ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಕಲಬುರಗಿ:ಜ.13:ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಮಗುವಿಗೊಂದು ಮನೆಯಲ್ಲಿ ಗ್ರಂಥಾಲಯ ಕಾರ್ಯಕ್ರಮದ ಅಂಗವಾಗಿ ನಗರದ ಕೆ-2 ಗ್ರಂಥಾಲಯದ ವತಿಯಿಂದ ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ವಿವೇಕಾನಂದ ಜಯಂತಿ ಕಾರ್ಯಕ್ರಮ ಮಂಗಳವಾರ ನಡೆಯಿತು.
ವಸ್ತು ಪ್ರದರ್ಶನದಲ್ಲಿ ನಗರದ ಎಸ್.ಬಿ.ಆರ್., ಎಸ್‍ಆರ್‍ಎನ್ ಮೆಹತಾ, ಚಂದ್ರಕಾಂತ ಪಾಟೀಲ್ ಮೇಮೋರಿಯಲ್ ಸ್ಕೂಲ್, ಶ್ರೀಗುರು ಪಿಯು ಇಂಡಿಪೆಂಡೆಂಟ್ ಕಾಲೇಜ್, ಚಂದ್ರಕಾಂತ ಪಾಟೀಲ್ ಪಿಯು ಕಾಲೇಜ್, ವಾಣಿ ವಿಲಾಸ್ ಪಬ್ಲಿಕ್ ಸ್ಕೂಲ್, ಎಲ್‍ಐಟಿ ಕಾಲೇಜ್, ಆದರ್ಶ ವಿದ್ಯಾಲಯ ಸೇರಿದಂತೆ ಮೊದಲಾದ ಶಾಲಾ-ಕಾಲೇಜುಗಳ ಸುಮಾರು 32ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡದವರು ಭಾಗವಹಿಸಿ, ಭೌತಶಾಸ್ತ್ರ, ಖಗೋಳ ಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ ಸೇರಿದಂತೆ ಕೊರೊನಾ ಜಾಗೃತಿ, ಹನಿ ನೀರಾವರಿ, ಕೊರೊನ ವೈರಸ್ ಸೇರಿದಂತೆ ಮೊದಲಾದ ವಿಷಯಗಳ ಬಗ್ಗೆ ವಸ್ತು ಪ್ರದರ್ಶನದೊಂದಿಗೆ ವಿವರವಾದ ಮಾಹಿತಿ ನೀಡಿ ಪಾಲಕರಿಂದ ಮೆಚ್ಚುಗೆ ಪಡೆದರು. ನಿರ್ಣಾಯಕರಾಗಿ ಉಪನ್ಯಾಸಕರಾದ ಡಾ.ಓಂನಾಥ ಅಶೋಕ ಪಾಟೀಲ್, ಶಿವಕುಮಾರ್ ಯರಗೋಳ್ ಆಗಮಿಸಿದ್ದರು.
ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದ ಐಶ್ವರ್ಯ ಜನಕಟ್ಟೆ, ಅಕ್ಷತಾ ಪುರಾಣಿಕ, ನಿರಂಜನ್ ಬಣಗಾರ್, ಮುಖೇಶ ಮತ್ತು ಆದಿತ್ಯ, ದ್ವೀತಿಯ ಬಹುಮಾನ ಪಡೆದ ಭಾಗ್ಯಶ್ರೀ ಭೀಮಾಶಂಕರ್, ಸೃಷ್ಠಿ ಮಠಪತಿ, ಶ್ರೀಲಕ್ಷ್ಮೀ ಬಸವರಾಜ್, ತೃತಿಯ ಬಹುಮಾನ ಪಡೆದ ವೈಷ್ಟವಿ, ಅನನ್ಯ, ನಿಷಾರಾಣಿ ಸೇರಿದಂತೆ ಮೊದಲಾದವರಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು. ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಪಿಎಚ್‍ಡಿ ಪಡೆದ ಓಂನಾಥ ಅಶೋಕ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರ ಡಾ.ಸಂತೋಷ ತೀರ್ಥೆ, ಕೆ-2 ಗ್ರಂಥಾಲಯದ ಸಂಸ್ಥಾಪಕ ಸಂಚಾಲಕ ಕೃಷ್ಣ ರಾಮಚಂದ್ರ ಶಿವಮೂರ್ತಿ ಅವರು ಉಪಸ್ಥಿತರಿದ್ದರು.