಮಿ ವಿವೇಕಾನಂದರು ಶಿಕ್ಷಣ ತಜ್ಞರಾಗಿ, ಆಧ್ಯಾತ್ಮಕ ಚಿಂತಕರಾಗಿ ಈ ದೇಶ ಕಂಡ ಅತ್ಯದ್ಭುತ ಮಹಾ ಮೇಧಾವಿಗಳ­ಲ್ಲೊಬ್ಬರು. ಅವರ ಸಂದೇಶ, ಸಿದ್ಧಾಂತ­ಗಳನ್ನು ಯುವಕರು ಅಧ್ಯಯನ ಮಾಡಿ ಸುಭದ್ರ ರಾಷ್ಟ್ರ ನಿರ್ಮಾಣದತ್ತ ಚಿಂತನೆ ನಡೆಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಲಾಲ, ಮಂಡಲದ ಪ್ರಧಾನ ಕಾರ್ಯದರ್ಶಿ ವಿನಯ ಸಜ್ಜನರ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಪ್ರಕಾಶ ಶೃಂಗೇರಿ, ಹುಡಾ ಸದಸ್ಯ ಚಂದ್ರಶೇಖರ್ ಗೋಕಾಕ್, ಸಂತೋಷ ಅರಕೇರಿ, ಅರುಣ ಹುದಲಿ, ಡಾ. ರವೀಂದ್ರ ವಾಯ್, ಡಾ. ಮೃತಂಜಯ, ರಂಗನಾಯಕ ತಪೆಲಾ, ಸಂಗಮ ಹಂಜಿ, ಅನುಪ ಬಿಜವಾಡ, ಪ್ರವೀಣ ಕುಬಸದ, ಹರೀಶ ಹಳ್ಳಿಕೇರಿ, ಹರೀಶ ಸರವಳೇ, ವಿಶ್ವನಾಥ ಚಬ್ಬಿ, ಚೇತನ್ ಹಿರೇಮಠ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.